ಟೆಲಿಕಾಂ ಕ್ಷೇತ್ರದಲ್ಲಿ ಕ್ರಾಂತಿ ಬರೆದ ಜಿಯೋ, ಚೀನಾ ಸೇರಿ ಹಲವರ ಹಿಂದಿಕ್ಕಿ ವಿಶ್ವದ ನಂಬರ್ 1

ಟೆಲಿಕಾಂ ಕ್ಷೇತ್ರದಲ್ಲಿ ಜಿಯೋ ಮಾಡಿದ ಕ್ರಾಂತಿಗೆ ಪ್ರತಿಸ್ಪರ್ಧಿಗಳೇ ದಂಗಾಗಿದ್ದಾರೆ. ಭಾರತ ಮಾತ್ರವಲ್ಲ ವಿಶ್ವದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಂಚಲನ ಸೃಷ್ಟಿಸಿದೆ.ಬಳಕೆದಾರರಿಗೆ ಬಂಪರ್ ಕಾಲಾ ಶುರುವಾಗಿದೆ. ಅಷ್ಟಕ್ಕೂ ಜಿಯೋಗೆ ವಿಶ್ವ ನಂ.1 ಪಟ್ಟ ಸಿಕ್ಕಿದ್ದು ಯಾಕೆ?

Reliance jio become world number 1 in data usage traffic says global study

ಮುಂಬೈ(ಅ.31) ಭಾರತದಲ್ಲಿ 5ಜಿ ನೆಟ್‌ವರ್ಕ್ ಜಾರಿಯಾಗುತ್ತಿದ್ದಂತೆ ಟೆಲಿಕಾಂ ಕ್ಷೇತ್ರದಲ್ಲಿ ಹಲವು ಬದಲಾವಣೆಯಾಗಿದೆ. ಡೇಟಾ ಬಳಕೆ, ನೆಟ್‌ವರ್ಕ್ ವಿಚಾರದಲ್ಲಿ ಭಾರತ ಬಲಿಷ್ಠಗೊಳ್ಳುತ್ತಿದೆ. ಇದೀಗ ಜಾಗತಿಕ ಟೆಲಿಕಾಂ ವಲಯದ ಸಂಶೋಧನಾ ಕಂಪನಿಯಾದ ಟಿಫೀಶಿಯಂಟ್ ಮಹತ್ವದ ವರದಿಯೊಂದನನ್ನು ಬಿಡುಗಡೆ ಮಾಡಿದೆ. ಈ ವರದಿಯಲ್ಲಿ  ಡೇಟಾ ವಿಷಯದಲ್ಲಿ ರಿಲಯನ್ಸ್ ಜಿಯೋ ವಿಶ್ವದ ಅತಿದೊಡ್ಡ ನೆಟ್‌ವರ್ಕ್ ಆಗಿದೆ ಎಂದಿದೆ. 2024 ರಲ್ಲಿ ಜನವರಿಯಿಂದ ಸೆಪ್ಟೆಂಬರ್ ತನಕದ ಮೊದಲ ಮೂರು ತ್ರೈಮಾಸಿಕಗಳ ಡೇಟಾ ಬಳಕೆಯಲ್ಲಿ ರಿಲಯನ್ಸ್ ಜಿಯೋ ಚೀನಾದ ಕಂಪನಿಯಾದ ಚೀನಾ ಮೊಬೈಲ್‌ಗಿಂತ ಮುಂದಿದೆ.  ಜಿಯೋ,  ಚೀನಾ ಮೊಬೈಲ್ ನಂತರ ಚೀನಾದ ಮತ್ತೊಂದು ಕಂಪನಿ ಚೀನಾ ಟೆಲಿಕಾಂ ಡೇಟಾ ದಟ್ಟಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದರೆ, ಭಾರತೀಯ ಕಂಪನಿ ಏರ್‌ಟೆಲ್ ನಾಲ್ಕನೇ ಸ್ಥಾನದಲ್ಲಿದೆ. ವೊಡಾ ಐಡಿಯಾ ಆರನೇ ಸ್ಥಾನ ಪಡೆದಿದೆ.

ಭಾರತದಲ್ಲಿ ಜಿಯೋ ಡೇಟಾ ಬಳಕೆಯಲ್ಲಿ ಮಹತ್ವದ ಸಂಚಲನ ಸೃಷ್ಟಿಸಿದೆ. ಡೇಟಾ ಸ್ಪೀಡ್, ಡೌನ್ಲೋಡ್ ವೇಗದಲ್ಲೂ ಜಿಯೋ ಮುಂದಿದೆ. ಇದೀಗ ಡೇಟಾ ಬಳಕೆಯಲ್ಲೂ ಜಿಯೋ ಅಗ್ರಸ್ಥಾನ ಪಡೆದುಕೊಂಡಿದೆ. ಚೈನೀಸ್ ಕಂಪನಿ ಚೀನಾ ಮೊಬೈಲ್ ತನ್ನ ಹವಾ ಕಳೆದುಕೊಂಡಂತೆ ಕಾಣುತ್ತಿದೆ ಎಂದು ಟಿಫೀಶಿಯಂಟ್ ತನ್ನ ಟ್ವೀಟ್‌ನಲ್ಲಿ ತಿಳಿಸಿದೆ. ಚೀನಾ ಮೊಬೈಲ್ ಕೇವಲ ಶೇ 2ರ ವಾರ್ಷಿಕ ಬೆಳವಣಿಗೆಯನ್ನು ಕಂಡಿದೆ. ಆದರೆ ಜಿಯೋ ಮತ್ತು ಚೀನಾ ಟೆಲಿಕಾಂ ಸುಮಾರು ಶೇ 24 ಮತ್ತು ಏರ್ ಟೆಲ್ ಶೇ 23ರಷ್ಟು ಬೆಳವಣಿಗೆಯನ್ನು ಕಂಡಿದೆ. 5ಜಿ ನೆಟ್‌ವರ್ಕ್‌ಗಳ ಪ್ರಬಲವಾದ ಉಪಸ್ಥಿತಿಯಿಂದಾಗಿ ಭಾರತೀಯ ಕಂಪನಿಗಳಲ್ಲಿ ಡೇಟಾ ದಟ್ಟಣೆಯ ಹೆಚ್ಚಳಕ್ಕೆ ಕಾರಣವಾಗಿದೆ. ಅದೇ ವೇಳೆ 5ಜಿ ಚೀನಾದ ಡೇಟಾ ದಟ್ಟಣೆಯ ಮೇಲೆ ಭಾರತದಷ್ಟು ಪ್ರಭಾವ ಬೀರಲು ಸಾಧ್ಯವಾಗಿಲ್ಲ ಎಂದು ಟಿಫೀಶಿಯಂಟ್ ತಿಳಿಸಿದೆ.

ಹಲವರಿಗೆ ದೀಪಾವಳಿ ಗಿಫ್ಟ್ ನೀಡಿದ ಮುಕೇಶ್ ಅಂಬಾನಿಗೆ RBIನಿಂದ ಬಂತು ಅತೀ ದೊಡ್ಡ ಉಡುಗೊರೆ!

5ಜಿ ಹಾಗೂ ಹೋಮ್ ಬ್ರಾಡ್‌ಬ್ಯಾಂಡ್‌ಗೆ ಪ್ರಬಲವಾದ ಬೇಡಿಕೆಯು ಜಿಯೋ ವಿಶ್ವದ ಡೇಟಾ ಟ್ರಾಫಿಕ್‌ನಲ್ಲಿ ನಂಬರ್ ಒನ್ ಆಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಕಳೆದ ಮೂರು ವರ್ಷಗಳಲ್ಲಿ ಜಿಯೋ ನೆಟ್‌ವರ್ಕ್‌ನಲ್ಲಿ ಡೇಟಾ ದಟ್ಟಣೆ ಬಹುತೇಕ ದ್ವಿಗುಣಗೊಂಡಿದೆ. ಸುಮಾರು 14 ಕೋಟಿ 80 ಲಕ್ಷ ಗ್ರಾಹಕರು ಜಿಯೋ 5ಜಿ ನೆಟ್‌ವರ್ಕ್‌ಗೆ ಸೇರಿದ್ದಾರೆ. ಜಿಯೋ ಪ್ರಕಾರ, 2024-25 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಅದರ ಒಟ್ಟು ಡೇಟಾ ದಟ್ಟಣೆ 45 ಎಕ್ಸಾಬೈಟ್‌ಗಳನ್ನು ದಾಟಿದೆ.

ರಿಲಯನ್ಸ್ ಜಿಯೋ ಇತ್ತೀಚೆಗೆ ಬಳಕೆದಾರರಿಗೆ ದೀಪಾವಳಿಯ ಭರ್ಜರಿ ಆಫರ್ ನೀಡಿದೆ. ಕಡಿಮೆ ಬೆಲೆ ರೀಚಾರ್ಜ್, ಉಚಿತ ಡೇಟಾ, ಅನ್‌ಲಿಮಿಟೆಡ್ ಕಾಲ್, ಎಸ್ಎಂಎಸ್, ಎಂಟರ್ನ್ಮೆಂಟ್ ಸಬ್‌ಸ್ಕ್ರಿಪ್ಶನ್ ಸೇರಿದಂತೆ ಹಲವು  ಆಫರ್ ನೀಡಿದೆ. ಇನ್ನು ಒಂದು ರೀಚಾರ್ಜ್ ಮಾಡಿದರೆ ಬರೋಬ್ಬರಿ 3,350 ರೂಪಾಯಿ ಗಿಫ್ಟ್ ವೋಚರ್ ಸೇರಿದಂತೆ ಹಲವು ಆಕರ್ಷಕ ಬಹುಮಾನಗಳನ್ನು ಜಿಯೋ ಘೋಷಿಸಿದೆ. ಇತ್ತೀಚೆಗೆ ಜಿಯೋ 4ಜಿ ಫೋನ್ ಅತೀ ಕಡಿಮೆ ಆಫರ್ ಘೋಷಿಸಿತ್ತು. ಕೇವಲ 699 ರೂಪಾಯಿಗೆ ಜಿಯೋ 4ಜಿ ಫೋನ್ ಆಫರ್ ನೀಡಿತ್ತು. ದೀಪಾವಳಿ ಹಬ್ಬದ ಪ್ರಯುಕ್ತ ದೇಶದ ಮೂಲೆ ಮೂಲೆಗೆ ಸಂಪರ್ಕ ಸಾಧ್ಯವಾಗಲು ಜಿಯೋ ಈ ಆಫರ್ ನೀಡಿತ್ತು. ಜಿಯೋ ಹೊಸ ಆಫರ್ ಪ್ರತಿಸ್ಪರ್ಧಿಗಳಿಗೆ ತೀವ್ರ ಹೊಡೆತ ನೀಡಿತ್ತು.ಕಾರಣ ಇತರ ಬ್ರ್ಯಾಂಡ್ ಸಾಮಾನ್ಯ ಫೋನ್‌ಗಳು 1,200 ರೂಪಾಯಿಯಿಂದ ಆರಂಭಗೊಳ್ಳುತ್ತಿದೆ. ಇದರ ನಡುವೆ ಜಿಯೋ 699 ರೂಪಾಯಿಗೆ ಫೋನ್ ನೀಡಿ ನೆಟ್‌ವರ್ಕ್ ವಿಸ್ತರಿಸಿತ್ತು. ಪ್ರತಿ ಬಾರಿ ಜಿಯೋ ಗ್ರಾಹಕರಿಗೆ ನೀಡುವ ಆಫರ್, ಪ್ರತಿಸ್ಪರ್ಧಿಗಳಿಗೆ ತೀವ್ರ ಹೊಡೆತ ನೀಡುತ್ತಿದೆ.

ದೀಪಾವಳಿಗೆ ಅಂಬಾನಿ ಕೊಡುಗೆ, ಕೇವಲ 10 ರೂಪಾಯಿಗೆ ಖರೀದಿಸಿ 24 ಕಾರೆಟ್ ಶುದ್ಧ ಚಿನ್ನ!
 

Latest Videos
Follow Us:
Download App:
  • android
  • ios