ಮುಂಬೈ[ಏ.21]: ದೇಶದಲ್ಲಿರುವ ವಾಣಿಜ್ಯ ವ್ಯವಹಾರದ ಬ್ಯಾಂಕ್‌ಗಳು ವಾರಕ್ಕೆ 5 ದಿನ ಕೆಲಸ ಮಾಡಬೇಕೆಂಬ ನಿರ್ದೇಶನ ನೀಡಿಲ್ಲ ಎಂದು ಭಾರತೀಯ ರಿಜರ್ವ್ ಬ್ಯಾಂಕ್‌ ಸ್ಪಷ್ಟನೆ ನೀಡಿದೆ.

ಈ ಬಗ್ಗೆ ಶನಿವಾರ ಪತ್ರಿಕಾಗೋಷ್ಠಿ ನಡೆಸಿದ ಆರ್‌ಬಿಐ, ‘ ವಾಣಿಜ್ಯ ಬ್ಯಾಂಕ್‌ಗಳು ವಾರಕ್ಕೆ 5 ದಿನ ಮಾತ್ರವೇ ಕೆಲಸ ನಿರ್ವಹಿಸಬೇಕು ಎಂಬುದಾಗಿ ಆರ್‌ಬಿಐ ಸೂಚನೆ ನೀಡಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಇದು ವಾಸ್ತವ ಸಂಗತಿಯಲ್ಲ,’ ಎಂದು ಹೇಳಿದೆ.

ಇಂಥ ಯಾವುದೇ ನಿರ್ದೇಶನಗಳನ್ನು ತಾನು ನೀಡಿಲ್ಲ ಎಂದಿದೆ ಆರ್‌ಬಿಐ. ಭಾನುವಾರ ರಜೆ ಹೊರತುಪಡಿಸಿ ಬ್ಯಾಂಕ್‌ಗಳಿಗೆ ತಿಂಗಳ 2ನೇ ಮತ್ತು 4ನೇ ಶನಿವಾರ ರಜೆ ಇರುತ್ತದೆ. ಇತರೆ ಶನಿವಾರಗಳಂದು ಬ್ಯಾಂಕ್‌ಗಳು ದಿನಪೂರ್ತಿ ಕೆಲಸ ಮಾಡುತ್ತಿವೆ.