celebrity property deals: ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ರಿಯಲ್ ಎಸ್ಟೇಟ್‌ನಲ್ಲಿ ಒಳ್ಳೆ ಹೂಡಿಕೆ ಮಾಡಿದ್ದು, ಈಗ ಮುಂಬೈನ ಗೋರೆಗಾಂವ್‌ನಲ್ಲಿದ್ದ ತಮ್ಮ ಎರಡು ಅಪಾರ್ಟ್‌ಮೆಂಟ್‌ಗಳನ್ನು ಸುಮಾರು 12 ಕೋಟಿ ರೂ.ಗೆ ಮಾರಾಟ ಮಾಡಿ, 13 ವರ್ಷಗಳಲ್ಲಿ ಶೇ.47ರಷ್ಟು ಲಾಭ ಗಳಿಸಿದ್ದಾರೆ.
ರಿಯಲ್ ಎಸ್ಟೇಟ್‌ನಲ್ಲಿ ಅಪ್ಪ ಮಗನ ಚಮತ್ಕಾರ
ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು ಮುಂಬೈನ ಗೋರೆಗಾಂವ್‌ನಲ್ಲಿರುವ ತಮ್ಮ ಎರಡು ಅಪಾರ್ಟ್‌ಮೆಂಟ್‌ಗಳನ್ನು ಭಾರಿ ಲಾಭದೊಂದಿಗೆ ಮಾರಾಟ ಮಾಡಿದ್ದಾರೆ. 13 ವರ್ಷಗಳಲ್ಲಿ ಈ ಫ್ಲಾಟ್‌ಗಳಿಂದ ಶೇ.47ರಷ್ಟು ಲಾಭ ಗಳಿಸುವ ಮೂಲಕ ಸುಮಾರು 12 ಕೋಟಿ ರೂಪಾಯಿಯನ್ನು ಗಳಿಸಿದ್ದಾರೆ. 2012ರಲ್ಲಿ ಈ ಎರಡು ಫ್ಲಾಟ್‌ಗಳನ್ನು ಸುಮಾರು . 8.12 ಕೋಟಿ ನೀಡಿ ಅಮಿತಾಭ್ ಬಚ್ಚನ್ ಖರೀದಿಸಿದ್ದರು. ಈಗ ಪ್ರತಿ ಫ್ಲಾಟ್‌ನ್ನು ಆರು ಕೋಟಿ ರೂಗೆ ಮಾರುವ ಮೂಲಕ ಶೇ.47 ಲಾಭ ಗಳಿಸಿದ್ದಾರೆ.
ಶೇ.47 ಲಾಭದೊಂದಿಗೆ ಎರಡು ದುಬಾರಿ ಅಪಾರ್ಟ್‌ಮೆಂಟ್‌ಗಳ ಮಾರಿದ ಅಮಿತಾಭ್ ಬಚ್ಚನ್
ಹೌದು ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಇತ್ತೀಚೆಗೆ ಮುಂಬೈನ ಗೋರೆಗಾಂವ್‌ನಲ್ಲಿರುವ ತಮ್ಮ ಎರಡು ದುಬಾರಿ ಅಪಾರ್ಟ್‌ಮೆಂಟ್‌ಗಳನ್ನು ಮಾರಾಟ ಮಾಡಿದ್ದಾರೆ. ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ರಿಯಲ್ ಎಸ್ಟೇಟ್ ಮೇಲೆ ಹೂಡಿಕೆ ಮಾಡುವ ಟ್ರೆಂಡ್ ಹೆಚ್ಚಾಗ್ತಿದ್ದು ಇದಕ್ಕೆ ಅಮಿತಾಭ್ ಬಚ್ಚನ್ ಸಾಕ್ಷಿಯಾಗಿದ್ದಾರೆ.
13 ವರ್ಷಗಳ ನಂತರ ಪ್ರತಿ ಫ್ಲಾಟ್‌ಗೆ 6 ಕೋಟಿಯಂತೆ ಮಾರಾಟ
ಅಮಿತಾಭ್ ಅವರು 2012 ರಲ್ಲಿ ಗೋರೆಗಾಂವ್ ಪೂರ್ವದ ಒಬೆರಾಯ್ ಎಕ್ಸ್‌ಕ್ವಿಸೈಟ್‌ನಲ್ಲಿ 8.12 ಕೋಟಿ ರೂ. ಮೊತ್ತಕ್ಕೆ ಒಟ್ಟು ಎರಡು ಫ್ಲಾಟ್‌ಗಳನ್ನು ಖರೀದಿಸಿದ್ದರು. ಇದೇ ಫ್ಲಾಟ್‌ಗಳನ್ನು ಈಗ 13 ವರ್ಷಗಳ ನಂತರ ಪ್ರತಿ ಫ್ಲಾಟ್‌ಗೆ 6 ಕೋಟಿಯಂತೆ ಮಾರಾಟ ಮಾಡಿದ್ದಾರೆ. ಆಶಾ ಈಶ್ವರ್ ಶುಕ್ಲಾ ಮತ್ತು ಮಮತಾ ಸೂರಜ್‌ದೇವ್ ಶುಕ್ಲಾ ಎಂಬುವವರು ಅಮಿತಾಭ್ ಅವರ ಈ ಅಪಾರ್ಟ್‌ಮೆಂಟ್‌ಗಳನ್ನು ಖರೀದಿ ಮಾಡಿದ್ದಾರೆ. ಹೀಗೆ ಫ್ಲಾಟ್ ಖರೀದಿಸಿ ಮಾರುವ ಮೂಲಕ ಅಮಿತಾಭ್ ಅವರು ಕುಳಿತಲ್ಲೇ 47% ಲಾಭ ಗಳಿಸಿದ್ದಾರೆ. ಮೊದಲ ಫ್ಲಾಟನ್ನು ಅವರು ಕಳೆದ ತಿಂಗಳ ಅಕ್ಟೋಬರ್ 31 ರಂದು ಅಧಿಕೃತವಾಗಿ ನೋಂದಾಯಿಸಿದ್ದಾರೆ. ಇದಕ್ಕೆ ಸ್ಟಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕ ಸೇರಿ 30.3 ಲಕ್ಷ ರೂ.ಗಳಾಗಿದೆ.
ನವೆಂಬರ್ 1 ರಂದೇ ಎರಡು ಫ್ಲಾಟ್‌ಗಳ ನೋಂದಣಿ
ಮರುದಿನವೇ ಅಂದರೆ ನವಂಬರ್ 1 ರಂದು ಎರಡನೇ ಫ್ಲಾಟ್‌ನ್ನು ಕೂಡ ನೋಂದಣಿ ಮಾಡಲಾಗಿದೆ. ಈ ಎರಡೂ ಫ್ಲಾಟ್‌ಗಳು ನಾಲ್ಕು ಪಾರ್ಕಿಂಗ್ ಸ್ಥಳಗಳನ್ನು ಒಳಗೊಂಡಿವೆ. ಈ ಮಾರಾಟವು ಬಚ್ಚನ್ ಅವರ ಇತ್ತೀಚಿನ ಆಸ್ತಿ ವ್ಯವಹಾರಗಳಿಗೆ ಮತ್ತೊಂದು ಸೇರ್ಪಡೆಯಾಗಿದೆ. ಕಳೆದ ಜನವರಿಯಲ್ಲಿ ಅಂಧೇರಿಯ 'ದಿ ಅಟ್ಲಾಂಟಿಸ್' ನಲ್ಲಿ ಇದ್ದ 5,185 ಚದರ ಅಡಿಗಳ ಡ್ಯೂಪ್ಲೆಕ್ಸ್ ಫ್ಲಾಟನ್ನು ಅವರು 83 ಕೋಟಿ ರೂ.ಗೆ ಮಾರಾಟ ಮಾಡಿದ್ದರು.
ತಂದೆ ಮತ್ತು ಮಗನ ರಿಯಲ್ ಎಸ್ಟೇಟ್ ಡೀಲ್‌ಗಳು
ಅಮಿತಾಬ್ ಮತ್ತು ಅವರ ಮಗ ನಟ ಅಭಿಷೇಕ್ ಬಚ್ಚನ್ ಅವರು ಕೂಡ ಭೂಮಿ ಮೇಲೆ ಹೂಡಿಕೆ ಮಾಡೋದ್ರಲ್ಲಿ ತೀವ್ರ ಆಸಕ್ತಿ ಹೊಂದಿದ್ದಾರೆ. 2024 ರಲ್ಲಿ, ಅಭಿಷೇಕ್ ಅವರು ಮುಂಬೈನ ಬೊರಿವಲಿಯ ಒಬೆರಾಯ್ ಸ್ಕೈ ಸಿಟಿ ಯೋಜನೆಯಲ್ಲಿ ಆರು ಅಪಾರ್ಟ್‌ಮೆಂಟ್‌ಗಳನ್ನು 15.42 ಕೋಟಿ ರೂ.ಗೆ ಖರೀದಿಸಿದ್ದರು. ಇದಾದ ನಂತರ ತಂದೆ ಮಗ ಇಬ್ಬರು ಜಂಟಿಯಾಗಿ ಮುಂಬೈನ ಮುಲುಂಡ್ ವೆಸ್ಟ್‌ನಲ್ಲಿರುವ ಒಬೆರಾಯ್ ಎಟರ್ನಿಯಾ ಡೆವಲಪ್‌ಮೆಂಟ್‌ನಲ್ಲಿ ಹತ್ತು ಫ್ಲಾಟ್‌ಗಳನ್ನು ಖರೀದಿಸಿದ್ದಾರೆ. ಈ ಖರೀದಿಗೆ ಇಬ್ಬರು ಜೊತೆಯಾಗಿ 24.94 ಕೋಟಿ ರೂ. ವೆಚ್ಚ ಮಾಡಿದ್ದಾರೆ.
ಅಲಿಬಾಗ್‌ನಲ್ಲೂ ಆಸ್ತಿ ಖರೀದಿ:
ಹಾಗೆಯೇ ಮುಂಬೈ ಸಮೀಪದ ರಜಾ ದಿನಗಳ ವಿಹಾರ ತಾಣವೆಂದು ಫೇಮಸ್ ಆಗಿರುವ ಸುಂದರವಾದ ಕರಾವಳಿ ಪ್ರದೇಶವಾದ ಅಲಿಬಾಗ್‌ನಲ್ಲೂ ಅವರು ಮೂರು ಭೂಮಿಯನ್ನು ಖರೀದಿ ಮಾಡಿದ್ದಾರೆ. ಅಭಿನಂದನ್ ಲೋಧಾ ಅವರ ಮನೆಯಿಂದ 'ಎ ಅಲಿಬಾಗ್' ಹಂತ-2 ಯೋಜನೆಯ ನಡುವೆ ಇರುವ, ಒಟ್ಟು 9,557 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಫ್ಲಾಟ್‌ಗಳನ್ನು ಅವರು 6.59 ಕೋಟಿ ರೂ.ಗಳಿಗೆ ಖರೀದಿಸಿದ್ದಾರೆ.
ಇದನ್ನೂ ಓದಿ: ಜಲಮಂಡಳಿಯ ಹಿರಿಯ ಅಧಿಕಾರಿ ನಿಗೂಢ ಸಾವು, ಕತ್ತಲ್ಲಿ ಚೂರಿ ಇರಿತದ ಗುರುತು
ಇದನ್ನೂ ಓದಿ: ತರಕಾರಿ ವ್ಯಾಪಾರಿ ಬದುಕು ಬದಲಿಸಿದ ಲಾಟರಿ: ಸಾಲ ಮಾಡಿ ಟಿಕೆಟ್ ಖರೀದಿಸಿದವನಿಗೆ 11 ಕೋಟಿ ಬಂಪರ್
