ವರ್ಷದ 365 ದಿನ 5ಜಿ ಅನ್‌ಲಿಮಿಟೆಡ್ ಡೇಟಾ ಕೇವಲ 601 ರೂಗೆ, ಜಿಯೋ ಬಂಪರ್ ಆಫರ್!

ವರ್ಷದ ಎಲ್ಲಾ ದಿನ 5ಜಿ ಅನ್‌ಲಿಮಿಟೆಡ್ ಡೇಟಾ. ಒಮ್ಮೆ 601 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು. 365 ದಿನ ನಿಶ್ಚಿಂತೆಯಿಂದ ಇರಬಹುದು. ಗ್ರಾಹಕರಿಗೆ ರಿಲಯನ್ಸ್ ಜಿಯೋ ಇದೀಗ ಹೈಸ್ಪೀಡ್ ಡೇಟಾ ಆಫರ್ ಘೋಷಿಸಿದೆ.
 

Reliance jio announces 365 days validity 5g unlimited data upgrade plan for just rs 601 ckm

ಮುಂಬೈ(ನ.19) ಭಾರತದ ಟೆಲಿಕಾಂ ಕ್ಷೇತ್ರ ತೀವ್ರ ಪೈಪೋಟಿ ಎದುರಿಸುತ್ತಿದೆ. ಇತ್ತೀಚೆಗೆ ರೀಚಾರ್ಜ್ ಬೆಲೆ ಏರಿಕೆ ಮಾಡಿ ಖಾಸಗಿ ಟೆಲಿಕಾಂ ಕಂಪನಿಗಳು ಕೈಸುಟ್ಟುಕೊಂಡಿದೆ. ಹಲವರು ಗ್ರಾಹಕರು ಬಿಎಸ್‌ಎನ್‌ಎಲ್‌ಗೆ ಪೋರ್ಟ್ ಆಗಿದ್ದಾರೆ. ಹೀಗಾಗಿ ಇದೀಗ ಟೆಲಿಕಾಂ ಸಂಸ್ಥೆಗಳು ಅತೀ ಕಡಿಮೆ ಬೆಲೆಗೆ ಗರಿಷ್ಠ ಸೌಲಭ್ಯದ ಪ್ಲಾನ್ ಘೋಷಿಸುತ್ತಿದೆ. ಈ ಪೈಕಿ ರಿಲಯನ್ಸ್ ಜಿಯೋ ಇದೀಗ ಮತ್ತೊಂದು ಬಂಪರ್ ಆಫರ್ ಘೋಷಿಸಿದೆ. ಇದು ಅತ್ಯಂತ ಅಗ್ಗದ ಪ್ಲಾನ್. ಕೇವಲ 601 ರೂಪಾಯಿ ರೀಚಾರ್ಜ್ ಮಾಡಿದರೆ ಸಾಕು, ವರ್ಷದ 365 ದಿನ 5ಜಿ ಡೇಟಾ ಉಚಿಚವಾಗಿ ಪಡೆಯಬಹುದು.

ಈ ಪ್ರಮೋಶನಲ್ ಪ್ಲಾನ್ ಪ್ರತಿ ದಿನ 1.5ಜಿಬಿ ಡೇಟಾ ಒಳಗೊಂಡ 299 ರೂಪಾಯಿ ಪ್ರೇಪೇಯ್ಡ್ ಪ್ಲಾನ್ ಬಳಕೆದಾರರನ್ನು ಟಾರ್ಗೆಟ್ ಮಾಡಿ ಜಾರಿಗೊಳಿಸಲಾಗಿದೆ.  ಜುಲೈ ತಿಂಗಳಲ್ಲಿ ರಿಲಯನ್ಸ್ ಜಿಯೋ 5ಜಿ ಡೇಟಾ ಆಫರ್ ಘೋಷಿಸಿದೆ. 239 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ರೂಪಾಯಿ ರೀಚಾರ್ಜ್ ಮಾಡಿ ಜಿಯೋ ವೆಲ್‌ಕಮ್ ಆಫರ್ ಆ್ಯಕ್ಟೀವೇಟ್ ಮಾಡಿಕೊಳ್ಳಲು ಸೂಚಿಸಿತ್ತು. ಇದೇ ಪ್ಲಾನ್‌ನ್ನು ಇದೀಗ ಜಿಯೋ ಅಪ್‌ಗ್ರೇಡ್ ಮಾಡಿದೆ. ಇದೀಗ 601 ರೂಪಾಯಿ 5ಜಿ ಡೇಟಾ ವೋಚರ್ ಪ್ಲಾನ್ ಘೋಷಿಸಲಾಗಿದೆ. ಈಗಾಗಲೇ ಜಿಯೋ ವೆಲ್‌ಕಮ್ ಆಫರ್ ಆ್ಯಕ್ಟೀವೇಟ್ ಮಾಡಿಕೊಂಡಿರುವ ಗ್ರಾಹಕರು ಇದೀಗ ಸುಲಭಾಗಿ 5ಜಿ ಡೇಟಾ ಉಚಿತ ಪ್ಲಾನ್ ವೋಚರ್ ಪಡೆದು ವರ್ಷಡಿವಿಡಿ ಡೇಟಾ ಆನಂದಿಸಬಹುದು.

ಬರೋಬ್ಬರಿ 70 ಸಾವಿರ ಕೋಟಿ ಉದ್ಯಮವಾಗಿ ಹೊರಹೊಮ್ಮಿದ ಜಿಯೋ-ಸ್ಟಾರ್ ಇಂಡಿಯಾ!

ಈ ಪ್ಲಾನ್ ಗಿಫ್ಟ್ ಮಾಡಬಹುದು ಅಥವಾ ಟ್ರಾನ್ಸ್‌ಫರ್ಮ್ ಮಾಡಲು ಸಾಧ್ಯವಿದೆ. ಕಾರಣ ಈ 601 ರೂಪಾಯಿ ರೀಚಾರ್ಜ್ ವೋಚರ್ ಪಡೆದು ನಿಮ್ಮ ಪ್ರೀತಪಾತ್ರರಿಗೆ ಅಥವ ಆಪ್ತರಿಗೆ ಗಿಫ್ಟ್ ನೀಡಬಹುದು, ಅಥವಾ ವರ್ಗಾಯಿಸಲು ಸಾಧ್ಯವಿದೆ. ಈ 601 ರೂಪಾಯಿ ರೀಚಾರ್ಜ್ ಪ್ಲಾನ್ 12  ವಿವಿಧ ವೋಚರ್ ಮೂಲಕ ಲಭ್ಯವಿದೆ. ಈ ಪೈಕಿ 51 ರೂಪಾಯಿ ರೀಚಾರ್ಜ್ ಮಾಡಿದರೂ ವರ್ಷವಿಡಿ 5ಜಿ ಡೇಟಾ ಆನಂದಿಸಬಹುದು. ಆದರೆ ಅನ್‌ಲಿಮಿಟೆಡ್ ಅಲ್ಲ, ಸೀಮಿತ ಡೇಟಾ ಮಾತ್ರ ಲಭ್ಯವಿದೆ.

ವೋಚರ್ ಪ್ಲಾನ್ ಆಕ್ಟೀವೇಟ್ ಮಾಡುವುದು ಹೇಗೆ? 

ಹಂತ1,ನಿಮ್ಮ ಸ್ಮಾರ್ಟ್‌ಫೋನ್ ಮೂಲಕ ಮೈಜಿಯೋ ಆ್ಯಪ್ ಟ್ಯಾಪ್ ಮಾಡಿ
ಹಂತ 2, ಮೈ ಜಿಯೋ ಆ್ಯಪ್‌ನಲ್ಲಿರುವ ಮೈ ವೋಚರ್ ಆಯ್ಕೆಯನ್ನು ಟ್ಯಾಪ್ ಮಾಡಿ
ಹಂತ3, ರೀಡೀಮ್ ಐಕಾನ್ ಟ್ಯಾಪ್ ಮಾಡಿ ಆ್ಯಕ್ಟೀವೇಟ್ ಮಾಡಿ

ಇದರ ಜೊತೆಗೆ ರಿಲಯನ್ಸ್ ಜಿಯೋ ಮತ್ತಷ್ಟು ಆಫರ್ ನೀಡಿದೆ. 11 ರೂಪಾಯಿಗೆ 10 ಜಿಬಿ ಡೇಟಾ ಒಂದು ಗಂಟೆ ವ್ಯಾಲಿಟಿಡಿಯೊಂದಿಗೆ ನೀಡುತ್ತಿದೆ. ಇದರ ಜೊತೆಗೆ 49 ರೂಪಾಯಿ, 175 ರೂಪಾಯಿ, 219 ರೂಪಾಯಿ, 289 ರೂಪಾಯಿ, 359 ರೂಪಾಯಿ ಸೇರಿದಂತೆ ಹಲವು ಡೇಟಾ ಪ್ಲಾನ್ ಆಫರ್ ರಿಲಯನ್ಸ್ ಘೋಷಿಸಿದೆ.

ರಿಲಯನ್ಸ್ ಜಿಯೋ ಇದೀಗ ಆಫರ್ ಮೂಲಕ ಗ್ರಾಹಕರ ಹಿಡಿದಿಟ್ಟುಕೊಳ್ಳುತ್ತಿದೆ. ಈಗಾಗಲೇ 5ಜಿ ಡೇಟಾ ರೀಚಾರ್ ಮಾಡಿಕೊಂಡಿರುವ ಗ್ರಾಹಕರು ಇದೀಗ ವೋಚರ್ ಪ್ಲಾನ್ ಆ್ಯಕ್ಟೀವೇಟ್ ಮಾಡಿ ವರ್ಷವಿಡಿ ಡೇಟಾ ಪಡೆಯಲು ಸಾಧ್ಯವಿದೆ. ಜಿಯೋ ಇದೀಗ ಕಡಿಮೆ ದರದಲ್ಲಿ ಪ್ಲಾನ್ ನೀಡುತ್ತಿದೆ. ಈ ಮೂಲಕ ಗ್ರಾಹಕರು ಪೋರ್ಟ್ ಆಗದಂತೆ ನೋಡಿಕೊಳ್ಳುತ್ತಿದೆ. ಇತ್ತ ಬಿಎಸ್ಎನ್ಎಲ್ ಕೂಡ ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಮೂಲಕ ಗ್ರಾಹಕರ ಆಕರ್ಷಿಸುತ್ತಿದೆ. ಇದೀಗ ಸರ್ಕಾರಿ ಸ್ವಾಮ್ಯದ ಟೆಲಿಕಾಂ 5ಜಿ ಡೇಟಾ ಲಾಂಚ್ ಮಾಡಲು ತಯಾರಿ ನಡೆಸುತ್ತಿದೆ. 2025ರಿಂದ  ಬಿಎಸ್ಎನ್ಎ 5ಜಿ ಡೇಟಾ ಸೇವೆ ನೀಡಲಿದೆ.

ಡಿಸ್ನಿ ಹಾಟ್‌ಸ್ಟಾರ್ ಖರೀದಿಸಿ ಕೇವಲ 15 ರೂ ತಿಂಗಳ ಸಬ್‌ಸ್ಕ್ರಿಪ್ಶನ್ ಆಫರ್ ಘೋಷಿಸಿದ ಜಿಯೋಸ್ಟಾರ್!

Latest Videos
Follow Us:
Download App:
  • android
  • ios