Asianet Suvarna News Asianet Suvarna News

ನ್ಯೂ ಇಯರ್ ಗಿಫ್ಟ್: 20 ರೂ. ಹೊಸ ಗರಿಗರಿ ನೋಟ್!

ಶೀಘ್ರದಲ್ಲೇ ಬರಲಿದೆ 20 ರೂ. ಮುಖಬೆಲೆಯ ಹೊಸ ನೋಟು| 20 ರೂ. ಮುಖಬೆಲೆಯ ಆರ್‌ಬಿಐ ನೋಟು ಬಿಡುಗಡೆಗೆ ಮುಂದಾದ ಆರ್‌ಬಿಐ| ಗಾತ್ರ ಹಾಗೂ ವಿನ್ಯಾಸದಲ್ಲಿ ಭಿನ್ನತೆ ಹೊಂದಿರುವ 20 ರೂ.ಹೊಸ ನೋಟು| ಹೊಸ ವರ್ಷಕ್ಕೆ ಹೊಸ ನೋಟಿನ ಗಿಫ್ಟ್ ಕೊಡಲಿರುವ ಆರ್‌ಬಿಐ

RBI To Soon Release New Rs 20 Rs Note
Author
Bengaluru, First Published Dec 25, 2018, 3:03 PM IST

ನವದೆಹಲಿ(ಡಿ.25): 200 ರೂ. ಹಾಗೂ 2,000 ರೂ. ಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ಇದೀಗ 20 ರೂ. ಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲು ಮುಂದಾಗಿದೆ. 

500 ರೂ. ಹಾಗೂ 1,000 ರೂ. ಮುಖಬೆಲೆಯ ನೋಟುಗಳ ಮೇಲೆ ಕೇಂದ್ರ ಸರ್ಕಾರ ನಿಷೇಧ ಹೇರಿದ ಬಳಿಕ, ಆರ್‌ಬಿಐ 50 ರೂ., 100 ರೂ., 500 ರೂ., 200 ರೂ. ಹಾಗೂ 2,000 ರೂ. ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಿತ್ತು. 

2016ರ ನವೆಂಬರ್ ಬಳಿಕ ಆರ್‌ಬಿಐ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭಾವಚಿತ್ರವನ್ನು ಹೊಂದಿರುವ ಹೊಸ ನೋಟುಗಳನ್ನು ಪರಿಚಯಿಸುತ್ತಿದೆ. ಈ ಹೊಸ ನೋಟುಗಳು ಹಿಂದಿನ ನೋಟುಗಳಿಗಿಂತ ಗಾತ್ರ ಹಾಗೂ ವಿನ್ಯಾಸದಲ್ಲಿ ಭಿನ್ನತೆಗಳನ್ನು ಹೊಂದಿದೆ.

ಮಾರುಕಟ್ಟೆಗೆ ಬರಲಿದೆ ಹೊಸ ನೋಟು : ಹಳೆಯ ನೋಟು ಏನಾಗುತ್ತದೆ..?

2016 ಮಾರ್ಚ್ 31ರವರೆಗೂ 20 ರೂ. ಮುಖಬೆಲೆಯ ಒಟ್ಟು 4.92 ಬಿಲಿಯನ್ ನೋಟುಗಳು ಚಾಲನೆಯಲ್ಲಿರುವುದಾಗಿ ಹೇಳಲಾಗಿದೆ. 2018ರ ಮಾರ್ಚ್ ವೇಳೆ ಇದರ ಚಾಲನೆ ದುಪ್ಪಟ್ಟಾಗಿದೆ ಎಂದು ಅಂದಾಜಿಸಲಾಗಿದೆ.

ರಾಜ್ಯದ ಬ್ಯಾಂಕುಗಳ ಬಗ್ಗೆ RBI ಹೇಳಿದ ಆತಂಕದ ಸಂಗತಿ

‘ಮೀಸಲು ಹಣದ ಮೇಲೆ ಕಣ್ಣು: ಆರ್ಥಿಕತೆಗೆ ಮಾಡಲಿದೆ ಹುಣ್ಣು’!

Follow Us:
Download App:
  • android
  • ios