ಸ್ವಿಟ್ಜರ್’ಲ್ಯಾಂಡ್(ಜೂ.25): ಅದು ಮನೆಯ ಮೂಲೆಯೊಂದರಲ್ಲಿ ಬಿದ್ದಿದ್ದ ಪಿಂಗಾಣಿ ಬಟ್ಟಲು. ಉಪಯೋಗಕ್ಕೆ ಬಾರದ ಈ ಬಟ್ಟಲಿನಲ್ಲಿ ಮನೆಯ ಮಕ್ಕಳು ಟೆನ್ನಿಸ್ ಬಾಲ್ ಇಟ್ಟು ಸುಮ್ಮನಿದ್ದರು.

ಆದರೆ ಹರಾಜು ಪ್ರಕ್ರಿಯೆಯಲ್ಲಿ ಈ ಪಿಂಗಾಣಿ ಬಟ್ಟಲು ಬರೋಬ್ಬರಿ 4.9 ಮಿಲಿಯನ್ ಅಮೆರಿಕನ್ ಡಾಲರ್’ಗೆ ಮಾರಾಟವಾದಾಗ, ಖುದ್ದು ಮನೆಯವರಿಗೇ ಆಶ್ಚರ್ಯ.

ಹೌದು, ಉಪಯೋಗಕ್ಕೆ ಬಾರದ ಪಿಂಗಾಣಿ ಬಟ್ಟಲು ಎಂದುಕೊಂಡು ಟೆನ್ನಿಸ್ ಬಾಲ್ ಇಡಲು ಬಳಸುತ್ತಿದ್ದ ಪಿಂಗಾಣಿ ಬಟ್ಟಲೊಂದು ಬರೋಬ್ಬರಿ 4.9 ಮಿಲಿಯನ್ ಅಮೆರಿಕನ್ ಡಾಲರ್’ಗೆ ಮಾರಾಟವಾಗಿದೆ.

ಸ್ವಿಟ್ಜರ್’ಲ್ಯಾಂಡ್’ನ ಜನಪ್ರಿಯ ಕೊಲ್ಲರ್ ಹರಾಜು ಪ್ರಕ್ರಿಯೆಯಲ್ಲಿ ಈ ಬಟ್ಟಲು 4.9 ಮಿಲಿಯನ್ ಅಮೆರಿಕನ್ ಡಾಲರ್’ಗೆ ಮಾರಾಟವಾಗಿದೆ. ಈ ಬಟ್ಟಲು 17ನೇ ಶತಮಾನದಲ್ಲಿ ಚೀನಾದಲ್ಲಿ ತಯಾರಿಸಲ್ಪಟ್ಟಿದ್ದ ಅಪರೂಪದ ಬಟ್ಟಲು ಎನ್ನಲಾಗಿದೆ.

17ನೇ ಶತಮಾನದ ಚೀನಾದ ರಾಣಿಗಾಗಿ ತಯಾರಿಸಲಾಗಿದ್ದ ಈ ಬಟ್ಟಲನ್ನು ಸ್ವಿಸ್ ಕುಟುಂಬ ಚೀನಾದಲ್ಲಿ ಸಾಧಾರಣ ಮೊತ್ತಕ್ಕೆ ಖರೀದಿಸಿತ್ತು. ಆ ಬಳಿಕ ಅದನ್ನು ಬರ್ಲಿನ್ ಮ್ಯುಸಿಯಂ ಮತ್ತು ಲಂಡನ್ ಮೂಲದ ಹರಾಜು ಕಂಪನಿಯೊಂದಕ್ಕೆ ಮಾರಾಟ ಮಾಡಲು ಯತ್ನಿಸಿತ್ತು.

ಆದರೆ ಬಳಿಕ ಅದನ್ನು ಮನೆಯಲ್ಲಿ ವಸ್ತುಗಳನ್ನು ಇಡಲು ಬಳಸಲಾಗುತ್ತಿತ್ತು. ಆದರೆ ಕೊಲ್ಲರ್ ಹರಾಜು ಪ್ರಕ್ರಿಯೆಯಲ್ಲಿ ಇದು ಭಾರೀ ಮೊತ್ತಕ್ಕೆ ಹರಾಜಾಗಿದ್ದು, ಬರೋಬ್ಬರಿ 34 ಕೋಟಿ ರೂ. ಜೇಬಿಗಳಿಸಿ ಸ್ವಿಸ್ ಕುಟುಂಬ ಸಂತಸದಲ್ಲಿದೆ.