Asianet Suvarna News Asianet Suvarna News

2 ಸಾವಿರ ರೂ. ನೋಟು ಮುದ್ರಣ ನಿಲ್ಲಿಸಿದ RBI: ಮುಂದೇನು?

2 ಸಾವಿರ ರೂ. ನೋಟು ಮುದ್ರಣ ನಿಲ್ಲಿಸಿದ RBI| ಹಂತ ಹಂತವಾಗಿ ನೋಟುಗಳ ಮುದ್ರಣ ಕಡಿಮೆ ಮಾಡಿದ ಆರ್‌ಬಿಐ| 2 ಸಾವಿರ ರೂ. ಮುಖ ಬೆಲೆಯ ವ್ಯಾಲ್ಯೂ ಟರ್ಮ್ ಶೇ. 50.2ರಿಂದ ಶೇ.31.2ಕ್ಕೆ ಇಳಿಕೆ| ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ನೀಡಿದ ಭಾರತೀಯ ರಿಸರ್ವ್ ಬ್ಯಾಂಕ್|

RBI Stops Production Of 2 Thousand Rupee Notes
Author
Bengaluru, First Published Jan 21, 2020, 6:05 PM IST

ನವದೆಹಲಿ(ಜ.21): ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ 2 ಸಾವಿರ ರೂ. ಮುಖ ಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ.

ಮಾಹಿತಿ ಹಕ್ಕು ಕಾಯ್ದೆಯಡಿ ನೀಡಲಾಗಿರುವ ಮಾಹಿತಿಯಂತೆ ಕಳೆದ ಹಣಕಾಸು ವರ್ಷದಲ್ಲಿ ಆರ್‌ಬಿಐ ಒಂದೇ ಒಂದು 2 ಸಾವಿರ ರೂ. ಮುಖ ಬೆಲೆಯ ನೋಟುಗಳನ್ನು ಮುದ್ರಿಸಿಲ್ಲ.

ಆರ್‌ಬಿಐ ನೀಡಿರುವ ಮಾಹಿತಿಯಂತೆ 2016-17ರ ಹಣಕಸು ವರ್ಷದಲ್ಲಿ 2 ಸಾವಿರ ರೂ. ಮುಖ ಬೆಲೆಯ ಒಟ್ಟು 3,542.991 ಮಿಲಿಯನ್ ನೋಟುಗಳನ್ನು ಮುದ್ರಿಸಿತ್ತು. ಅಲ್ಲದೇ 2017-18ರ ಹಣಕಾಸು ವರ್ಷದಲ್ಲಿ 111.507  ಮಿಲಿಯನ್ ನೋಟುಗಳನ್ನು ಮುದ್ರಿಸಿತ್ತು.

ಡಿಮಾನಿಟೈಸೇಶನ್ ಗೆ 3 ವರ್ಷ: ಅಪನಗದೀಕರಣ ಮತ್ತೆ ಆದರೂ ಆಗಬಹುದು!

ಅದರಂತೆ 2018-19ರ ಹಣಕಾಸು ವರ್ಷದಲ್ಲಿ 2 ಸಾವಿರ ರೂ. ಮುಖ ಬೆಲೆಯ ಒಟ್ಟು 46.690 ಮಿಲಿಯನ್ ನೋಟುಗಳನ್ನು ಮುದ್ರಿಸಿತ್ತು. 2016-17ರಲ್ಲಿ 2 ಸಾವಿರ ರೂ. ಮುಖ ಬೆಲೆಯ ನೋಟುಗಳ ಒಟ್ಟು ಬೆಲೆ 6,57,100 ಕೋಟಿ ರೂ. ಆಗಿತ್ತು.

ಆದರೆ 2017-18ರಲ್ಲಿ ಕೇವಲ 15,500 ಕೋಟಿ ರೂ. ಮಾತ್ರ 2 ಸಾವಿರ ರೂ. ಮುಖ ಬೆಲೆಯ ನೋಟುಗಳನ್ನು ಮುದ್ರಿಸಲಾಗಿತ್ತು. ಅಲ್ಲದೇ 2019ರಲ್ಲಿ ಕೇವಲ 6,72,600 ಕೋಟಿ ರೂ. ಮಾತ್ರ ಇದಕ್ಕೆ ಸೇರಿಸಲಾಗಿದೆ.

ಆರ್‌ಬಿಐ ನೀಡಿರುವ ಮಾಹಿತಿ ಪ್ರಕಾರ 2 ಸಾವಿರ ರೂ. ಮುಖ ಬೆಲೆಯ ವ್ಯಾಲ್ಯೂ ಟರ್ಮ್ ಶೇ. 50.2ರಿಂದ ಶೇ.31.2ಕ್ಕೆ ಇಳಿಕೆಯಾಗಿದೆ.

Follow Us:
Download App:
  • android
  • ios