ಬ್ಯಾಂಕ್‌ ವಿಲೀನ ತೃಪ್ತಿ ತಂದಿದೆಯೇ?: ಸಮೀಕ್ಷೆಗೆ ಆರ್‌ಬಿಐ ನಿರ್ಧಾರ| ಕರ್ನಾಟಕ ಸೇರಿ 21 ರಾಜ್ಯಗಳಲ್ಲಿ ಸಮೀಕ್ಷೆ| 20 ಸಾವಿರ ಗ್ರಾಹಕರ ಅಭಿಪ್ರಾಯ ಸಂಗ್ರಹ

ನವದೆಹಲಿ(ಏ.27): ಇತ್ತೀಚೆಗೆ ಕೈಗೊಳ್ಳಲಾದ ಸಾರ್ವಜನಿಕ ವಲಯದ ಬ್ಯಾಂಕ್‌ ವಿಲೀನದ ಕ್ರಮಗಳು ಠೇವಣಿದಾರರಿಗೆ ತೃಪ್ತಿ ತಂದಿವೆಯೇ ಎಂಬ ಕ್ರಮಗಳ ಬಗ್ಗೆ ಸಮೀಕ್ಷೆ ನಡೆಸಲು ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ನಿರ್ಧರಿಸಿದೆ.

ಕರ್ನಾಟಕ ಮೂಲದ ಹಲವು ಬ್ಯಾಂಕ್‌ಗಳು ಸೇರಿದಂತೆ ದೇಶದ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳ ವಿಲೀನ ನಡೆದಿತ್ತು. ಇದಕ್ಕೆ ಜನರ ಆಕ್ರೋಶ ವ್ಯಕ್ತವಾಗಿತ್ತು.

ಪ್ರಸ್ತಾವಿತ ಸಮೀಕ್ಷೆಯಲ್ಲಿ ಕರ್ನಾಟಕ ಸೇರಿದಂತೆ 21 ರಾಜ್ಯಗಳಲ್ಲಿ 20 ಸಾವಿರ ಜನರ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. 22 ಪ್ರಶ್ನೆಗಳನ್ನು ಕೇಳಲಾಗುತ್ತದೆ. ಇದರಲ್ಲಿ 4 ಪ್ರಶ್ನೆಗಳು ಆಯಾ ಶಾಖೆಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಅವುಗಳಿಗೆ ‘ತುಂಬಾ ಒಪ್ಪಿಗೆ ಇದೆ, ಒಪ್ಪಿಗೆ ಇದೆ, ತಟಸ್ಥ, ಒಪ್ಪಿಗೆ ಇಲ್ಲ, ತುಂಬಾ ಒಪ್ಪುವುದಿಲ್ಲ’ ಎಂಬ 5 ಆಯ್ಕೆಗಳನ್ನು ನೀಡಲಾಗುತ್ತದೆ ಎಂದು ಆರ್‌ಬಿಐ ಹೇಳಿದೆ.

ದೇನಾ ಬ್ಯಾಂಕು ಹಾಗೂ ವಿಜಯಾ ಬ್ಯಾಂಕುಗಳು ಬ್ಯಾಂಕ್‌ ಆಫ್‌ ಬರೋಡಾದಲ್ಲಿ, ಓರಿಯಂಟಲ್‌ ಬ್ಯಾಂಕ್‌ ಹಾಗೂ ಯುನೈಟೆಡ್‌ ಬ್ಯಾಂಕುಗಳು ಪಂಜಾಬ್‌ ನ್ಯಾಷನಲ್‌ ಬ್ಯಾಂಕಿನಲ್ಲಿ, ಸಿಂಡಿಕೇಟ್‌ ಬ್ಯಾಂಕು ಹಾಗೂ ಕೆನರಾ ಬ್ಯಾಂಕುಗಳು ಇಂಡಿಯನ್‌ ಬ್ಯಾಂಕ್‌ನಲ್ಲಿ, ಆಂಧ್ರಬ್ಯಾಂಕ್‌ ಹಾಗೂ ಕಾರ್ಪೋರೆಷನ್‌ ಬ್ಯಾಂಕ್‌ಗಳು ಯೂನಿಯನ್‌ ಬ್ಯಾಂಕ್‌ನಲ್ಲಿ ವಿಲೀನವಾಗಿದ್ದವು