Asianet Suvarna News Asianet Suvarna News

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ: ಗ್ರಾಹಕರಿಗೆ RBI ಗುಡ್‌ನ್ಯೂಸ್!

* ಇನ್ನು ದೊಡ್ಡ ಮೊತ್ತ ಕೂಡ ತಕ್ಷಣ ವರ್ಗಾವಣೆ ಸಾಧ್ಯ

* ಐಎಂಪಿಎಸ್‌ ಮಿತಿ 2 ಲಕ್ಷ ರೂ.ದಿಂದ 5 ಲಕ್ಷಕ್ಕೇರಿಕೆ

RBI raises IMPS limit from Rs 2 lakh to Rs 5 lakh to promote digital transactions pod
Author
Bangalore, First Published Oct 9, 2021, 10:13 AM IST
  • Facebook
  • Twitter
  • Whatsapp

ಮುಂಬೈ(ಅ.09): ಇಮ್ಮಿಡಿಯೆಟ್‌ ಪೇಮೆಂಟ್‌ ಸವೀರ್‍ಸ್‌ (Immediate Payment Service) ಅಡಿ ಒಂದು ಸಲಕ್ಕೆ ವರ್ಗಾವಣೆ ಮಾಡಬಹುದಾದ ಹಣದ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್‌(Reserve Bank Of India) 2 ಲಕ್ಷ ರು.ದಿಂದ 5 ಲಕ್ಷ ರು.ಗೆ ಏರಿಕೆ ಮಾಡಿದೆ. ಇಂಟರ್ನೆಟ್‌ ಬ್ಯಾಂಕಿಂಗ್‌(Internet Banking), ಮೊಬೈಲ್‌ ಬ್ಯಾಂಕಿಂಗ್‌ ಆ್ಯಪ್‌ಗಳು(Mobile Banking Apps), ಬ್ಯಾಂಕ್‌ ಶಾಖೆಗಳು, ಎಟಿಎಂ, ಎಸ್‌ಎಂಎಸ್‌ ಮತ್ತು ಐವಿಆರ್‌ಎಸ್‌ ಮೂಲಕ ಗ್ರಾಹಕರು ತಮ್ಮ ಖಾತೆಯಿಂದ ಬೇರೊಂದು ಖಾತೆಗೆ ತಕ್ಷಣ ಹಣ ವರ್ಗಾವಣೆ ಮಾಡಲು ಈ ಸೇವೆ ಪಡೆಯಬಹುದು.

ನ್ಯಾಷನಲ್‌ ಪೇಮೆಂಟ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ (National Payments Corporation of India) ಮೂಲಕ ಸರ್ಕಾರ ಒದಗಿಸುತ್ತಿರುವ ಈ ಸೇವೆಗೆ ಇಷ್ಟು ದಿನ ಒಂದು ವ್ಯವಹಾರಕ್ಕೆ 2 ಲಕ್ಷ ರು.ನ ಮಿತಿಯಿತ್ತು. ಅದನ್ನು ಆರ್‌ಬಿಐ(Reserve Bank Of India) ಶುಕ್ರವಾರ 5 ಲಕ್ಷ ರು.ಗೆ ಏರಿಸಿದೆ. ಹೀಗಾಗಿ ದೊಡ್ಡ ಮೊತ್ತದ ಹಣ ವರ್ಗಾವಣೆ ಕೂಡ ಇನ್ನುಮುಂದೆ ಸುಲಭ ಹಾಗೂ ತ್ವರಿತವಾಗಲಿದೆ.

ಬಡ್ಡಿ ದರ ಬದಲಿಲ್ಲ

ಆರ್‌ಬಿಐ ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಿದ್ದು, ಸತತ 8ನೇ ಬಾರಿಯೂ ಬಡ್ಡಿ ದರಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ಠೇವಣಿಗಳು ಹಾಗೂ ವಿವಿಧ ಸಾಲಗಳಿಗೆ ಈ ಹಿಂದಿನ ಬಡ್ಡಿ ದರಗಳೇ ಮುಂದುವರೆಯಲಿವೆ. ರೆಪೋ ದರ (ಬ್ಯಾಂಕುಗಳಿಗೆ ಆರ್‌ಬಿಐ ನೀಡುವ ಸಾಲದ ಮೇಲಿನ ಬಡ್ಡಿ ದರ) ಶೇ.4ಕ್ಕೆ ಹಾಗೂ ರಿವರ್ಸ್‌ ರೆಪೋ ದರ (ಬ್ಯಾಂಕುಗಳಿಂದ ಆರ್‌ಬಿಐ ಪಡೆಯುವ ಸಾಲಕ್ಕೆ ನೀಡುವ ಬಡ್ಡಿ ದರ) ಶೇ.3.35ಕ್ಕೆ ಸ್ಥಿರಗೊಳಿಸಲಾಗಿದೆ. ಕೋವಿಡ್‌ ಹಿನ್ನೆಲೆಯಲ್ಲಿ ಪ್ರಕಟಿಸಲಾಗಿದ್ದ ಆರ್ಥಿಕ ಉತ್ತೇಜನಾ ಕ್ರಮಗಳನ್ನು ನಿಧಾನವಾಗಿ ಹಿಂಪಡೆಯುವ ಸುಳಿವನ್ನು ಹಣಕಾಸು ನೀತಿಯಲ್ಲಿ ನೀಡಲಾಗಿದೆ.

ಅಕ್ಟೋಬರ್‌ನಲ್ಲಿ ಅರ್ಧ ತಿಂಗಳು ಮುಚ್ಚಿರಲಿವೆ ಬ್ಯಾಂಕ್, ಈ ದಿನಾಂಕ ನೋಟ್‌ ಮಾಡ್ಕೊಳ್ಳಿ!

14 ದಿನ ಮುಚ್ಚಿರಲಿವೆ ಬ್ಯಾಂಕ್

ಆನ್ಲೈನ್ ​​ಬ್ಯಾಂಕಿಂಗ್(Online Banking) ಸೌಲಭ್ಯದ ಇದ್ದರೂ, ಬ್ಯಾಂಕ್ ಮುಚ್ಚಿರುವುದರಿಂದ ಅನೇಕ ಕೆಲಸಗಳು ನಿಲ್ಲುತ್ತವೆ. ಭಾರತೀಯ ರಿಸರ್ವ್ ಬ್ಯಾಂಕಿನ(Reserve Bank Of India) ಮಾರ್ಗಸೂಚಿಗಳ ಪ್ರಕಾರ, ದೇಶದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬ್ಯಾಂಕುಗಳು(Private bank) ಭಾನುವಾರ ಮುಚ್ಚಿರುತ್ತವೆ. ಅಲ್ಲದೇ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರವೂ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ. ಇವೆಲ್ಲದರ ನಡುವೆ, ಈ ವರ್ಷದಲ್ಲಿ ಕೆಲವು ವಿಶೇಷ ಸಂದರ್ಭಗಳಲ್ಲಿ (ಹಬ್ಬಗಳು) ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ. ಅದರಲ್ಲೂ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್‌ಗಳು ಅನೇಕ ದಿನಗಳವರೆಗೆ ಮುಚ್ಚಿರಲಿವೆ. ಹೀಗಿರುವಾಗ ಬ್ಯಾಂಕ್‌ಗಳು ಯಾವುಗ ಮುಚ್ಚಿರಲಿವೆ ಎಂಬುವುದನ್ನು ತಪ್ಪದೇ ತಿಳಿದುಕೊಳ್ಳಿ, ಇಲ್ಲವೆಂದಾದರೆ ಹಬ್ಬದ ಸಮಯದಲ್ಲಿ ನೀವು ಹಣದ ಕೊರತೆಯನ್ನು ಎದುರಿಸಬಹುದು.

ಅಕ್ಟೋಬರ್ 2 ಮತ್ತು 3 ರಂದು ಬ್ಯಾಂಕ್ ಬಂದ್

ಎಲ್ಲಾ ಬ್ಯಾಂಕುಗಳು ತಿಂಗಳ 2 ನೇ ಮತ್ತು 4 ನೇ ಶನಿವಾರದಂದು ಮುಚ್ಚಿರುತ್ತವೆ. ಆದರೆ 2 ಅಕ್ಟೋಬರ್ ಮೊದಲ ಶನಿವಾರವಾಗಿದ್ದರೂ ಮಹಾತ್ಮ ಗಾಂಧಿ ಜಯಂತಿ ನಿಮಿತ್ತ ಬ್ಯಾಂಕ್‌ಗಳು ಕಾರ್ಯ ನಿರ್ವಹಿಸುವುದಿಲ್ಲ. ಅಕ್ಟೋಬರ್ 2 ರಾಷ್ಟ್ರೀಯ ರಜಾದಿನವಾಗಿರುವುದರಿಂದ(National Holiday), ಬ್ಯಾಂಕುಗಳು ಮತ್ತು ಇತರ ಸಂಸ್ಥೆಗಳು ಈ ದಿನ ರಜೆ ಇರುತ್ತದೆ. ಮತ್ತೊಂದೆಡೆ, ಅಕ್ಟೋಬರ್ 3 ಭಾನುವಾರ ಅಂದು ವಾರದ ರಜೆ ಇದೆ..

ಅಕ್ಟೋಬರ್ 6, 9, 10 ರಂದು ಬ್ಯಾಂಕುಗಳು ಮುಚ್ಚಿರುತ್ತವೆ

ಪಶ್ಚಿಮ ಬಂಗಾಳದ ರಾಜಧಾನಿ ಕೋಲ್ಕತ್ತಾದಲ್ಲಿ, ಅಕ್ಟೋಬರ್ 6 ರಂದು ಸಾರ್ವಜನಿಕ ರಜಾದಿನವಾಗಿದೆ ಹೀಗಾಗಿ ಬ್ಯಾಂಕುಗಳು ಮುಚ್ಚಿರಲಿವೆ.  ಇನ್ನು ಅಕ್ಟೋಬರ್ 9 ರಂದು ತಿಂಗಳ ಎರಡನೇ ಶನಿವಾರವಾಗಿರುವುದರಿಂದ ದೇಶದಾದ್ಯಂತದ ಬ್ಯಾಂಕುಗಳು ಮುಚ್ಚಿರಲಿವೆ., ಅಕ್ಟೋಬರ್ 10 ರಂದು , ಭಾನುವಾರದ ಕಾರಣ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಅಕ್ಟೋಬರ್ 12, 13, 14, 15 ರಂದೂ ರಜೆ

ಅಕ್ಟೋಬರ್ ಎರಡನೇ ವಾರದಲ್ಲಿ ನವರಾತ್ರಿ ಆರಂಭವಾಗುತ್ತದೆ. ನವರಾತ್ರಿಯ ಸಂದರ್ಭದಲ್ಲಿ, ಕೋಲ್ಕತಾದಲ್ಲಿ ಅಕ್ಟೋಬರ್ 12 ಮತ್ತು 13 ರಂದು ಬ್ಯಾಂಕ್ ರಜೆ ಇರುತ್ತದೆ. ಅಕ್ಟೋಬರ್ 14 ರಂದು ಚೆನ್ನೈನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಕ್ಟೋಬರ್ 15 ರಂದು ದಸರಾ ದಿನದಂದು, ದೇಶಾದ್ಯಂತ ಬ್ಯಾಂಕುಗಳು ಕಾರ್ಯ ನಿರ್ವಹಿಸುವುದಿಲ್ಲ. ಮತ್ತೊಂದೆಡೆ, ಅಕ್ಟೋಬರ್ 17 ರ ಭಾನುವಾರದಂದು, ಎಲ್ಲಾ ಬ್ಯಾಂಕುಗಳು ಮುಚ್ಚಿರುತ್ತವೆ.

ಅಕ್ಟೋಬರ್ 19, 20, 23, 24 ರಂದು ಬ್ಯಾಂಕುಗಳಿಗೆ ಮತ್ತೆ ರಜೆ

ಅಕ್ಟೋಬರ್ 19 ಪ್ರವಾದಿ ಹಜರತ್ ಮುಹಮ್ಮದ್ ಅವರ ಜನ್ಮದಿನವಾಗಿದ್ದು, ಈ ಕಾರಣದಿಂದಾಗಿ ಅನೇಕ ರಾಜ್ಯಗಳಲ್ಲಿ ಬ್ಯಾಂಕುಗಳು ಮುಚ್ಚಿರಲಿವೆ. ಮತ್ತೊಂದೆಡೆ, ಮಹರ್ಷಿ ವಾಲ್ಮೀಕಿ ಜಯಂತಿ ಅಕ್ಟೋಬರ್ 20 ರಂದು ಆಚರಿಸಲಾಗುತ್ತದೆ, ಈ ಕಾರಣದಿಂದಾಗಿ ಕೋಲ್ಕತ್ತಾದಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ. ಅಕ್ಟೋಬರ್ 23 ನಾಲ್ಕನೇ ಶನಿವಾರವಾಗಿದ್ದು, ಈ ಕಾರಣದಿಂದಾಗಿ ಬ್ಯಾಂಕುಗಳು ಲಾಕ್ ಆಗಿರುತ್ತವೆ. ಅಕ್ಟೋಬರ್ 24 ರಂದು ಭಾನುವಾರವಾದ್ದರಿಂದ ಬ್ಯಾಂಕುಗಳಿಗೆ ರಜೆಯಾಗಿದೆ.

Follow Us:
Download App:
  • android
  • ios