ಆಯುಧ ಪೂಜೆಗೆ ಜಿಯೋ ಧಮಾಕ, ಪ್ರತಿ ದಿನ 2.5 ಜಿಬಿ, ಅನ್‌ಲಿಮಿಟೆಡ್ ಕಾಲ್, 1 ವರ್ಷ ವ್ಯಾಲಿಟಿಡಿ!

ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಇಂದು ಆಯುಧ ಪೂಜೆ. ಇದೇ ದಿನ ರಿಲಯನ್ಸ್ ಜಿಯೋ ಧಮಾಕ ಆಫರ್ ಘೋಷಿಸಿದೆ. ಇದು 1 ವರ್ಷ ನಿಶ್ಚಿಂತೆ ಬಯಸುವ ಗ್ರಾಹಕರಿಗೆ ಅತ್ಯುತ್ತಮ ಪ್ಲಾನ್. ಪ್ರತಿ ದಿನ 2.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ 100 ಎಸ್ಎಂಎಸ್ ಸೇರಿದಂತೆ ಹಲವು ಆಫರ್ ಈ ಪ್ಲಾನ್‌ನಲ್ಲಿ ಲಭ್ಯವಿದೆ.

Reliance jio offer on festival 1 year validity unlimited call with 912GB free data ckm

ನವದೆಹಲಿ(ಅ.11) ದಸರಾ ಹಬ್ಬದ ವಿಶೇಷ ಸಂದರ್ಭದಲ್ಲಿ ಹಲವು ಕಂಪನಿಗಳು ಬಿಗ್ ಆಫರ್ ನೀಡುತ್ತಿದೆ. ಇದಕ್ಕೆ ರಿಲಯನ್ಸ್ ಜಿಯೋ ಕೂಡ ಹೊರತಾಗಿಲ್ಲ. ಈಗಾಗಲೇ ರಿಲಯನ್ಸ್ ಜಿಯೋ ಹಲವು ಹಬ್ಬದ ಆಫರ್ ಲಭ್ಯವಿದೆ. ಅತೀ ಕಡಿಮೆ ಬೆಲೆಯ, 5ಜಿ ಡೇಟಾ ಸೇರಿದಂತೆ ಹಲವು ಆಫರ್ ಲಭ್ಯವಿದೆ. ಇತ್ತೀಚೆಗೆ ಫ್ರೀ ಒಟಿಟಿ ಪ್ಲಾಟ್‌ಫಾರ್ಮ್ ಕೂಡ ಲಭ್ಯವಿದೆ. ಇದೀಗ ಆಯುಧ ಪೂಜೆ ದಿನ ಜಿಯೋ ಧಮಾಕ ಆಫರ್ ಘೋಷಿಸಿದೆ. ಇದು ಒಂದು ವರ್ಷ ವ್ಯಾಲಿಟಿಡಿ ಪ್ಲಾನ್. ಬರೋಬ್ಬರಿ 365 ದಿನ ನಿಮಗೆ ಒಟ್ಟು 912.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, ಪ್ರತಿ ದಿನ 100 ಎಸ್‌ಎಂಎಸ್ ಸೇರಿದಂತೆ ಹಲವು ಸೌಲಭ್ಯ ಈ ರಿಚಾರ್ಜ್ ಪ್ಲಾನ್‌ನಲ್ಲಿದೆ. 

1 ವರ್ಷದ ನಡುವೆ ಯಾವುದೇ ರೀಚಾರ್ಜ್ ಮಾಡುವ ಕಿರಿಕಿರಿ ಇರುವುದಿಲ್ಲ. ಸಂಪೂರ್ಣ 5ಜಿ ನೆಟ್‌ವರ್ಕ್ ಲಭ್ಯವಿರಲಿದೆ. ಒಟ್ಟು 912.5 ಜಿಬಿ ಅಂದರೆ ಪ್ರತಿ ದಿನ 2.5 ಜಿಬಿ ಡೇಟಾ ಉಚಿತವಾಗಿ ಸಿಗಲಿದೆ. 1 ವರ್ಷದ ಈ ಪ್ಲಾನ್ ರಿಚಾರ್ಜ್ ಬೆಲೆ 3599 ರೂಪಾಯಿ. ಒಂದೇ ನೋಟಕ್ಕೆ ಇದು ದುಬಾರಿ ಅನಿಸಿಕೊಳ್ಳುವುದು ಸಹಜ. ಆದರೆ ತಿಂಗಳ ಲೆಕ್ಕಾಚಾರದಲ್ಲಿ ಇದರ ಬೆಲೆ ಸರಿಸುಮಾರು 300 ರೂಪಾಯಿ. ಸದ್ಯ ಜಿಯೋ, ಏರ್‌ಟೆಲ್, ವಿಐ ಟೆಲಿಕಾಂ ಆಪರೇಟರ್ ಸರ್ವೀಸ್‌ಗಳಲ್ಲಿ ತಿಂಗಳಿಗೆ 300 ರೂಪಾಯಿಗೆ 2.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್ ಸೇರಿದಂತೆ ಹಲವು ಆಫರ್ ಲಭ್ಯವಿಲ್ಲ.

ಅಂಬಾನಿ ನಿದ್ದೆಗೆಡಿಸಿದ ವಿಐ: 175 ರೂ ರಿಚಾರ್ಜ್‌ಗೆ ಉಚಿತ 10 ಜಿಬಿ ಡೇಟಾ, 15 ಒಟಿಟಿ ಪ್ಲಾಟ್‌ಫಾರ್ಮ್!

ವರ್ಷದ ಪ್ಲಾನ್ ಆಯ್ಕೆ ಮಾಡಿಕೊಂಡರೆ ಡೇಟಾ, ಕಾಲ್ ಮಾತ್ರವಲ್ಲ, ಬಳಕೆದಾರನಿಗೆ ಜಿಯೋ ಸಿನಿಮಾ, ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ಸಬ್‌ಸ್ಕ್ರಿಪ್ಶನ್‌ ಕೂಡ ಲಭ್ಯವಾಗಲಿದೆ. ಇದರಿಂದ ಜಿಯೋ ಬಳಕೆದಾರರು ಒಂದು ವರ್ಷ ಯಾವುದೇ ಆತಂಕವಿಲ್ಲದೆ ಕಳೆಯಬಹುದು.

ಇತ್ತೀಚೆಗೆ ಜಿಯೋ ಸೆಕ್ಪ್ರಮ್ ಹಂಚಿಕೆ ಕುರಿತು ಸಮಾಲೋಚನೆ ಪರಿಷ್ಕರಣೆಗೊಲಿಸಲು ಜಿಯೋ ಒತ್ತಾಯಿಸಿದೆ. ಕಾರಣ ಉಪಗ್ರಹ ಹಾಗೂ ಭೂ ಟೆಲಿಕಾಂ ಸೇವೆಗಳ ನಡುವೆ ಸಮಾನ ಅವಕಾಶವನ್ನು ಖಾತರಿಪಡಿಸುವ ಪ್ರಮುಖ ಅಂಶಗಳನ್ನು ವರದಿಯಲ್ಲಿ ನಿರ್ಲಕ್ಷಿಸಲಾಗಿದೆ ಎಂದು ಜಿಯೋ ಆರೋಪಿಸಿದೆ. ಹೀಗಾಗಿ ಟ್ರಾಯ್‌ಗೆ ಸಮಮಾಲೋಚನೆ ಪರಿಷ್ಕೃತಗೊಳಿಸುವಂತೆ ಆಗ್ರಹಿಸಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಟ್ರಾಯ್ ಭಾರತದಲ್ಲಿ ಕಾಲ್, ಎಸ್ಎಂಎಸ್, ಬ್ರಾಡ್‌ಬ್ಯಾಂಡ್ ಮತ್ತು ಇತರ ಸೇವೆಗಳನ್ನು ಒದಗಿಸಲು ಉಪಗ್ರಹ ಕಂಪನಿಗಳಿಗೆ ಸ್ಪೆಕ್ಟ್ರಮ್ ನಿಯೋಜಿಸುವ ವಿಧಾನ ಮತ್ತು ಬೆಲೆಯನ್ನು ಅನ್ವೇಷಿಸಲು ಸಮಾಲೋಚನಾ ಪ್ರಕ್ರಿಯೆಯನ್ನು ಆರಂಭಿಸಿತ್ತು. ಸ್ಪೆಕ್ಟ್ರಮ್ ಬೆಲೆ ಮತ್ತು ಹಂಚಿಕೆ ವಿಧಾನದ ನಿರ್ಧಾರವು ಎಲಾನ್ ಮಸ್ಕ್ ಒಡೆತನದ ಸ್ಟಾರ್‌ಲಿಂಕ್, ಭಾರ್ತಿ ಗ್ರೂಪ್ ಬೆಂಬಲಿತ ಒನ್‌ವೆಬ್ ಮತ್ತು ಜಿಯೋ ಸ್ಯಾಟಲೈಟ್ ಕಮ್ಯುನಿಕೇಷನ್‌ನಂತಹ ಕಂಪನಿಗಳಿಂದ ಉಪಗ್ರಹ ಆಧಾರಿತ ಬ್ರಾಡ್‌ಬ್ಯಾಂಡ್ ಸೇವೆಗಳಿಗೆ ಭಾರತದಾದ್ಯಂತ ದಾರಿ ಮಾಡಿಕೊಡುತ್ತದೆ. 

BSNL ಘೋಷಣೆಗೆ ಬೆಚ್ಚಿದ ಅಂಬಾನಿ, ಕರ್ನಾಟಕದ ಕಂಪನಿ ಜೊತೆ ಸೇರಿ ಸ್ಮಾರ್ಟ್‌ಫೋನ್ ಉತ್ಪಾದನೆ!

Latest Videos
Follow Us:
Download App:
  • android
  • ios