ಮುಂಬೈ(ಡಿ.19): ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಬ್ರಿಟಿಷ್ ಪೆಟ್ರೋಲಿಯಂ (ಬಿ.ಪಿ.) ಜಂಟಿಯಾಗಿ R ಕ್ಲಸ್ಟರ್ ನ ಭಾರತದ ಪೂರ್ವ ಕಡಲ ಕಿನಾರೆಯ ಆಳ ನೀರಿನ ಅನಿಲ ಕ್ಷೇತ್ರದ KG D6 ಬ್ಲಾಕ್ ನಲ್ಲಿ ಉತ್ಪಾದನೆ ಆರಂಭಿಸುತ್ತಿದೆ.

4G ಡೌನ್‌ಲೋಡ್‌ ವೇಗದಲ್ಲಿ ಜಿಯೋಗೆ ಮತ್ತೊಮ್ಮೆ ಮೊದಲ ಸ್ಥಾನ!..

KG D6 ಬ್ಲಾಕ್- R ಕ್ಲಸ್ಟರ್, ಸ್ಯಾಟಲೈಟ್ ಕ್ಲಸ್ಟರ್ ಮತ್ತು ಎಂ.ಜೆ.ನಲ್ಲಿ ಮೂರು ಆಳನೀರಿನ ಅನಿಲ ಯೋಜನೆಯನ್ನು ರಿಲಯನ್ಸ್ ಮತ್ತು ಬ್ರಿಟಿಷ್ ಪೆಟ್ರೋಲಿಯಂ ಸೇರಿ ರೂಪಿಸುತ್ತಿದೆ. 2023ರ ಹೊತ್ತಿಗೆ ಈ ಮೂರೂ ಸೇರಿ ಭಾರತದ ಅನಿಲ ಬೇಡಿಕೆಯ ಶೇಕಡಾ 15ರಷ್ಟನ್ನು ಪೂರೈಸುತ್ತದೆ. KG D6 ಬ್ಲಾಕ್ ನಲ್ಲಿನ ಈಗಾಗಲೇ ಇರುವ ಮೂಲಸೌಕರ್ಯವನ್ನು ಈ ಯೋಜನೆಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. KG D6 ನಲ್ಲಿ ರಿಲಯನ್ಸ್ ಪ್ರಮುಖ ಆಪರೇಟರ್ ಆಗಿ, 66.67% ಭಾಗವಹಿಸುವಿಕೆ ಹೊಂದಿದ್ದರೆ, ಬ್ರಿಟಿಷ್ ಪೆಟ್ರೋಲಿಯಂ 33.33% ಭಾಗವಹಿಸುವಿಕೆ ಇರುತ್ತದೆ.

 ಬ್ರಿಟಿಷ್ ಪೆಟ್ರೋಲಿಯಂ ಜತೆಗಿನ ನಮ್ಮ ಸಹಭಾಗಿತ್ವದ ಬಗ್ಗೆ ಹೆಮ್ಮೆ ಇದೆ. ಭೌಗೋಳಿಕ ಹಾಗೂ ಹವಾಮಾನ ದೃಷ್ಟಿಯಿಂದ ಸವಾಲಾಗಿರುವ ಕಡೆ ಅನಿಲ ಯೋಜನೆಗೆ ನಮ್ಮ (ರಿಲಯನ್ಸ್ ಮತ್ತು ಬಿಪಿ) ಪ್ರಾವೀಣ್ಯತೆ ಜತೆಗೂಡುತ್ತಿದೆ. ಭಾರತದ ಇಂಧನ ಕ್ಷೇತ್ರದಲ್ಲಿ ಸ್ವಚ್ಛ ಮತ್ತು ಹಸಿರು ಅನಿಲ ಆಧಾರಿತ ಆರ್ಥಿಕತೆಗೆ ಮೈಲುಗಲ್ಲು ಇದಾಗಿದೆ. ಕೃಷ್ಣ ಗೋದಾವರಿ ಪಾತ್ರದಲ್ಲಿನ ಆಳನೀರಿನ ನಮ್ಮ ಮೂಲಸೌಕರ್ಯದ ಮೂಲಕ ಅನಿಲ ಉತ್ಪಾದನೆ ನಿರೀಕ್ಷಿಸುತ್ತಿದ್ದು, ದೇಶದ ಸ್ವಚ್ಛ ಇಂಧನದ ಅಗತ್ಯ ಪೂರೈಕೆ ಇದರಿಂದ ಆಗುತ್ತದೆ ಎಂದು ರಿಲಯನ್ಸ್ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಮುಕೇಶ್ ಅಂಬಾನಿ ಹೇಳಿದ್ದಾರೆ.

ರಿಲಯನ್ಸ್ ಜತೆಗಿನ ನಮ್ಮ ಸಹಭಾಗಿತ್ವದ ಸಾಧ್ಯತೆಗೆ ಈ ಸ್ಟಾರ್ಟ್ ಅಪ್ ಮತ್ತೊಂದು ಉದಾಹರಣೆ. ಹೆಚ್ಚಾಗುತ್ತಿರುವ ಭಾರತದ ಇಂಧನ ಅಗತ್ಯವನ್ನು ಪೂರೈಸಲು ಎರಡೂ ಕಂಪೆನಿಗಳು ಅತ್ಯುತ್ತಮ ಕೊಡುಗೆ ನೀಡುತ್ತವೆ. ಭಾರತದ್ದೇ ಸ್ವಂತ ಸ್ವಚ್ಛ ಅನಿಲದ ಉತ್ಪಾದನೆ ಹೆಚ್ಚುತ್ತಿರುವುದರಿಂದ ಬೇಡಿಕೆ ಪೂರೈಸಲು ನೆರವಾಗುತ್ತದೆ. ಭವಿಷ್ಯದ ಇಂಧನ ಅಗತ್ಯದ ಮಿಶ್ರಣವನ್ನು ರೂಪಿಸಲು ಮತ್ತು ಉತ್ತಮಗೊಳಿಸಲು ಈ ಮೂರು ಹೊಸ KG D6 ಪ್ರಾಜೆಕ್ಟ್ ಗಳು ಬೆಂಬಲಿಸುತ್ತವೆ ಎಂದು ಬ್ರಿಟಿಷ್ ಪೆಟ್ರೋಲಿಯಂನ ಮುಖ್ಯಾಧಿಕಾರಿ ಬರ್ನಾರ್ಡ್ ಲೂನಿ ಹೇಳಿದ್ದಾರೆ.

 ಮುಂದಿನ ಯೋಜನೆಯು ಸ್ಯಾಟಲೈಟ್ಸ್ ಕ್ಲಸ್ಟರ್ ನದ್ದಾಗಿದ್ದು, 2021ರಲ್ಲಿ ಆರಂಭವಾಗುವ ನಿರೀಕ್ಷೆ ಇದೆ. ಆ ನಂತರ MJ ಪ್ರಾಜೆಕ್ಟ್ 2022ರಲ್ಲಿ ಶುರುವಾಗಬಹುದು. ಈ ಮೂರು ಅನಿಲ ಕ್ಷೇತ್ರದಲ್ಲಿ ಉತ್ಪಾದನೆ ಶುರುವಾದ ಮೇಲೆ ಗರಿಷ್ಠ ಮಟ್ಟದಲ್ಲಿ ಉತ್ಪಾದನೆ ಆಗುವಾಗ ಅದು 30 mmscmd (1bcf/d) ಇರುತ್ತದೆ. 2023ರ ಹೊತ್ತಿಗೆ ಭಾರತದ ದೇಶೀಯ ಬಳಕೆಯ 25% ಇರಲಿದ್ದು, ಇದರಿಂದ ಅನಿಲ ಆಮದಿನ ಮೇಲೆ ಅವಲಂಬನೆ ಕಡಿಮೆ ಆಗಲು ನೆರವಾಗುತ್ತದೆ.