ನವದೆಹಲಿ(ಸೆ.13): ತೀವ್ರ ಗತಿಯ ಆರ್ಥಿಕ ಬದಲಾವಣೆ ಹೊರತಾಗಿಯೂ ಭಾರತದ ಆರ್ಥಿಕ ಪ್ರಗತಿ ಬಗ್ಗೆ ಭರವಸೆ ಹೊಂದಿದ್ದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ(IMF), ಇದೀಗ ನಿರಾಸೆಯ ಅಭಿಪ್ರಾಯ ಹೊರಹಾಕಿದೆ.

ಸಾಂಸ್ಥಿಕ ಮತ್ತು ಪರಿಸರ ನಿಯಂತ್ರಕ ಅನಿಶ್ಚಿತತೆ ಹಾಗೂ ಕೆಲವು ಬ್ಯಾಂಕೇತರ ಹಣಕಾಸು ಕಂಪನಿಗಳ ಧೀರ್ಘಕಾಲದ ದೌರ್ಬಲ್ಯದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತ ಹೆಚ್ಚು ಕುಸಿತ ಕಂಡಿದೆ ಎಂದು IMF ಅಭಿಪ್ರಾಯಪಟ್ಟಿದೆ.

ಭಾರತದಲ್ಲಿನ ಇತ್ತೀಚಿನ ಆರ್ಥಿಕ ಬೆಳವಣಿಗೆ ನಿರೀಕ್ಷೆಗಿಂತಲೂ ದುರ್ಬಲವಾಗಿದ್ದು, ಆರ್ಥಿಕ ಹಿಂಜರಿತದ ತೊಂದರೆ ಪದೇ ಪದೇ ಕಾಣಿಸಿಕೊಳ್ಳುತ್ತಿದೆ ಎಂದು IMF ವಕ್ತಾರ ಗೆರ್ರಿ ರೈಸ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಪ್ರಕಾರದ ಏಪ್ರಿಲ್‌ನಿಂದ ಜೂನ್ ತ್ರೈಮಾಸಿಕ ಅವಧಿಯಲ್ಲಿ ಆರ್ಥಿಕ ಪ್ರಗತಿ ಏಳು ವರ್ಷಗಳಲ್ಲೇ ಅತಿ ಕಡಿಮೆ ಶೇ.5ರಷ್ಟು ದಾಖಲಾಗಿದೆ. ವರ್ಷದ ಹಿಂದೆ ದೇಶದ ಜಿಡಿಪಿ ಶೇ.8 ರಷ್ಟಿತ್ತು.