Asianet Suvarna News Asianet Suvarna News

ಕಾಲಲ್ಲಿ ಪುರುಷರ ಹೆಸರು ಬರೆದು ಮಾರೋ ಹುಡುಗಿ ಗಳಿಸೋದು ಲಕ್ಷ ಲಕ್ಷ!

ಸೈಡ್ ಇನ್ ಕಂ ಇಲ್ಲದೆ ಈಗ ಬದುಕೋದು ಕಷ್ಟ. ಅನೇಕರಿಗೆ ಈ ಹೆಚ್ಚುವರಿ ಆದಾಯ ಗಳಿಸೋ ಕಲೆ ತಿಳಿದಿಲ್ಲ. ನೀವೂ ಅಚ್ಚರಿ ಎನ್ನಿಸುವ ವಸ್ತುಗಳನ್ನು ಮಾರಾಟ ಮಾಡಿ ಹಣ ಗಳಿಸಬಹುದು. ಈ ಹುಡುಗಿ ಕಾಲಿನಿಂದ ಹೆಸರು ಬರೆದು ಹಣ ಗಳಿಸ್ತಿದ್ದಾಳೆ. 
 

Girl earning money by writing the names of men with her feet roo
Author
First Published Jun 26, 2024, 1:58 PM IST

ಈಗಿನ ಕಾಲದಲ್ಲಿ ಹಣ ಸಂಪಾದನೆ ಮಾಡೋದು ಕಷ್ಟವೇನಲ್ಲ (Earning is not difficult now). ಹಾಗಂತ ಹೇಳಿದಷ್ಟು ಸುಲಭ ಕೂಡ ಅಲ್ಲ. ಕೆಲವರಿಗೆ ಪ್ರತಿ ದಿನ ಕಷ್ಟಪಟ್ಟು ಕೆಲಸ ಮಾಡಿದ್ರೂ ಸರಿಯಾಗಿ ಹಣ ಸಿಗೋದಿಲ್ಲ. ಇನ್ನು ಕೆಲವರು ಆಡ್ತಾ, ಆಡ್ತಾನೆ ಹಣ ಸಂಪಾದಿಸುತ್ತಾರೆ. ಜನರಿಗೆ ಹಣ ಸಂಪಾದನೆ ಮಾಡುವ ಟ್ರಿಕ್ ತಿಳಿದಿರಬೇಕು. ಸಾಮಾನ್ಯವಾಗಿ ಹೊಸದಾಗಿ ತಯಾರಿಸಿದ ಬಟ್ಟೆ, ಆಹಾರ, ವಸ್ತುವನ್ನೇ ಜನರು ಖರೀದಿಸುವುದಲ್ಲ. ಇನ್ನು ಸೆಕೆಂಡ್ ಹ್ಯಾಂಡ್ ಖರೀದಿ ಹೇಗೆ ಸಾಧ್ಯ ಅಂತ ನಾವು ಭಾವಿಸ್ತೇವೆ. ಆದ್ರೆ ಜಗತ್ತಿನಲ್ಲಿ ಚಿತ್ರ ವಿಚಿತ್ರ ಜನರಿದ್ದಾರೆ. ಅವರು ತಮ್ಮ ಹಣವನ್ನು ಅಚ್ಚರಿ ಹುಟ್ಟಿಸುವ ವಸ್ತುಗಳನ್ನು ಖರೀದಿಸಲು ಖರ್ಚು ಮಾಡ್ತಾರೆ. ಈ ಹಿಂದೆ ಮಹಿಳೆಯೊಬ್ಬಳು ತನ್ನ ಬೆವರು ಹಾಗೂ ತಾನು ಬಳಸಿದ ಸಾಕ್ಸ್ ಮಾರಾಟ ಮಾಡಿ ಹಣ ಗಳಿಸಿದ್ದಾಗಿ ಹೇಳಿದ್ದಳು. ಮತ್ತೊಬ್ಬಳು ಧರಿಸಿದ ಬ್ರಾ ಮಾರಿ ಲಕ್ಷಾಂತರ ರೂಪಾಯಿ ಸಂಪಾದನೆ ಮಾಡಿದ್ದಳು. ಈಗ ಇನ್ನೊಬ್ಬ ಹುಡುಗಿ ಅಚ್ಚರಿ ಹುಟ್ಟಿಸಿದ್ದಾಳೆ. 

ನಾವೆಲ್ಲ ಸುಂದರ ಹ್ಯಾಂಡ್ ರೈಟಿಂಗ್ (Handwriting) ಗೆ ಹೆಚ್ಚು ಆದ್ಯತೆ ನೀಡ್ತೇವೆ. ದುಂಡಗೆ ಅಕ್ಷರವಿರಲಿ ಅಂತ ಮಕ್ಕಳಿಗೆ ಸಲಹೆ ನೀಡ್ತೇವೆ. ಆದ್ರೆ ಈ ಹುಡುಗಿ ಕೈ ಬದಲು ಕಾಲಿನಿಂದ ಹುಡುಗರ ಹೆಸರು ಬರೆದು ಹಣ ಸಂಪಾದನೆ ಮಾಡ್ತಿದ್ದಾಳೆ. ಬರೀ ಕಾಲಿನಿಂದ ಹೆಸರು ಬರೆಯೋದು ಮಾತ್ರವಲ್ಲ ತನ್ನ ಕಾಲಿನ ಫೋಟೋ (Photo) ಹಾಗೂ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಪೋಸ್ಟ್ ಮಾಡಿಯೂ ಈಕೆ ಹಣ ಗಳಿಸುತ್ತಿದ್ದಾಳೆ.

ಯೆಸ್ ಬ್ಯಾಂಕ್ ಉದ್ಯೋಗ ಕಡಿತಕ್ಕೆ 500 ನೌಕರರು ಬೀದಿಪಾಲು, ಮತ್ತಷ್ಟು ಶೀಘ್ರದಲ್ಲಿ ಎನ್ನುತ್ತಿದೆ ಸಂಸ್ಥೆ!

ದಿ ಟೋ ಗ್ಯಾಲರಿ @thetoegallery ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಮಹಿಳೆ ತನ್ನೆಲ್ಲ ವಿಡಿಯೋವನ್ನು ಹಂಚಿಕೊಳ್ತಾಳೆ. ಅಲ್ಲಿಯೇ, ಕಾಲಿನಿಂದ ಪುರುಷರ ಹೆಸರು ಬರೆದು 300 ಡಾಲರ್ ಗಳಿಸಿದ್ದೇನೆಂಬ ಪೋಸ್ಟ್ ಹಾಕಿದ್ದಾಳೆ. ಹುಡುಗಿ ಕಾಲಿನ ಸಹಾಯದಿಂದ ಪೇಪರ್ ಮೇಲೆ ಹುಡುಗರ ಹೆಸರು ಬರೆದು ಅದನ್ನು ಅವರಿಗೆ ಕಳುಹಿಸುತ್ತಾಳೆ. ಇದಕ್ಕೆ 200ರಿಂದ 600 ಡಾಲರ್ ಚಾರ್ಜ್ ಮಾಡುತ್ತಾಳೆ ಹುಡುಗಿ. ಒಂದು ವಿಡಿಯೋದಲ್ಲಿ ಆಕೆ ಲೆಸ್ಟರ್ ಎಂದು ಕಾಲಿನಿಂದ ಬರೆಯೋದನ್ನು ನೀವು ನೋಡ್ಬಹುದು. ಇದಕ್ಕೆ ನಾನು 300 ಡಾಲರ್ ಗಳಿಸಿದ್ದೇನೆಂದು ಹುಡುಗಿ ಈ ವಿಡಿಯೋಕ್ಕೆ ಶೀರ್ಷಿಕೆ ಕೂಡ ಹಾಕಿದ್ದಾಳೆ. 

ನೇಲ್ ಪಾಲಿಶ್ ಮೂಲಕವೂ ಆಕೆ ಹೆಸರು ಬರೆಯುತ್ತಾಳೆ. ಹಿಂದೊಮ್ಮೆ ಅಪ್ಪನ ಸಾಕ್ಸ್ ಕದ್ದಿದ್ದ ಹುಡುಗಿ, ಅದನ್ನು ಸ್ವಲ್ಪ ದಿನ ಧರಿಸಿ, ನಂತ್ರ ಹೆಸರು ಬರೆದು ಮಾರಾಟ ಮಾಡಿದ್ದಳಂತೆ. ಈ ಹಣವನ್ನು ತನ್ನ ಕಾಲೇಜ್ ಶುಲ್ಕ ಪಾವತಿಗೆ ಬಳಸಿಕೊಳ್ಳುತ್ತಾಳೆ. ಮನೆ ಬಾಡಿಗೆಗೆ ಕೂಡ ಇದೇ ಹಣ ಬಳಸುತ್ತೇನೆ ಎಂದು ಮಹಿಳೆ ಹೇಳಿದ್ದಾಳೆ.

Business : ಮದುವೆಗೆ ಹಣ ಖರ್ಚು ಮಾಡೋದ್ರಲ್ಲಿ ಭಾರತೀಯರು ಮುಂದೆ

ಇನ್ಸ್ಟಾಗ್ರಾಮ್ ನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಈಕೆ ವಿಡಿಯೋ ವೈರಲ್ ಆಗಿದೆ. 20 ಸಾವಿರಕ್ಕೂ ಹೆಚ್ಚು ಲೈಕ್ಸ್ ಸಿಕ್ಕಿದೆ. ಅನೇಕರು ಹುಡುಗಿಗೆ ಪ್ರಶ್ನೆ ಕೇಳಿದ್ದಾರೆ. ಯಾವ ವೆಬ್ಸೈಟ್ ಸಹಾಯದಿಂದ ಇದನ್ನು ಮಾರಾಟ ಮಾಡುತ್ತೀರಾ ಎಂದು ಕೆಲವರು ಕೇಳಿದ್ದಾರೆ. ಮತ್ತೆ ಕೆಲವರು ತಾವೂ ಸಂಪಾದನೆ ಮಾಡಲು ಬಯಸುತ್ತೇವೆ ಎಂದಿದ್ದಾರೆ. ಮಾಹಿತಿ ಪ್ರಕಾರ ಹುಡುಗಿ ಫೀಟ್ ಫೈಂಡರ್ ಹೆಸರಿನ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ತನ್ನ ವಸ್ತುಗಳನ್ನು ಮಾರಾಟ ಮಾಡುತ್ತಾಳೆ. 

ಫೀಟ್ ಫೈಂಡರ್ (https://www.feetfinder.com/)  ವೆಬ್ಸೈಟ್ ಕಾಲಿನ ಫೋಟೋಗಳನ್ನು ಮಾರಾಟ ಮಾಡುವ ಹಾಗೂ ಖರೀದಿ ಮಾಡುವ ವೆಬ್ಸೈಟ್ ಆಗಿದೆ. ಇದ್ರಲ್ಲಿ ಲಾಗಿನ್ ಆಗಿ ನೀವು ನಿಮ್ಮ ಕಾಲಿನ ಫೋಟೋ ಮತ್ತು ವಿಡಿಯೋಗಳನ್ನು ಮಾರಾಟ ಮಾಡಬಹುದು. 

Latest Videos
Follow Us:
Download App:
  • android
  • ios