ಏಪ್ರಿಲ್‌ ಅಂತ್ಯದ ವೇಳೆಗೆ ಈ ಪ್ರದೇಶಗಳಲ್ಲಿ ಒಲಾ ಸೇವೆ ಅಂತ್ಯ, ಕಂಪನಿಯ ಬಿಗ್‌ ನಿರ್ಧಾರಕ್ಕೆ ಕಾರಣವೇನು?

ಭಾರತದಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸಿದ ಕಂಪನಿಯು ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಮತ್ತು ಯುನೈಟೆಡ್ ಕಿಂಗ್‌ಡಮ್ ಸೇರಿದಂತೆ ಇತರ ದೇಶಗಳಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಣೆ ಮಾಡಿತ್ತು.
 

Report says Ola Cabs To Exit International Markets By April End san

ನವದೆಹಲಿ (ಏ.9): ಭಾರತದ ಪ್ರಖ್ಯಾತ ಕ್ಯಾಬ್‌ ಅಗ್ರಿಗೇಟರ್‌ ಕಂಪನಿಯಾಗಿರುವ ಓಲಾ ಕ್ಯಾಬ್ಸ್‌ ಈ ತಿಂಗಳ ಅಂತ್ಯದ ವೇಳೆಗೆ ವಿದೇಶಗಳಲ್ಲಿ ತನ್ನ ಸೇವೆಯನ್ನು ಅಂತ್ಯಗೊಳಿಸಲಿದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ಭಾರತದಲ್ಲಿ ತನ್ನ ಕಾರ್ಯಾಚರಣೆ ಆರಂಭ ಮಾಡಿದ ಬಳಿಕ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿದ್ದ ಓಲಾ ಕ್ಯಾಬ್ಸ್‌ ಬಳಿಕ ಆಸ್ಟ್ರೇಲಿಯಾ, ನ್ಯೂಜಿಲಂಡ್‌ ಹಾಗೂ ಯುನೈಟೆಡ್‌ ಕಿಂಗ್‌ಡಮ್‌ಗಳನ್ನೂ ಸೇವೆ ನೀಡಲು ಆರಂಭಿಸಿತ್ತು. ಈ ಕುರಿತಾದ ನೋಟಿಫಿಕೇಶನ್‌ಗಳನ್ನು ಈಗಾಗಲೇ ಓಲಾ ಕಂಪನಿಯು ತನ್ನ ಯೂಸರ್‌ಗಳಿಗೆ ಕಳಿಸಲು ಆರಂಭಿಸಿದೆ. ಏಪ್ರಿಲ್‌ 12 ರಿಂದ ಓಲಾ ಕ್ಯಾಬ್ಸ್‌ ಆಸ್ಟ್ರೇಲಿಯಾದಲ್ಲಿ ತನ್ನ ಸೇವೆಗಳನ್ನು ಸ್ಥಗಿತ ಮಾಡಲಿದೆ. ಈ ನಿರ್ಧಾರವು ಭಾರತದಲ್ಲಿ ತಮ್ಮ ಕಾರ್ಯಚಟುವಟಿಕೆಗಳನ್ನು ಸುಧಾರಿಸಲು ಮತ್ತು ಮುಂಬರುವ ಐಪಿಓಗೆ ಸಿದ್ಧತೆ ನಡೆಸುವ ನಿಟ್ಟಿನಲ್ಲಿ ಕಾರ್ಯತಂತ್ರದ ಭಾಗವಾಗಿದೆ ಎಂದೂ ತಿಳಿಸಲಾಗಿದೆ.

ಇನ್ನು ವಿದೇಶದ ಮಾರುಕಟ್ಟೆಗಳಲ್ಲಿ ಸೇವೆಯನ್ನು ಸ್ಥಗಿತಕೊಳಿಸಲು ಓಲಾ ಕ್ಯಾಬ್ಸ್‌ ಎರಡು ಪ್ರಮುಖ ಕಾರಣವನ್ನು ನೀಡಿದೆ. ಭಾರತದಲ್ಲಿ ಎಲೆಕ್ಟ್ರಿಕ್‌ ವೆಹಿಕಲ್‌ಗಳ ವಿಭಾಗದಲ್ಲಿ ದೊಡ್ಡ ಅವಕಾಶ ಸೃಷ್ಟಿಯಾಗುತ್ತಿರುವುದು ಕಂಡಿದೆ. ರೈಡ್‌ ಹೈಲಿಂಗ್‌ನಲ್ಲೂ ಎಲೆಕ್ಟ್ರಿಕ್‌ ವಾಹನಗಳ ಬಳಕೆ ವ್ಯಾಪಕವಾಗುತ್ತಿದೆ. ಹಾಗಾಗಿ ಕಂಪನಿಯ ಹೆಚ್ಚಿನ ಸಂಪನ್ಮೂಲಗಳನ್ನು ಭಾರತದಲ್ಲಿಯೇ ವಿನಿಯೋಗಿಸುವ ಯೋಜನೆ ರೂಪಿಸಿದೆ.

ಅದರೊಂದಿಗೆ ಒಲಾ ಕ್ಯಾಬ್ಸ್‌ ವಿದೇಶದಲ್ಲಿ ತನ್ನ ಕಾರ್ಯಾಚರಣೆ ಆರಂಭಿಸಿದ್ದರೂ, ಭಾರತವೇ ಕಂಪನಿಗೆ ದೊಡ್ಡ ಮಾರ್ಕೆಟ್‌. ಆದರೆ, ಅಮೆರಿಕದ ದೈತ್ಯ ಉಬರ್‌, ಮೇರು, ಬೆಂಗಳೂರಿನಲ್ಲಿ ನಮ್ಮ ಯಾತ್ರಿ ಸೇರಿದಂತೆ ವಿವಿಧ ಆಪ್‌ಗಳು ಸ್ಪರ್ಧೆ ನೀಡುತ್ತಿದೆ. ಭಾರತದ ಮಾರುಕಟ್ಟೆ ಇನ್ನಷ್ಟು ಕ್ಯಾಬ್‌ ಅಗ್ರಿಗೇಟರ್‌ಗೆ ವೇದಿಕೆ ಕಲ್ಪಿಸುವ ಅವಕಾಶವನ್ನೂ ಹೊಂದಿದೆ. ಸಣ್ಣಪುಟ್ಟ ಕ್ಯಾಬ್‌ ಅಗ್ರಿಗೇಟರ್‌ಗಳಾದ ಟ್ಯಾಕ್ಸಿಫಾರ್‌ಶ್ಯುರ್‌, ಮೇರಿ ಆಗೂ ರಷ್ಯಾ ಮೂಲದ ಇನ್‌ ಡ್ರೈವ್ ತನ್ನ ಮಾರುಕಟ್ಟೆ ಪ್ರಾಬಲ್ಯವನ್ನು ಸಾಧಿಸುತ್ತಿದೆ. ಹಾಗಾಗಿ ಭಾರತದಲ್ಲಿ ತನ್ನ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಇರಾದೆಯಲ್ಲಿ ಓಲಾ ಕ್ಯಾಬ್ಸ್‌ ಇದೆ. ನಾಲ್ಕು-ಚಕ್ರ ವಾಹನಗಳಿಗೆ ಸೀಮಿತವಾಗಿದ್ದ ಸೇವೆಗಳು ಇಂದು ಆಟೋ-ರಿಕ್ಷಾ ಮತ್ತು ದ್ವಿಚಕ್ರ ವಾಹನಗಳನ್ನು ಒಳಗೊಂಡಿರುವುದರಿಂದ, ವಿವಿಧ ವಿಭಾಗಗಳು ಮತ್ತು ಅವುಗಳ ಅಗತ್ಯಗಳಿಗೆ ಅನುಗುಣವಾಗಿ ಮಾರುಕಟ್ಟೆಯು ಸ್ಪರ್ಧಾತ್ಮಕ ಮತ್ತು ವಿಸ್ತಾರವಾಗಿದೆ.

ಒಲಾ ಜೊತೆ ಐಆರ್‌ಸಿಟಿಸಿ ಒಪ್ಪಂದ, ರೈಲ್ವೇಸ್‌ ಆ್ಯಪ್‌ನಿಂದಲೇ ಪ್ರಯಾಣಿಕರು ಕ್ಯಾಬ್‌ ಬುಕ್‌ ಮಾಡ್ಬಹುದು!

ಇತ್ತೀಚೆಗೆ ಲಾಭದಾಯಕವಾಗಿ ಹೊರಹೊಮ್ಮಿದ ಕಂಪನಿಯು 2022-23ರಲ್ಲಿ ಒಟ್ಟು ರೂ 2,135 ಆದಾಯವನ್ನು ಗಳಿಸಿದೆ. ಈ ಎಲ್ಲಾ ಸಮಯದಲ್ಲಿ ಅದು ತನ್ನ ನಷ್ಟವನ್ನು ಸಹ ಕಡಿಮೆಗೊಳಿಸಿತು. ಇನ್ನೊಂದೆಡೆ, ಓಲಾದ ಮಾತೃ ಕಂಪನಿ ಎಎನ್‌ಐ ಟೆಕ್ನಾಲಜೀಸ್ ಇತರ ಮಾರ್ಗಗಳಲ್ಲಿ ತೊಡಗಿದೆ, ಅವುಗಳೆಂದರೆ ಅದರ ಎಲೆಕ್ಟ್ರಿಕ್ ಸ್ಕೂಟರ್ ವ್ಯಾಪಾರ. ಕಂಪನಿ ಮತ್ತು ಅದರ ನಾಯಕತ್ವವು ಸುಧಾರಿತ ತಂತ್ರಜ್ಞಾನದಲ್ಲಿ ತನ್ನ ನಂಬಿಕೆಯನ್ನು ಹೆಚ್ಚಾಗಿ ತೋರಿಸಿದೆ. ಆದ್ದರಿಂದ, ಸ್ಕೂಟರ್‌ಗಳ ಜೊತೆಗೆ, ಭವೀಷ್‌ ಅಗರ್ವಾಲ್‌ ನೇತೃತ್ವದ ಕಂಪನಿಯು ಭವಿಷ್ಯಕ್ಕಾಗಿ ತಂತ್ರಜ್ಞಾನದಲ್ಲಿ ತೊಡಗಿಸಿಕೊಂಡಿದೆ, ತಮ್ಮದೇ ಆದ ಚಾಟ್‌ಬಾಟ್ ಆಗಿರುವ ಕ್ರುಟ್ರಿಮ್‌ನೊಂದಿಗೆ AI ಬ್ಯಾಂಡ್‌ವ್ಯಾಗನ್‌ಗೆ ಜಿಗಿಯುತ್ತಿದೆ. ಆ ಮೂಲಕ ಗೂಗಲ್‌ ಮತ್ತು ಓಪನ್‌ ಎಐ ನಂಥ ಕಂಪನಿಗಳನ್ನು ಎದುರುಹಾಕಿಕೊಳ್ಳಲು ಪ್ರಯತ್ನಿಸುತ್ತಿದೆ.

ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಪುನರಾರಂಭಿಸಿದ ಓಲಾ;ತಮ್ಮದೇ ಇ- ಸ್ಕೂಟರ್ ಬಳಕೆ ಬಗ್ಗೆ ಮಾಹಿತಿ ನೀಡಿದ ಸಿಇಒ

Latest Videos
Follow Us:
Download App:
  • android
  • ios