Asianet Suvarna News Asianet Suvarna News

ರಿಲಯನ್ಸ್ ಕಂಪನಿ ಮೌಲ್ಯ 'ಇನ್ ಟೋಟಲ್': ತಿಳಿಯಲು ಬೇಕು ಫುಲ್ ಬಾಟಲ್!

ಷೇರು ಮಾರುಕಟ್ಟೆಯ ಮೌಲ್ಯದಲ್ಲಿ ಅಗ್ರ ಸ್ಥಾನಕ್ಕೇರಿದ ರಿಲಯನ್ಸ್! ಟಿಸಿಎಸ್ ಹಿಂದಿಕ್ಕಿ ಅಗ್ರ ಪಟ್ಟ ತನ್ನದಾಗಿಸಿಕೊಂಡ ಆರ್‌ಐಎಲ್‌! ಭಾರತದ ಅತಿ ದೊಡ್ಡ ಮಾರುಕಟ್ಟೆ ಬಂಡವಾಳದ ಕಂಪನಿ! ಷೇರು ದರಗಳಲ್ಲಿ ಏರಿಕೆ ಕಂಡ ಪರಿಣಾಮ ಅಗ್ರ ಸ್ಥಾನಕ್ಕೇರಿದ ಆರ್‌ಐಎಲ್‌! 8 ಲಕ್ಷ ಕೋಟಿ ರೂ. ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ

Reliance Industries becomes first Indian company to cross Rs 8 lakh crore market capitalisation
Author
Bengaluru, First Published Aug 24, 2018, 2:48 PM IST

ಮುಂಬೈ(ಆ.24): ಇತ್ತೀಚಿಗಷ್ಟೇ ಮುಖೇಶ್ ಅಂಬಾನಿ ಸಾರಥ್ಯದ ರಿಲಯನ್ಸ್ ಇಂಡಸ್ಟ್ರೀಸ್, ಷೇರು ಮಾರುಕಟ್ಟೆಯ ಮೌಲ್ಯದಲ್ಲಿ ಅಗ್ರ ಸ್ಥಾನಕ್ಕೇರಿ ದೇಶದ ಕಾರ್ಪೋರೇಟ್ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಮೊದಲ ಬಾರಿಗೆ 8 ಲಕ್ಷ ಕೋಟಿ ರೂ. ಷೇರು ಮಾರುಕಟ್ಟೆ ಬಂಡವಾಳ ಮೌಲ್ಯ ಹೊಂದಿದ ಕಂಪನಿಯಾಗಿ ಹೊಸ ಮೈಲುಗಲ್ಲು ಸ್ಥಾಪಿಸಿದೆ.

ಇದೇ ಮೊದಲ ಬಾರಿಗೆ ಭಾರತೀಯ ಕಂಪನಿಯೊಂದು ಈ ದಾಖಲೆ ನಿರ್ಮಿಸಿದ್ದು, ಷೇರುಗಳ ಒಟ್ಟು ಮೌಲ್ಯದಲ್ಲಿ ರಿಲಯನ್ಸ್ ಹಾಗೂ ಟಾಟಾ ಸಮೂಹದ ಟಿಸಿಎಸ್ ನಡುವೆ ಸ್ಪರ್ಧೆ ಉಂಟಾಗಿದೆ. ಟಿಸಿಎಸ್ ಬಂಡವಾಳ ಮೌಲ್ಯ ಕೂಡ 7.79 ಲಕ್ಷ ಕೋಟಿ ರೂ. ಇದ್ದು, ಎರಡನೇ ಸ್ಥಾನದಲ್ಲಿದೆ. 

ರಿಲಯನ್ಸ್ ಇಂಡಸ್ಟ್ರೀಸ್ ತನ್ನ ವಾರ್ಷಿಕ ಸಭೆಯಲ್ಲಿ ಬ್ರಾಡ್‌ಬ್ಯಾಂಡ್‌ ಸೇವೆ ಜಿಯೊ ಗಿಗಾಫೈಬರ್ ಹಾಗೂ ಇತರ ಯೋಜನೆಗಳನ್ನು ಪ್ರಕಟಿಸಿದ ನಂತರವೇ, ಷೇರು ದರಗಳು ಹೆಚ್ಚಾಗಿವೆ ಎಂದು ಹೇಳಲಾಗಿದೆ.

ಅದರಂತೆ ನಿನ್ನೆ ಷೇರು ದರ ಶೇ.2ರಷ್ಟು ಏರಿದ್ದು, ಒಟ್ಟು 1,273 ರೂ ಷೇರು ದರ ದಾಖಲಾಗಿತ್ತು. ಈ ಮೂಲಕ ಕಂಪನಿಯ ಮಾರುಕಟ್ಟೆ ಮೌಲ್ಯ 8,04,089 ಕೋಟಿ ರೂ.ಗಳಾಗಿದೆ.

Follow Us:
Download App:
  • android
  • ios