ಅಕ್ಷಯ ತೃತೀಯ: ರಿಲಯನ್ಸ್ ಜ್ಯುವೆಲ್ಸ್‌ನಿಂದ ಆನ್‌ಲೈನ್ ಚಿನ್ನ ಖರೀದಿಗೆ ಅವಕಾಶ!
* ಕೊರೋನಾ ಎರಡನೇ ಅಲೆ, ಲಾಕ್‌ಡೌನ್, ಕರ್ಫ್ಯೂನಿಂದ ಅಂಗಡಿಗಳು ಬಂದ್.
* ಅಕ್ಷಯ ತೃತೀಯದಂದು ಚಿನ್ನ ಖರೀದಿಸೋದು ಹೇಗೆ ಎಂಬ ಟೆನ್ಶನ್ ಬೇಡ
* ರಿಲಯನ್ಸ್ ಜ್ಯುವೆಲ್ಸ್‌ನಿಂದ ಆನ್‌ಲೈನ್ ಚಿನ್ನ ಖರೀದಿಗೆ ಅವಕಾಶ!
ಬೆಂಗಳೂರು(ಮೇ.12): ಮನೆಗೆ ಸಮೃದ್ಧಿ ಮತ್ತು ಭರವಸೆಯನ್ನು ತರುವ ನಂಬಿಕೆಯ ಮುಂದುವರಿಕೆಯೊಂದಿಗೆ ರಿಲಯನ್ಸ್ ಜ್ಯುವೆಲ್ಸ್, ಅಕ್ಷಯ ತೃತೀಯವನ್ನು ಆಚರಿಸುತ್ತಿದೆ. 'ಅಕ್ಷಯ' ಎಂಬ ಪದವು 'ಎಂದಿಗೂ ಕಡಿಮೆಯಾಗದ್ದು' ಎಂಬ ಅರ್ಥವನ್ನು ನೀಡುತ್ತದೆ. ಅಕ್ಷಯ ತೃತೀಯವನ್ನು ಹೊಸ ಆರಂಭಕ್ಕೆ ಮತ್ತು ಚಿನ್ನ ಹಾಗೂ ಇತರೆ ಅಮೂಲ್ಯ ಲೋಹಗಳ ಖರೀದಿಗೆ ಅತ್ಯಂತ ಮಂಗಳಕರ ದಿನಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಎರಡನೆಯ ಅಲೆಯಿಂದ ತಲೆದೋರಿರುವ ಅನಿಶ್ಚಿತತೆಯ ನಡುವೆ, ರಿಲಯನ್ಸ್ ಜ್ಯುವೆಲ್ಸ್ ಷೋರೂಮ್‌ಗಳು ಸ್ಥಳೀಯ ನಿರ್ಬಂಧಗಳಿಗೆ ಅನುಗುಣವಾಗಿ ಸೀಮಿತ ನಗರಗಳಲ್ಲಿ ತೆರೆದಿರಲಿವೆ. ಆದರೆ, ಮನೆಯಲ್ಲಿಯೇ ಇರುವಂತೆ ಮತ್ತು ಸುರಕ್ಷತಾ ಶಿಷ್ಟಾಚಾರಗಳನ್ನು ಪಾಲಿಸುವಂತೆ ತನ್ನ ಗ್ರಾಹಕರಿಗೆ ರಿಲಯನ್ಸ್ ಜ್ಯುವೆಲ್ಸ್ ಮನವಿ ಮಾಡುತ್ತದೆ.
ಸೋಂಕಿತರ ಚಿಕಿತ್ಸೆಗೆ ನೆರವಾದ ರಿಲಯನ್ಸ್; ಪ್ರತಿ ದಿನ 700 ಟನ್ ಆಮ್ಲಜನಕ ಪೂರೈಕೆ!
ಪ್ರತಿ ಅಕ್ಷಯ ತೃತೀಯದಲ್ಲಿ ಚಿನ್ನ ಖರೀದಿಸುವ ಸಂಪ್ರದಾಯವನ್ನು ನಡೆಸಲು ರಿಲಯನ್ಸ್ ಜ್ಯುವೆಲ್ಸ್ ತನ್ನ ಗ್ರಾಹಕರಿಗೆ ಆನ್‌ಲೈನ್ ಖರೀದಿ ಸೌಲಭ್ಯವನ್ನು ಒದಗಿಸುತ್ತಿದೆ. ಗ್ರಾಹಕರು ಸುರಕ್ಷಿತ ಹಾಗೂ ಹಿತಕರವಾದ ಮನೆಯಿಂದ ಹೊರಬಾರದೆಯೂ ಚಿನ್ನ ಖರೀದಿಸಬಹುದು. ಗ್ರಾಹಕರು https://www.reliancejewels.com/festive-offer/category:83/ ವೆಬ್‌ಸೈಟ್ ಮೂಲಕ ವಿವಿಧ ಶ್ರೇಣಿಯ ಚಿನ್ನ ಮತ್ತು ಬೆಳ್ಳಿ ನಾಣ್ಯಗಳು, ಗೋಲ್ಡ್ ಗ್ರಾಮೇಜ್ ವೋಚರ್‌ಗಳು ಮತ್ತು ಹಗುರ ತೂಕದ ಆಭರಣಗಳನ್ನು ಉತ್ತಮ ಬೆಲೆಗಳಲ್ಲಿ ಖರೀದಿಸಿ ಸಂಪ್ರದಾಯವನ್ನು ಮುಂದುವರಿಸಬಹುದು.
ಈ ಬಗ್ಗೆ ಮಾತನಾಡಿದ ರಿಲಯನ್ಸ್ ಜ್ಯುವೆಲ್ಸ್ ಸಿಇಒ ಸುನಿಲ್ ನಾಯಕ್, 'ಜಗತ್ತಿನಾದ್ಯಂತ ಇರುವ ಭಾರತೀಯರಿಗೆ ಅಕ್ಷಯ ತೃತೀಯ ಶುಭ ದಿನವಾಗಿದೆ ಮತ್ತು ಈ ನಂಬಿಕೆಗೆ ಪ್ರಸ್ತುತದ ಬಿಕ್ಕಟ್ಟು ಅಡ್ಡಿ ಮಾಡುವುದನ್ನು ನಾವು ಬಯಸುವುದಿಲ್ಲ. ಈ ಶುಭ ಸಂದರ್ಭದಲ್ಲಿ ಗ್ರಾಹಕರು ಚಿನ್ನ ಖರೀದಿಸುವ ತಮ್ಮ ಆಸಕ್ತಿಯನ್ನು ತೋರಿಸುತ್ತಾರೆ. ಹೀಗಾಗಿ ನಾವು ರಿಲಯನ್ಸ್ ಜ್ಯುವೆಲ್ಸ್‌ನಲ್ಲಿ ನಮ್ಮ ಗ್ರಾಹಕರ ಆನ್‌ಲೈನ್ ಶಾಪಿಂಗ್ ಅನುಭವವನ್ನು ಹೆಚ್ಚಿಸಲು ಮತ್ತು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಬಯಸಿದ್ದೇವೆ. ಅಕ್ಷಯ ತೃತೀಯದ ಆನ್‌ಲೈನ್ ಆಫರಿಂಗ್ ಮೂಲಕ, ಹೊಸ ಆರಂಭದ ಸಂಪ್ರದಾಯದ ಕುರಿತಾದ ಆಶಯ ಮತ್ತು ನಂಬಿಕೆಯನ್ನು, ಉಜ್ವಲ ನಾಳೆಗಳು ಹಾಗೂ ಸುರಕ್ಷಿತ ಮತ್ತು ಆರೋಗ್ಯವಂತ ಜಗತ್ತನ್ನು ಕಾಣಲು ಬಯಸಿದ್ದೇವೆ' ಎಂದು ತಿಳಿಸಿದ್ದಾರೆ.
ಅಂಬಾನಿ ದಂಪತಿಯಿಂದ ಮಹಾರಾಷ್ಟ್ರಕ್ಕೆ 100 ಟನ್ ಆಕ್ಸಿಜನ್ ಪೂರೈಕೆ
ಗ್ರಾಹಕರು ಖರೀದಿಸಿದ ಚಿನ್ನದ ನಾಣ್ಯಗಳನ್ನು ಲಾಕ್‌ಡೌನ್ ಬಳಿಕ ಡೆಲಿವರಿ ಮಾಡಲಾಗುತ್ತದೆ. ಗೋಲ್ಡ್ ಗ್ರಾಮೇಜ್‌ಗಳನ್ನು ಷೋರೂಮ್‌ಗಳು ತೆರೆದ ಬಳಿಕ ರಿಡೀಮ್ ಮಾಡಬಹುದು ಮತ್ತು ಅವುಗಳ ಅವಧಿ 2021ರ ಜೂನ್ 30ರವರೆಗೂ ಇರಲಿದೆ. ಒಂದು ವೇಳೆ ನಿರ್ಬಂಧಗಳು ಮುಂದುವರಿದರೆ ಗೋಲ್ಡ್ ಗ್ರಾಮೇಜ್ ವೋಚರ್‌ಗಳ ವ್ಯಾಲಿಡಿಟಿಯನ್ನು ವಿಸ್ತರಿಸಲಾಗುವುದು.
ಗ್ರಾಹಕರು ರಿಲಯನ್ಸ್ ಜ್ಯುವೆಲ್ಸ್ ವೆಬ್‌ಸೈಟ್‌ನಲ್ಲಿ ಹಗುರ ತೂಕದ ಆಭರಣ ವಿನ್ಯಾಸಗಳನ್ನು ಕೂಡ ಖರೀದಿ ಮಾಡಬಹುದಾಗಿದೆ.