ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ದುಬೈನ ದ್ವೀಪ ಪಾಂ ಜುಮೇರಾದಲ್ಲಿ ಅತ್ಯಂತ ದುಬಾರಿ 1053 ಕೋಟಿ ರೂಪಾಯಿ ಬೆಲೆ ಬಾಳುವ ಸಮುದ್ರಕ್ಕೆ ಮುಖವಾಗಿರುವ (ಸೀ ಫೆಸಿಂಗ್‌) ಬಂಗಲೆಯನ್ನು ಖರೀದಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ.

ಮುಂಬೈ: ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ದುಬೈನ ದ್ವೀಪ ಪಾಂ ಜುಮೇರಾದಲ್ಲಿ ಅತ್ಯಂತ ದುಬಾರಿ 1053 ಕೋಟಿ ರೂಪಾಯಿ ಬೆಲೆ ಬಾಳುವ ಸಮುದ್ರಕ್ಕೆ ಮುಖವಾಗಿರುವ (ಸೀ ಫೆಸಿಂಗ್‌) ಬಂಗಲೆಯನ್ನು ಖರೀದಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ಪತ್ರಿಕೆ ತನ್ನ ವರದಿಯಲ್ಲಿ ತಿಳಿಸಿದೆ. ಮುಕೇಶ್‌ ಅಂಬಾನಿ ಇತ್ತಿಚಿಗೆ ಖರೀದಿಸಿದ ಹಾಗೂ ದುಬೈನ ಅತ್ಯಂತ ದುಬಾರಿ ಬಂಗಲೆ ಇದಾಗಿದೆ. ಅಂಬಾನಿ ಕಳೆದ ತಿಂಗಳು ಸಹ ದುಬೈನಲ್ಲಿ 664 ಕೋಟಿ ಬೆಲೆ ಬಾಳುವ ಮನೆ ಖರೀದಿಸಿದ್ದು, ದುಬೈನ ಅಂತ್ಯತ ದುಬಾರಿ ಮನೆಯಲ್ಲೊಂದಾಗಿದೆ. ಮುಕೇಶ್‌ ಅಂಬಾನಿ ಜಗತ್ತಿನ ಶ್ರೀಮಂತರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.

ಅಂಬಾನಿ (Mukesh Ambani) ಭಾರತದ ಎರಡನೇ ಶ್ರೀಮಂತ ವ್ಯಕ್ತಿಯಾಗಿದ್ದು, $84 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ. ಈಗ ಅವರು ಖರೀದಿಸಿದ ಮನೆಯೂ ಅವರು ಇತ್ತೀಚಿಗೆ ತನ್ನ ಕಿರಿಯ ಮಗ ಅನಂತ್‌ಗಾಗಿ ಖರೀದಿಸಿದ 80 ಮಿಲಿಯನ್ ಡಾಲರ್ ಮೌಲ್ಯದ ಮನೆಗಿಂತ ಕೇವಲ ಸ್ವಲ್ಪ ದೂರದಲ್ಲಿದೆ. ರಿಲಯನ್ಸ್ ಇಂಡಸ್ಟ್ರೀಸ್ (Reliance Industry) ಖರೀದಿಸಿದ ಈ ಆಸ್ತಿಯು ಖಾಸಗಿ ಸ್ಪಾ, ಒಳಾಂಗಣ ಮತ್ತು ಹೊರಾಂಗಣ ಈಜುಕೊಳ ಹತ್ತು ಮಲಗುವ ಕೋಣೆಗಳನ್ನು ಹೊಂದಿರುವ ಬೆಲೆಬಾಳುವ ನಿವಾಸವಾಗಿದೆ.

ಜಿಯೋದಿಂದ 15000 ರೂಪಾಯಿಗೆ 4ಜಿ ಲ್ಯಾಪ್‌ಟಾಪ್‌?

ವಾವ್ಹ್‌..ನೀತಾ ಅಂಬಾನಿ ಬಳಿಯಿರೋ ಕಾಸ್ಟ್ಲೀ ನೆಕ್ಲೇಸ್ ಎಷ್ಟು ಅದ್ಭುತವಾಗಿದೆ ನೋಡಿ