ಸಾಲಗಾರರಿಗೆ ಗುಡ್ ನ್ಯೂಸ್; ಈ ಬಾರಿಯೂ ರೆಪೋ ದರ ಬದಲಾಯಿಸದ ಆರ್ ಬಿಐ

ಆರ್ ಬಿಐ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಈ ಬಾರಿ ಕೂಡ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹೀಗಾಗಿ ರೆಪೋ ದರ ಈ ಹಿಂದಿನಂತೆ ಶೇ. 6.5ರಷ್ಟೇ ಇರಲಿದೆ. 

RBI keeps benchmark repo rate unchanged 6 5percent Real GDP For FY25 Projected at 7percent anu

ಮುಂಬೈ (ಏ.5): ಈ ಬಾರಿಯೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ)  ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ, ಯಥಾಸ್ಥಿತಿ ಕಾಯ್ದುಕೊಂಡಿದೆ. ಮೂರು ದಿನಗಳ ಆರ್ ಬಿಐ ಹಣಕಾಸು ನೀತಿ ಸಮಿತಿ (ಎಂಪಿಸಿ) ಸಭೆ ನಿರ್ಧಾರವನ್ನು ಇಂದು (ಏ.5) ಪ್ರಕಟಿಸಿದ ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್, ರೆಪೋ ದರವನ್ನು ಈ ಹಿಂದಿನಂತೆ ಶೇ. 6.5ರಲ್ಲೇ ಇರಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ. ಈ ಮೂಲಕ ಸತತ ಏಳನೇ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಹಣದುಬ್ಬರ ದರವನ್ನು ಆರ್ ಬಿಐಯ ನಿಗದಿತ ದರ ಶೇ.4ಕ್ಕೆ ಇಳಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ. ಇನ್ನು 2025ನೇ ಆರ್ಥಿಕ ಸಾಲಿಗೆ ಜಿಡಿಪಿ ದರವನ್ನು ಆರ್ ಬಿಐ ಶೇ.7ಕ್ಕೆ ಅಂದಾಜಿಸಿದೆ. ಆರು ಸದಸ್ಯರ ಮೂರು ದಿನಗಳ ಅವಧಿಯ ಆರ್ ಬಿಐ ಎಂಪಿಸಿ ಸಭೆ ಏಪ್ರಿಲ್ 3ರಂದು ಆರಂಭವಾಗಿದ್ದು, ಇಂದು ಕೊನೆಗೊಳ್ಳಲಿದೆ. ಆರ್ ಬಿಐ 2023ರ ಫೆಬ್ರವರಿಯಂದು ಕೊನೆಯದಾಗಿ ರೆಪೋ ದರದಲ್ಲಿ ಬದಲಾವಣೆ ಮಾಡಿತ್ತು. ಆದ ರೆಪೋ ದರವನ್ನು ಶೇ.6.5ಕ್ಕೆ ಏರಿಕೆ ಮಾಡಿತ್ತು.  ಈ ಬಾರಿ ರೆಪೋ ದರದಲ್ಲಿ ಯಾವುದೇ ಬದಲಾವಣೆಯಾಗದ ಕಾರಣ ಗೃಹಸಾಲ ಸೇರಿದಂತೆ ವಿವಿಧ ಸಾಲಗಳ ಇಎಂಐಯಲ್ಲಿ ಯಾವುದೇ ಬದಲಾವಣೆಯಾಗೋದಿಲ್ಲ. ಇದು ಸಾಲಗಾರರಿಗೆ ನೆಮ್ಮದಿ ನೀಡಿದೆ. 

2023ನೇ ಸಾಲಿನ ನಾಲ್ಕನೇ ತ್ರೈಮಾಸಿಕದಲ್ಲಿ ಭಾರತದ ಆರ್ಥಿಕತೆ ಶೇ.8.4ರಷ್ಟು ಪ್ರಗತಿ ದಾಖಲಿಸಿತ್ತು. ಇದು ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲೇ ಅತೀ ವೇಗದ ಬೆಳವಣಿಗೆ ಆಗಿದೆ. ಆಹಾರ ಪದಾರ್ಥಗಳ ಬೆಲೆಯೇರಿಕೆಯಿಂದ ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ ನಿರೀಕ್ಷೆಗಿಂತ ಹೆಚ್ಚಿನ ಮಟ್ಟದಲ್ಲಿ ಅಂದ್ರೆ ಶೇ.5.09ರಷ್ಟು ಏರಿಕೆಯಾಗಿತ್ತು. ಈ ಮೂಲಕ ಆರ್ ಬಿಐ ನಿಗದಿತ ಹಣದುಬ್ಬರ ದರ ಶೇ.4ಕ್ಕಿಂತ ಹೆಚ್ಚಿತ್ತು. ಇನ್ನು 2025ನೇ ಹಣಕಾಸು ಸಾಲಿಗೆ ಆರ್ ಬಿಐ ಸಿಪಿಐ ಹಣದುಬ್ಬರ ದರವನ್ನು ಶೇ.4ಕ್ಕೆ ಅಂದಾಜಿಸಿದೆ.

ಆರ್ ಬಿಐಗೆ 90 ವರ್ಷ, ಈ ಸಂಭ್ರಮದ ಸವಿನೆನಪಿಗೆ 90ರೂ. ವಿಶೇಷ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ

ಹೊಸ ಹಣಕಾಸು ಸಾಲಿನಲ್ಲಿ ಇದು ಆರ್ ಬಿಐಯ ಮೊದಲ ಎಂಪಿಸಿ ಸಭೆ ಆಗಿದೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಹಾಗೂ ಅಮೆರಿಕದ ಫೆಡರ್ ರಿಸರ್ವ್ದರ ಕಡಿತವನ್ನು ಇನ್ನಷ್ಟೇ ಪ್ರಾರಂಭಿಸಬೇಕಿರುವ ಹಿನ್ನೆಲೆಯಲ್ಲಿ ಆರ್ಥಿಕ ತಜ್ಞರು ಈ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅದು ನಿಜವಾಗಿದೆ.  2023-24ನೇಹಣಕಾಸು ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ನಿರೀಕ್ಷೆಗಿಂತ ಹೆಚ್ಚು ಅಂದರೆ ಶೇ.8.4ರಷ್ಟಿತ್ತು. ಇನ್ನು ಸಿಪಿಐ ಹಣದುಬ್ಬರ ಆರ್ ಬಿಐ ಸುರಕ್ಷಿತ ವಲಯ ಶೇ.2-6ರ ನಡುವೆಯಿದ್ದರೂ ಏರಿಕೆಯ ಮಟ್ಟದಲ್ಲೇ ಇದೆ. 

Bank Holidays:ಏಪ್ರಿಲ್ ತಿಂಗಳಲ್ಲಿ 14 ದಿನ ಬ್ಯಾಂಕ್ ರಜೆ; ಆರ್ ಬಿಐ ರಜಾಪಟ್ಟಿ ಹೀಗಿದೆ ನೋಡಿ

ಸಾಲಗಾರರು ನಿರಾಳ?
ರೆಪೋ ದರ ಅನ್ನೋದು ಆರ್ ಬಿಐ  ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿದರ. ಹೀಗಾಗಿ ರೆಪೋ ದರ ಹೆಚ್ಚಳವಾದ ತಕ್ಷಣ ಬ್ಯಾಂಕುಗಳು ಗೃಹ, ವಾಹನ, ವೈಯಕ್ತಿಕ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಿರಂತರ ರೆಪೋ ದರ ಏರಿಕೆಯಿಂದ ಸಾಲಗಾರರು ಕಂಗೆಟ್ಟಿದ್ದರು. ಬಡ್ಡಿದರ ಹೆಚ್ಚಳದಿಂದ ಗೃಹ ಸಾಲದಂತಹ ದೀರ್ಘಾವಧಿ ಸಾಲ ಹೊಂದಿರೋರಿಗೆ ಇಎಂಐ ಮೊತ್ತ ಹೆಚ್ಚುತ್ತದೆ. ಇಲ್ಲವಾದರೆ ಸಾಲದ ಅವಧಿ ವಿಸ್ತರಣೆಯಾಗುತ್ತದೆ. ಹೀಗಾಗಿ ಈ ಬಾರಿ ಆರ್ ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರೋದು ಸಾಲಗಾರರಿಗೆ ತುಸು ನೆಮ್ಮದಿ ನೀಡಿದೆ. 


 

Latest Videos
Follow Us:
Download App:
  • android
  • ios