ನವದೆಹಲಿ[ಆ.05]: ಭಾರತೀಯ ರಿಸವ್‌ರ್‍ ಬ್ಯಾಂಕ್‌ನ ದ್ವೈಮಾಸಿಕ ಸಾಲ ನೀತಿ ಬುಧವಾರ ಪ್ರಕಟಗೊಳ್ಳಲಿದೆ. ಈ ವೇಳೆ ಸಾಲದ ಮೇಲಿನ ಬಡ್ಡಿದರವನ್ನು ಶೇ.0.25ರಷ್ಟುಇಳಿಕೆ ಮಾಡುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

ಒಂದು ವೇಳೆ ಇದು ನಿಜವಾದಲ್ಲಿ, ಅದು ಸತತ ನಾಲ್ಕನೇ ಬಡ್ಡಿದರ ಕಡಿತವಾಗಲಿದೆ. ಆರ್ಥಿಕತೆ ಕುಸಿತ ಕಂಡಿದೆ ಎಂಬ ಸುಳಿವುಗಳ ಬೆನ್ನಲ್ಲೇ, ಆರ್ಥಿಕತೆಗೆ ಚೇತರಿಕೆ ನೀಡಲು ಆರ್‌ಬಿಐ ಬಡ್ಡಿದರ ಕಡಿತ ಮಾಡುವ ಎಲ್ಲಾ ಸಾಧ್ಯತೆಗಳೂ ಇವೆ.

ಜೊತೆಗೆ ಹಣದುಬ್ಬರ ಕೂಡಾ ಆರ್‌ಬಿಐನ ಗುರಿಯಾದ ಶೇ.4ಕ್ಕಿಂತ ಕೆಳಗಿರುವ ಹಿನ್ನೆಲೆಯಲ್ಲಿ ಬಡ್ಡಿದರ ಇಳಿಕೆ ಸರ್ಕಾರ ಮತ್ತು ಆರ್‌ಬಿಐಗೆ ಚಿಂತೆಯ ವಿಷಯವಾಗದು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.