ಬರೋಬ್ಬರಿ 70 ಸಾವಿರ ಕೋಟಿ ಉದ್ಯಮವಾಗಿ ಹೊರಹೊಮ್ಮಿದ ಜಿಯೋ-ಸ್ಟಾರ್ ಇಂಡಿಯಾ!

ಡಿಸ್ನಿ ಸ್ಟಾರ್ ಇಂಡಿಯಾ ಈಗಾಗಲೇ ರಿಲಯನ್ಸ್ ಜಿಯೋ ಜೊತೆ ವಿಲೀನಗೊಂಡಿದೆ. ಇದರ ಪರಿಣಾಮ ಈ ಜಂಟಿ ಉದ್ಯಮ ವಿಶ್ವದ ಅತೀ ದೊಡ್ಡ ಬ್ರಾಡ್‌ಕಾಸ್ಟ್ ಮೀಡಿಯಾ ಆಗಿ ಹೊರಹೊಮ್ಮಿದೆ. ಇದರ ಮೌಲ್ಯ ಬರೋಬ್ಬರಿ 70 ಸಾವಿರ ಕೋಟಿ ರೂಪಾಯಿ.
 

Jio star become rs 7000 crore business platform after merge with Disney star India ckm

ಮುಂಬೈ(ನ.16) ರಿಲಯನ್ಸ್ ಜಿಯೋ ಹಾಗೂ ಡಿಸ್ನಿ ಸ್ಟಾರ್ ಇಂಡಿಯಾ ವೀಲನಗೊಂಡಿದೆ. ಡಿಸ್ನಿ ವಾಲ್ಟ್ ಕಂಪನಿ ಆಡಳಿತದ ಸ್ಟಾರ್ ಇಂಡಿಯಾವನ್ನು ರಿಲಯನ್ಸ್ ಜಿಯೋ ಜೊತೆ ವಿಲೀನಗೊಳಿಸಲಾಗಿದೆ. ಇದೇ ವೇಳೆ ರಿಲಯನ್ಸ್ ಬರೋಬ್ಬರಿ 11,500 ಕೋಟಿ ರೂಪಾಯಿ ಮೊತ್ತವನ್ನು ಹೂಡಿಕೆ ಮಾಡಿದೆ. ಈ ಹೂಡಿಕೆ ಹಾಗೂ ವಿಲೀನ ಬಳಿಕ ಈ ಜಂಟಿ ಉದ್ಯಮ ಬರೋಬ್ಬರಿ 70,352 ಕೋಟಿ ರೂಪಾಯಿ ಉದ್ಯಮವಾಗಿ ಹೊರಹೊಮ್ಮಿದೆ. ಜಂಟಿ ಉದ್ಯಮದ ಮೇಲೆ ರಿಲಯನ್ಸ್ ಜಿಯೋ ಸಂಪೂರ್ಣ ಹಿಡಿತ ಹೊಂದಿದೆ.  

 ರಿಲಯನ್ಸ್ ಜಿಯೋ ಹಾಗೂ ಡಿಸ್ನಿ ಸ್ಟಾರ್ ಇಂಡಿಯಾ ಉದ್ಯಮದಲ್ಲಿ  ರಿಲಯನ್ಸ್ ಶೇ 16.34ರಷ್ಟು, ವಯಾಕಾಮ್ ಶೇ 18 46.82 ಮತ್ತು ಡಿಸ್ನಿ ಶೇ 36.84ರಷ್ಟು ಪಾಲನ್ನು ಹೊಂದಿರುತ್ತದೆ. ಇನ್ನು ಜಂಟಿ ಉದ್ಯಮದ ಅಧ್ಯಕ್ಷರಾಗಿ ನೀತಾ ಅಂಬಾನಿ ಆಯ್ಕೆಯಾಗಿದ್ದಾರೆ. ಉದಯ್ ಶಂಕರ್ ಅವರನ್ನು ಕಾರ್ಯತಂತ್ರದ ಮಾರ್ಗದರ್ಶನಕ್ಕಾಗಿ ಜಂಟಿ ಉದ್ಯಮದ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಈ ಜಂಟಿ ಉದ್ಯಮವು ಭಾರತದಲ್ಲಿ ಟಿವಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಾದ್ಯಂತ ಅತ್ಯಂತ ಪ್ರತಿಷ್ಠಿತ ಮತ್ತು ಆಕರ್ಷಕ ಮಾಧ್ಯಮ ಬ್ರ್ಯಾಂಡ್‌ಗಳನ್ನು ಹೊಂದಿದೆ. ಟಿವಿ ಚಾನೆಲ್‌ಗಳಾದ ‘ಸ್ಟಾರ್’ ಮತ್ತು ‘ಕಲರ್ಸ್’ ಹೊರತುಪಡಿಸಿ, ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ‘ಜಿಯೋ ಸಿನಿಮಾ’ ಮತ್ತು ‘ಹಾಟ್‌ಸ್ಟಾರ್’ ವೀಕ್ಷಕರಿಗೆ ಮನರಂಜನೆ ಮತ್ತು ಕ್ರೀಡೆಗೆ ಸಂಬಂಧಿಸಿದ ಕಂಟೆಂಟ್ ಗಳಲ್ಲಿ ವ್ಯಾಪಕ ಆಯ್ಕೆಯನ್ನು ನೀಡುತ್ತದೆ.

ಡಿಸ್ನಿ ಹಾಟ್‌ಸ್ಟಾರ್ ಖರೀದಿಸಿ ಕೇವಲ 15 ರೂ ತಿಂಗಳ ಸಬ್‌ಸ್ಕ್ರಿಪ್ಶನ್ ಆಫರ್ ಘೋಷಿಸಿದ ಜಿಯೋಸ್ಟಾರ್!

ಜಂಟಿ ಉದ್ಯಮವು ಭಾರತದ ಅತಿದೊಡ್ಡ ಮಾಧ್ಯಮ ಮತ್ತು ಮನರಂಜನಾ ಕಂಪನಿಗಳಲ್ಲಿ ಒಂದಾಗಲಿದೆ, 2024ರ ಮಾರ್ಚ್ ಗೆ ಕೊನೆಗೊಳ್ಳುವ ಹಣಕಾಸು ವರ್ಷದಲ್ಲಿ ಸುಮಾರು ₹26,000 ಕೋಟಿ ರೂಪಾಯಿ ಆದಾಯದ ಪಡೆಯುವ ನಿರೀಕ್ಷ ಇದೆ. ಜಂಟಿ ಉದ್ಯಮವು 100 ಟಿವಿ ಚಾನೆಲ್‌ಗಳನ್ನು ನಿರ್ವಹಿಸುತ್ತದೆ.  ವಾರ್ಷಿಕವಾಗಿ 30,000+ ಗಂಟೆಗಳ ಟಿವಿ ಮನರಂಜನೆಯ ಕಂಟೆಂಟ್ ಉತ್ಪಾದಿಸುತ್ತದೆ. ಜಿಯೋಸಿನಿಮಾ ಮತ್ತು ಹಾಟ್ ಸ್ಟಾರ್ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಒಟ್ಟು ಚಂದಾದಾರಿಕೆ ನೆಲೆ 5 ಕೋಟಿಗಳಿಗಿಂತ ಹೆಚ್ಚು. ಜಂಟಿ ಉದ್ಯಮವು ಕ್ರಿಕೆಟ್, ಫುಟ್‌ಬಾಲ್ ಮತ್ತು ಇತರ ಕ್ರೀಡೆಗಳಾದ್ಯಂತ ಕ್ರೀಡಾ ಹಕ್ಕುಗಳ ದೊಡ್ಡ ಪೋರ್ಟ್‌ಫೋಲಿಯೊವನ್ನು ಹೊಂದಿದೆ. ಭಾರತದ ಸ್ಪರ್ಧಾತ್ಮಕ ಆಯೋಗವು ಆಗಸ್ಟ್ 27ನೇ ತಾರೀಕು, 2024 ರಂದು ವಹಿವಾಟನ್ನು ಅನುಮೋದಿಸಿದೆ. ಸಿಸಿಐ ಹೊರತಾಗಿ, ಯುರೋಪಿಯನ್ ಯೂನಿಯನ್, ಚೀನಾ, ಟರ್ಕಿ, ದಕ್ಷಿಣ ಕೊರಿಯಾ ಮತ್ತು ಉಕ್ರೇನ್‌ನಲ್ಲಿನ ಜಿಯೋ ಸ್ಟಾರ್ ಪ್ರಸಾರಗೊಳ್ಳಲಿದೆ.

ಈ ಜಂಟಿ ಉದ್ಯಮದ ರಚನೆಯೊಂದಿಗೆ, ಭಾರತೀಯ ಮಾಧ್ಯಮ ಮತ್ತು ಮನರಂಜನಾ ಉದ್ಯಮವು ಪರಿವರ್ತನೆಯ ಯುಗವನ್ನು ಪ್ರವೇಶಿಸುತ್ತಿದೆ. ಡಿಸ್ನಿಯೊಂದಿಗಿನ ನಮ್ಮ ಸಂಬಂಧದ ಜೊತೆಗೆ, ಪ್ರೇಕ್ಷರಿಗೆ ಉತ್ತಮ ಮನೋರಂಜನೆ ನೀಡಲಿದೆ ಎಂದು ಮುಕೇಶ್ ಅಂಬಾನಿ ಹೇಳಿದ್ದಾರೆ.  ಈ ಜಂಟಿ ಉದ್ಯಮದ ಭವಿಷ್ಯದ ಬಗ್ಗೆ ನಾನು ತುಂಬಾ ಉತ್ಸುಕನಾಗಿದ್ದೇನೆ ಮತ್ತು ಪ್ರತಿ ಯಶಸ್ಸನ್ನು ಬಯಸುತ್ತೇನೆ ಎಂದಿದ್ದಾರೆ. 

ಇದು ನಮಗೆ ಮತ್ತು ಭಾರತದಲ್ಲಿನ ಗ್ರಾಹಕರಿಗೆ ಒಂದು ರೋಮಾಂಚಕಾರಿ ಕ್ಷಣವಾಗಿದೆ, ಏಕೆಂದರೆ ನಾವು ಈ ಜಂಟಿ ಉದ್ಯಮದ ಮೂಲಕ ದೇಶದ ಪ್ರಮುಖ ಮನರಂಜನಾ ಘಟಕಗಳಲ್ಲಿ ಒಂದನ್ನು ರಚಿಸುತ್ತಿದ್ದೇವೆ ಎಂದು ವಾಲ್ಟ್ ಡಿಸ್ನಿ ಸಿಇಒ ರಾಬರ್ಟ್ ಹೇಳಿದ್ದಾರೆ. 

ಜಂಟಿ ಉದ್ಯಮವನ್ನು ಮೂವರು ಸಿಇಒಗಳು ಮುನ್ನಡೆಸುತ್ತಾರೆ. ಕೆವಿನ್ ವಾಜ್ ಎಲ್ಲ ಪ್ಲಾಟ್ ಫಾರ್ಮ್ ಗಳಲ್ಲಿ ಮನರಂಜನಾ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ. ಜಂಟಿ ಡಿಜಿಟಲ್ ಸಂಸ್ಥೆಯ ಉಸ್ತುವಾರಿಯನ್ನು ಕಿರಣ್ ಮಣಿ ವಹಿಸಿಕೊಳ್ಳಲಿದ್ದಾರೆ. ಸಂಜೋಗ್ ಗುಪ್ತಾ ಜಂಟಿ ಕ್ರೀಡಾ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ. ಒಟ್ಟಾಗಿ ಅವರು ಉದ್ಯಮದಲ್ಲಿ ಹೊಸ ಮಾನದಂಡಗಳನ್ನು ನಿಗದಿಪಡಿಸುತ್ತಾರೆ. 
ಪ್ರತ್ಯೇಕ ವಹಿವಾಟಿನಲ್ಲಿ, ವಯಾಕಾಮ್ 18ನಲ್ಲಿ ಪ್ಯಾರಾಮೌಂಟ್ ಗ್ಲೋಬಲ್‌ನ ಸಂಪೂರ್ಣ ಶೇ 13.01 ಪಾಲನ್ನು ರಿಲಯನ್ಸ್ ₹ 4,286 ಕೋಟಿಗೆ ಖರೀದಿಸಿದೆ. ಇದರ ಪರಿಣಾಮವಾಗಿ, ವಯಾಕಾಮ್ 18 ಈಗ ರಿಲಯನ್ಸ್ ಶೇ 70.49, ನೆಟ್‌ವರ್ಕ್ 18 ಮೀಡಿಯಾ ಅಂಡ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್ ಶೇ 13.54 ಮತ್ತು ಬೋಧಿ ಟ್ರೀ ಸಿಸ್ಟಮ್ಸ್ ಶೇ 15.97ರಲ್ಲಿ ಒಡೆತನದಲ್ಲಿದೆ.
 

Latest Videos
Follow Us:
Download App:
  • android
  • ios