Asianet Suvarna News Asianet Suvarna News

ಐಒಸಿ ಹಿಂದಿಕ್ಕಿದ ರಿಲಯನ್ಸ್ ಇಂಡಸ್ಟ್ರಿಸ್: ದೇಶದ ನಂ.1 ಕಂಪನಿ!

ರಿಲಯನ್ಸ್ ಇಂಡಸ್ಟ್ರಿಸ್ ಮುಕುಟಕ್ಕೆ ಮತ್ತೊಂದು ಗರಿ| ವಾರ್ಷಿಕ ವಹಿವಾಟು ಲೆಕ್ಕಾಚಾರದಲ್ಲಿ ದೇಶದ ನಂ.1 ಕಂಪನಿ| ಇಂಡಿಯನ್ ಆಯಿಲ್ ಕಾರ್ಪೋರೇಶನ್  ಹಿಂದಿಕ್ಕಿದ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್| ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವಹಿವಾಟು 2018-19ರಲ್ಲಿ 6.23 ಲಕ್ಷ ಕೋಟಿ| ಐಒಸಿಯ ವಾರ್ಷಿಕ ವಹಿವಾಟು 6.17 ಲಕ್ಷ ಕೋಟಿ| 2019ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 39,588 ಕೋಟಿ ರೂ. ಲಾಭ|

Reliance Beats IOC Becomes Biggest Indian Company
Author
Bengaluru, First Published May 21, 2019, 6:55 PM IST

ಮುಂಬೈ(ಮೇ.21): ಮಹತ್ವದ ಬೆಳವಣಿಗೆಯೊಂದರಲ್ಲಿ ವಾರ್ಷಿಕ ವಹಿವಾಟು ಲೆಕ್ಕಾಚಾರದಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಶನ್ ನ್ನು ಹಿಂದಿಕ್ಕಿರುವ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ದೇಶದ ನಂ.1 ಕಂಪನಿಯಾಗಿ ಹೊರಹೊಮ್ಮಿದೆ.

ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ವಹಿವಾಟು 2018-19ರಲ್ಲಿ 6.23 ಲಕ್ಷ ಕೋಟಿಗೆ ತಲುಪಿದ್ದು, ಐಒಸಿಯ ವಾರ್ಷಿಕ ವಹಿವಾಟು 6.17 ಲಕ್ಷ ಕೋಟಿಯಷ್ಟಿದೆ.  ಅಲ್ಲದೇ 2019ರ ಆರ್ಥಿಕ ವರ್ಷದಲ್ಲಿ ಅತ್ಯಧಿಕ ಲಾಭಾಂಶ ಗಳಿಸಿದ ಕಂಪನಿ ಎಂಬ ಹೆಗ್ಗಳಿಕೆಗೂ ರಿಲಯನ್ಸ್ ಇಂಡಸ್ಟ್ರಿಸ್ ಪಾತ್ರವಾಗಿದೆ.

2019ರ ಆರ್ಥಿಕ ವರ್ಷದಲ್ಲಿ ರಿಲಯನ್ಸ್ ಇಂಡಸ್ಟ್ರಿಸ್ ಬರೋಬ್ಬರಿ 39,588 ಕೋಟಿ ರೂ. ಲಾಭ ಗಳಿಸಿದ್ದರೆ, ಐಒಸಿ ಕೇವಲ 17.274 ಕೋಟಿ ರೂ. ಲಾಭ ದಾಖಲಿಸಿದೆ. ಇತ್ತೀಚಿನವರೆಗೂ ದೇಶದ ನಂಬರ್ 1 ಸಾರ್ವಜನಿಕ ವಲಯದ ಕಂಪನಿ ಎಂಬ ಹೆಗ್ಗಳಿಕೆ ಪಾತ್ರವಾಗಿದ್ದ ಐಒಸಿ, 2018-19ರ ವಿತ್ತೀಯ ವರ್ಷದಲ್ಲಿ ಕುಸಿತ ಕಂಡಿದ್ದು, ಮತ್ತೊಂದು ಸಾರ್ವಜನಿಕ ವಲಯದ ಸಂಸ್ಥೆಯಾದ ONGC ಈ ಸ್ಥಾನವನ್ನು ಅಲಂಕರಿಸಿತ್ತು.

Follow Us:
Download App:
  • android
  • ios