ಚಮೋಲಿ[ಮೇ. 26]  ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಶನಿವಾರ ಬದ್ರಿನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.ಭೇಟಿ ವೇಳೆ ಶ್ರೀಗಂಧ ಮತ್ತು ಕೇಸರಿ ಖರೀದಿಗಾಗಿ 2 ಕೋಟಿ ರೂ. ಕಾಣಿಕೆ ಅರ್ಪಿಸಿದ್ದಾರೆ.

ದೇವಸ್ಥಾನಕ್ಕೆ ಆಗಮಿಸಿದ ಅಂಬಾನಿ ಅವರನ್ನು ಬದ್ರಿನಾಥ ಕೇದಾರನಾಥ ದೇವಸ್ಥಾನ ಸಮಿತಿ (ಬಿಕೆಟಿಸಿ)ಯ ಕಾರ್ಯನಿರ್ವಹಕ ಅಧಿಕಾರಿ ಮೊದಲು ಬರಮಾಡಿಕೊಂಡರು. ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರಾರ್ಥನೆ ಸಲ್ಲಿಸಿದರು.

ದೇವಸ್ಥಾನದ ಪೂಜೆಗೆ ಬೇಕಾಗುವ ಶ್ರೀಗಂಧ ಪೂರೈಸಲು ತಮ್ಮ ತಂದೆ ಧೀರೂಭಾಯಿ ಅಂಬಾನಿ ಹೆಸರಲ್ಲಿ ತಮಿಳುನಾಡಿನ ಶ್ರೀಗಂಧ ಅರಣ್ಯದಲ್ಲಿ ಭೂಮಿ ಖರೀದಿಸಿ ನೀಡುತ್ತೇನೆ ಎಂಬ ಭರವಸೆಯನ್ನು ಇದೇ ವೇಳೆ ಅಂಬಾನಿ ನೀಡಿದರು.

ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸಹ ದೇವಾಲಯಕ್ಕೆ ಭೇಟಿ ನೀಡಿದ್ದರು. ಮೇ. 10 ರಿಂದ ಬದ್ರಿನಾಥ ದೇವಾಲಯ ಪ್ರವಾಸಿಗರ ದರ್ಶನಕ್ಕೆ ತೆರೆದುಕೊಂಡಿದೆ.