ಮೋದಿ ಸರ್ಕಾರಕ್ಕೆ ಹೊಸ ಸರ್ಟಿಫಿಕೆಟ್: ಶುರುವಾಯ್ತು ಹೊಸ ಗೇಮ್!
ಚುನಾವಣೆಗೂ ಮೊದಲು ಮೋದಿ ಸರ್ಕಾರಕ್ಕೆ ಶಹಬ್ಬಾಸಗಿರಿ| ಮೋದಿ ಸರ್ಕಾರಕ್ಕೆ ಹೊಸ ಸರ್ಟಿಫಿಕೆಟ್ ಕೊಟ್ಟವರು ಯಾರು ಗೊತ್ತಾ?| ‘ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತವೂ ಒಂದು’| ಭಾರತದ ಆರ್ಥಿಕ ಬೆಳವಣಿಗೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಸಂತಸ| ಶೇ. 7 ರ ಸರಾಸರಿಯಲ್ಲಿ ಬೆಳವಣಿಗೆಯಾಗುತ್ತಿರುವ ಭಾರತದ ಆರ್ಥಿಕತೆ|
ವಾಷಿಂಗ್ಟನ್(ಮಾ.22): ವಿಶ್ವದದಲ್ಲಿ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕ ವ್ಯವಸ್ಥೆಗಳಲ್ಲಿ ಭಾರತವೂ ಒಂದು ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಹೇಳಿದೆ.
ಕಳೆದ ಐದು ವರ್ಷಗಳಲ್ಲಿ ಭಾರತದ ಆರ್ಥಿಕ ಕ್ಷೇತ್ರದಲ್ಲಿ ಮಹತ್ವದ ಸುಧಾರಣೆಯಾಗಿದೆ ಎಂದು ಐಎಂಎಫ್ ಮೋದಿ ಸರ್ಕಾರಕ್ಕೆ ಶಹಬ್ಬಾಸಗಿರಿ ನೀಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಐಎಂಎಫ್ ಸಂವನಹ ನಿರ್ದೇಶಕ ಗೆರಿ ರೈಸ್, ಕಳೆದ ಐದು ವರ್ಷಗಳಲ್ಲಿ ಭಾರತ ಶೇ. 7 ರ ಸರಾಸರಿಯಲ್ಲಿ ಬೆಳವಣಿಗೆಯಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತದಲ್ಲಿ ಮಹತ್ವದ ಸುಧಾರಣೆಗಳನ್ನು ಜಾರಿಗೊಳಿಸಲಾಗಿದ್ದು, ಬೆಳವಣಿಗೆಯನ್ನು ಸುಸ್ಥಿರವಾಗಿ ಮುಂದುವರೆಸಿಕೊಂಡು ಹೋಗುವ ಜವಾಬ್ದಾರಿ ಅದರ ಮೇಲಿದೆ ಎಂದು ಗೆರಿ ರೈಸ್ ಹೇಳಿದ್ದಾರೆ.
ಮುಂದಿನ ತಿಂಗಳು ನಡೆಯಲಿರುವ ವಿಶ್ವ ಬ್ಯಾಂಕ್ ವಾರ್ಷಿಕ ಸ್ಪ್ರಿಂಗ್ ಸಭೆ ಅಂಗವಾಗಿ ಭಾರತದ ಆರ್ಥಿಕ ವ್ಯವಸ್ಥೆ ಬಗ್ಗೆ ಮಾಹಿತಿಯನ್ನೊಳಗೊಂಡ ಸರ್ವೆ ವರದಿಯನ್ನು ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ.