ಬೆಂಗಳೂರು (ಅ. 04): ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಶುಕ್ರವಾರ ದ್ವೈಮಾಸಿಕ ಹಣಕಾಸು ನೀತಿ ಪ್ರಕಟಿಸಲಿದ್ದು, ಬಡ್ಡಿದರ ಕಡಿತ ಘೋಷಣೆ ಮಾಡುವ ನಿರೀಕ್ಷೆಯಿದೆ. ಇದು ಸಾಕಾರಗೊಂಡರೆ ಸಾಲದ ಮೇಲಿನ ಬಡ್ಡಿದರ ಹಾಗೂ ಠೇವಣಿ ಮೇಲಿನ ಬಡ್ಡಿದರಗಳು ಇಳಿಕೆಯಾಗಲಿವೆ. ಜತೆಗೆ ಸತತ 5ನೇ ಬಾರಿ ಬಡ್ಡಿದರ ಕಡಿತ ಘೋಷಣೆ ಮಾಡಿದಂತಾಗುತ್ತದೆ.

ಹಲವು ಸೌಲಭ್ಯಗಳೊಂದಿಗೆ ಗ್ರಾಹಕರ ಬಳಿಗೆ ‘ಬ್ಯಾಂಕ್ ಆಫ್ ಇಂಡಿಯಾ’ ಹೊಸಹೆಜ್ಜೆ

ಆರ್ಥಿಕ ಹಿಂಜರಿತ ಭೀತಿ ಇರುವ ಕಾರಣ ಆರ್ಥಿಕತೆಗೆ ಟಾನಿಕ್‌ ನೀಡುವ ಉದ್ದೇಶ ಬಡ್ಡಿದರ ಕಡಿತದ ಹಿಂದಿದೆ. ಇದಲ್ಲದೆ, ಹಣದುಬ್ಬರ ನಿಯಂತ್ರಣದಲ್ಲಿರುವ ಕಾರಣ ಕೂಡ ಬಡ್ಡಿ ಕಡಿತ ಮಾಡಲು ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌ ಈಗಾಗಲೇ ಸುಳಿವು ನೀಡಿದ್ದಾರೆ. ಕೇಂದ್ರ ಸರ್ಕಾರ ಕಾರ್ಪೋರೆಟ್‌ ತೆರಿಗೆ ಕಡಿತ, ವಿದೇಶೀ ಹೂಡಿಕೆದಾರರ ಮೇಲಿನ ಹೆಚ್ಚಿನ ಸರ್ಚಾಜ್‌ರ್‍ ಇಳಿಕೆ ಸೇರಿದಂತೆ ಆರ್ಥಿಕತೆ ಉತ್ತೇಜಕ ಕ್ರಮಗಳನ್ನು ಇತ್ತೀಚೆಗೆ ಪ್ರಕಟಿಸಿತ್ತು.