ನವದೆಹಲಿ(ನ.06): 2020ರಲ್ಲಿ ಭಾರತೀಯರ ವೇತನದಲ್ಲಿ ಸರಾಸರಿ ಶೇ.10ರಷ್ಟು ಹೆಚ್ಚಳವಾಗಲಿದೆ ಎಂದು ಪ್ರಮುಖ ಜಾಗತಿಕ ಸಲಹಾ ಸಂಸ್ಥೆ ವಿಲ್ಲೀಸ್ ಟವರ್ಸ್ ವ್ಯಾಟ್ಸನ್ ವೇತನ ಬಜೆಟ್ ವರದಿ ಅಭಿಪ್ರಾಯಪಟ್ಟಿದೆ.

2019ರಲ್ಲಿ ವೇತನದಲ್ಲಿ ಸರಾಸರಿ ಶೇ.9.9ರಷ್ಟು ಏರಿಕೆ ಕಾಣುವ ಅಂದಾಜಿತ್ತು. ಅದರಂತೆ 2020ರಲ್ಲಿ ಶೇ.10ರಷ್ಟು ಹೆಚ್ಚಳವಾಗುವ ಅಂದಾಜಿದೆ ಎಂದು ವಿಲ್ಲೀಸ್ ಟವರ್ಸ್ ವ್ಯಾಟ್ಸನ್ ವೇತನ ಬಜೆಟ್ ವರದಿ ಹೇಳಿದೆ.

ಸರ್ಕಾರಿ ನೌಕರರಿಗೆ ಕೇಂದ್ರದಿಂದ ದೀಪಾವಳಿ ಬಂಪರ್ ಗಿಫ್ಟ್‌!

ಈ ಪ್ರಮಾಣದ ವೇತನ ಏರಿಕೆಯಿಂದಾಗಿ ಏಶಿಯಾ ಪೆಸಿಫಿಕ್ ಭಾಗದಲ್ಲಿ ಅತ್ಯಂತ ಹೆಚ್ಚಿನ ವೇತನ ಹೊಂದಿರುವ ರಾಷ್ಟ್ರವಾಗಿ ಭಾರತ ಹೊರಹೊಮ್ಮಲಿದೆ ಎಂದು ವರದಿ ಉಲ್ಲೇಖಿಸಿದೆ.

ಭಾರತ ಸರ್ಕಾರ ಕೈಗೊಂಡಿರುವ ಸುಧಾರಣಾ ಕ್ರಮಗಳು ಹಾಗೂ ಜಾಗತಿಕ ಆರ್ಥಿಕ ಬದಲಾವಣೆಗಳ ಪರಿಣಾಮವಾಗಿ ವೇತನ ಹೆಚ್ಚಳ ಪ್ರಕ್ರಿಯೆ ಸರಾಗವಾಗಿ ನಡಯಲಿದೆ ಎಂಬುದು ವಿಲ್ಲೀಸ್ ಟವರ್ಸ್ ವ್ಯಾಟ್ಸನ್ ವೇತನ ಬಜೆಟ್ ವರದಿ ಅಭಿಪ್ರಾಯಪಟ್ಟಿದೆ.

ತಿಂಗಳ ಸಂಬಳ ಎಣಿಸುವವರಿಗೆ ಗುಡ್ ನ್ಯೂಸ್ ಕೊಟ್ಟ ಹೈಕೋರ್ಟ್!

 ವಿಲ್ಲೀಸ್ ಟವರ್ಸ್ ವ್ಯಾಟ್ಸನ್ ವೇತನ ಬಜೆಟ್ ವರದಿಯನ್ವಯ ಶೇಕಡಾವಾರು ವೇತನ ಹೆಚ್ಚಳವಾಗುವ ರಾಷ್ಟ್ರಗಳ ಪಟ್ಟಿ ಇಲ್ಲಿದೆ.

ಭಾರತ-ಶೇ.10
ಇಂಡೋನೇಷಿಯಾ-ಶೇ.08
ಚೀನಾ-ಶೇ.6.5
ಫಿಲಿಪೈನ್ಸ್-ಶೇ.06
ಹಾಂಕಾಂಗ್-ಶೇ.04
ಸಿಂಗಾಪುರ್-ಶೇ.04