ಆರ್ ಬಿಐಗೆ 90 ವರ್ಷ, ಈ ಸಂಭ್ರಮದ ಸವಿನೆನಪಿಗೆ 90ರೂ. ವಿಶೇಷ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ

ಇಂದು ಆರ್ ಬಿಐಗೆ  90 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 90ರೂಪಾಯಿಯ  ನಾಣ್ಯ ಬಿಡುಗಡೆಗೊಳಿಸಿದರು. 

RBI Turns 90 Today PM Modi Issues Special Rs 90 Coin To Mark The Milestone anu

ಮುಂಬೈ (ಏ.1): ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) 90ನೇ ಸಂಸ್ಥಾಪನಾ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಸೋಮವಾರ ವಿಶೇಷ ನಾಣ್ಯವನ್ನು ಬಿಡುಗಡೆಗೊಳಿಸಿದರು. ಈ ವಿಶೇಷ ನಾಣ್ಯವು ಶೇ.99.99ರಷ್ಟು ಶುದ್ಧವಾದ ಬೆಳ್ಳಿಯಿಂದ ಮಾಡಲ್ಪಟ್ಟಿದ್ದು, ಅಂದಾಜು 40 ಗ್ರಾಂ ತೂಕ ಹೊಂದಿದೆ. ಇದು ಆರ್ ಬಿಐಯ ಶ್ರೀಮಂತ ಇತಿಹಾಸ ಹಾಗೂ 9 ದಶಕಗಳ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಈ ಕಾರ್ಯಕ್ರಮದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್ ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಾಗೂ ಆರ್ ಬಿಐ ಇತರ ಸದಸ್ಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆರ್ ಬಿಐ ವೃತ್ತಿಪರತೆ ಹಾಗೂ ಬದ್ಧತೆಯನ್ನು ಶ್ಲಾಘಿಸಿದರು. ಕಳೆದ ಒಂದು ದಶಕದಲ್ಲಿಆರ್ ಬಿಐ ಹಾಗೂ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಫಲವಾಗಿ ಬ್ಯಾಂಕಿಂಗ್ ವಲಯ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿ, ಯುಪಿಐ ಅನ್ನು ಹೇಗೆ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ ಎಂಬ ವಿಚಾರದ ಬಗ್ಗೆ ಬೆಳಕು ಚೆಲ್ಲಿದರು. ಮುಂದಿನ ಹತ್ತು ವರ್ಷಗಳಲ್ಲಿ ಕೇಂದ್ರೀಯ ಬ್ಯಾಂಕ್ ಮುಂದುವರಿದ ಡಿಜಿಟಲ್ ವಹಿವಾಟುಗಳು ಹಾಗೂ ಆರ್ಥಿಕತೆಯನ್ನು ಒಳಗೊಂಡ ಬೆಳವಣಿಗೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಲಿದೆ ಎಂದು ತಿಳಿಸಿದರು. ಬ್ಲಾಕ್ ಚೈನ್ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಹಾಗೂ ಯಂತ್ರ ಕಲಿಕೆ ಮಹತ್ವದ ಬಗ್ಗೆ ಭಾಷಣದಲ್ಲಿ ಪ್ರಧಾನಿ ಪ್ರಸ್ತಾಪಿಸಿದರು. 

ಭಾರತದ ಆರ್ಥಿಕತೆಯಲ್ಲಿ ಸಮಸ್ಯೆ: ರಘುರಾಂ ರಾಜನ್‌

ನಾಣ್ಯದ ವಿಶೇಷತೆಗಳೇನು?
ಈ ನಾಣ್ಯದ ಮಧ್ಯ ಭಾಗದಲ್ಲಿ ಜನಪ್ರಿಯ ಆರ್ ಬಿಐ ಲಾಂಛನವಿದೆ. ಅದರ ಕೆಳಭಾಗದಲ್ಲಿ “RBI@90” ಎಂದು ಕೆತ್ತಲಾಗಿದೆ. ಇದು ಆರ್ ಬಿಐಯ ದೀರ್ಘ ಇತಿಹಾಸ ಹಾಗೂ ಭಾರತದ ಹಣಕಾಸು ಸುಸ್ಥಿರತೆ ನಿರ್ವಹಣೆಯಲ್ಲಿನ ಅದರ ಅದರ ಪಾತ್ರವನ್ನು ಪ್ರತಿನಿಧಿಸುತ್ತದೆ. ಇನ್ನು ಇದು ಅಶೋಕ ಪಿಲ್ಲರನ ರಾಷ್ಟ್ರೀಯ ಲಾಂಛನವನ್ನು ಕೂಡ ಹೊಂದಿದ್ದು, ದೇವನಾಗರಿ ಲಿಪಿಯಲ್ಲಿ 'ಸತ್ಯಮೇವ ಜಯತೆ'ಎಂದು ಕೆತ್ತಲಾಗಿದೆ. 

ಆರ್ ಬಿಐ ಇತಿಹಾಸ
ಭಾರತೀಯ ರಿಸರ್ವ್ ಬ್ಯಾಂಕ್ 1935ರ ಏಪ್ರಿಲ್ 1ರಂದು ಸ್ಥಾಪನೆಯಾಗಿದೆ.2024ನೇ ಸಾಲಿನ  ಏಪ್ರಿಲ್ 1 ಆರ್​ಬಿಐನ 90ನೇ ಸಂಸ್ಥಾಪನಾ ದಿನವಾಗಿದೆ. ಹಿಲ್ಟನ್ ಯಂಗ್ ಆಯೋಗದ ಶಿಫಾರಸ್ಸುಗಳನ್ನು ಆಧರಿಸಿ ಆರ್ ಬಿಐ ಅನ್ನು ಸ್ಥಾಪಿಸಲಾಗಿದೆ. 

Bank Holidays:ಏಪ್ರಿಲ್ ತಿಂಗಳಲ್ಲಿ 14 ದಿನ ಬ್ಯಾಂಕ್ ರಜೆ; ಆರ್ ಬಿಐ ರಜಾಪಟ್ಟಿ ಹೀಗಿದೆ ನೋಡಿ

ಆರ್ ಬಿಐ ಹಣಕಾಸು ನೀತಿ ಸಮಿತಿ  (ಎಂಪಿಸಿ) ಸಭೆ ಏಪ್ರಿಲ್ 3ರಿಂದ 5ರ ತನಕ ನಡೆಯಲಿದೆ. ತಜ್ಞರ ಪ್ರಕಾರ ಈ ಬಾರಿ ಕೂಡ ಆರ್ ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡೋದಿಲ್ಲ. 2023ರ ಫೆಬ್ರವರಿಯಿಂದ ಆರ್ ಬಿಐ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಬದಲಿಗೆ ರೆಪೋ ದರವನ್ನು ಶೇ.6.5ರಲ್ಲಿಟ್ಟಿದೆ. ರೆಪೋ ದರ ಅನ್ನೋದು ಆರ್ ಬಿಐ  ಬ್ಯಾಂಕುಗಳಿಗೆ ನೀಡುವ ಸಾಲದ ಮೇಲೆ ವಿಧಿಸುವ ಬಡ್ಡಿದರ. ಹೀಗಾಗಿ ರೆಪೋ ದರ ಹೆಚ್ಚಳವಾದ ತಕ್ಷಣ ಬ್ಯಾಂಕುಗಳು ಗೃಹ, ವಾಹನ, ವೈಯಕ್ತಿಕ ಸೇರಿದಂತೆ ವಿವಿಧ ಸಾಲಗಳ ಮೇಲಿನ ಬಡ್ಡಿದರ ಏರಿಕೆ ಮಾಡುತ್ತವೆ. ಕಳೆದ ಒಂದು ವರ್ಷದ ಅವಧಿಯಲ್ಲಿ ನಿರಂತರ ರೆಪೋ ದರ ಏರಿಕೆಯಿಂದ ಸಾಲಗಾರರು ಕಂಗೆಟ್ಟಿದ್ದರು. ಬಡ್ಡಿದರ ಹೆಚ್ಚಳದಿಂದ ಗೃಹ ಸಾಲದಂತಹ ದೀರ್ಘಾವಧಿ ಸಾಲ ಹೊಂದಿರೋರಿಗೆ ಇಎಂಐ ಮೊತ್ತ ಹೆಚ್ಚುತ್ತದೆ. ಇಲ್ಲವಾದರೆ ಸಾಲದ ಅವಧಿ ವಿಸ್ತರಣೆಯಾಗುತ್ತದೆ. ಹೀಗಾಗಿ ಕಳೆದ ಕೆಲವು ತಿಂಗಳಿಂದ ರೆಪೋ ದರದಲ್ಲಿ ಯಾವುದೇ ಏರಿಕೆಯಾಗದಿರೋದು ಸಾಲಗಾರರಿಗೆ ತುಸು ನಿರಾಳತೆ ನೀಡಿದೆ. 
 

Latest Videos
Follow Us:
Download App:
  • android
  • ios