ಮುಂಬೈ[ಅ.26]: ವಿದೇಶಿ ವಿನಿಮಯ ಸಂಗ್ರಹದ ಭಾಗವಾಗಿ ಬರೋಬ್ಬರಿ 618 ಟನ್‌ ಚಿನ್ನ ದಾಸ್ತಾನು ಹೊಂದಿರುವ ಭಾರತೀಯ ರಿಸವ್‌ರ್‍ ಬ್ಯಾಂಕ್‌ (ಆರ್‌ಬಿಐ) ಬಹಳ ವರ್ಷಗಳ ಬಳಿಕ ತನ್ನ ಖಜಾನೆಯಲ್ಲಿರುವ ಚಿನ್ನವನ್ನು ಮಾರಾಟ ಮಾಡಲು ಪ್ರಾರಂಭಿಸಿರುವ ಅಪರೂಪದ ಬೆಳವಣಿಗೆ ಕಂಡುಬಂದಿದೆ.

ಆರ್‌ಬಿಐನ ಹಣಕಾಸು ವರ್ಷ ಜುಲೈನಿಂದ ಪ್ರಾರಂಭವಾಗುತ್ತದೆ. ಅಂದಿನಿಂದ ಈವರೆಗೆ 36 ಸಾವಿರ ಕೋಟಿ ರು. ಮೌಲ್ಯದ ಚಿನ್ನ ಖರೀದಿಸಿರುವ ಆರ್‌ಬಿಐ, 8000 ಕೋಟಿ ರು. ಮೌಲ್ಯದ ಚಿನ್ನವನ್ನು ಮಾರಾಟ ಮಾಡಿದೆ. ಆರ್‌ಬಿಐನ ಅಂಕಿ-ಸಂಖ್ಯೆಗಳೇ ಈ ಮಾಹಿತಿ ನೀಡಿವೆ. ಅ.11ಕ್ಕೆ ಅನುಗುಣವಾಗಿ ಆರ್‌ಬಿಐ ಬಳಿ 1.8 ಲಕ್ಷ ಕೋಟಿ ರು. ಮೌಲ್ಯದಷ್ಟುಚಿನ್ನ ದಾಸ್ತಾನಿದೆ.

ಅಪಾಯ ತಡೆಯಲು ಬೇಕಾದಷ್ಟುಹಣ ಅಂದರೆ, ಆರ್‌ಬಿಐನ ಒಟ್ಟಾರೆ ಹಣದಲ್ಲಿ ಶೇ.5.5ರಿಂದ ಶೇ.6.5ರಷ್ಟನ್ನು ಉಳಿಸಿಕೊಂಡು, ಹೆಚ್ಚುವರಿ ಮೊತ್ತವನ್ನು ಕೇಂದ್ರ ಸರ್ಕಾರಕ್ಕೆ ವರ್ಗಾಯಿಸಬೇಕು ಎಂದು ಬಿಮಲ್‌ ಜಲಾನ್‌ ವರದಿ ತಿಳಿಸಿತ್ತು. ಆ ವರದಿಯನ್ನು ಅಂಗೀಕರಿಸಿದ ಸಂದರ್ಭದಲ್ಲೇ ಚಿನ್ನ ಮಾರಾಟವನ್ನು ಆರ್‌ಬಿಐ ಆರಂಭಿಸಿರುವುದು ಮಹತ್ವ ಪಡೆದುಕೊಂಡಿದೆ.

ಆರ್‌ಬಿಐ ಸಂಗ್ರಹಿಸಿಡುವ ಚಿನ್ನ ಸಂಕಷ್ಟಕಾಲದಲ್ಲಿ ದೇಶದ ಕೈ ಹಿಡಿಯುತ್ತದೆ. 1991ರಲ್ಲಿ ದೇಶಕ್ಕೆ ಆರ್ಥಿಕ ಸಂಕಷ್ಟಎದುರಾಗಿ, ವಿದೇಶಿ ಆಮದಿಗೆ ಹಣ ಪಾವತಿಸದಂತಹ ಸ್ಥಿತಿ ಇದ್ದಾಗ, ಆರ್‌ಬಿಐನಲ್ಲಿದ್ದ 67 ಟನ್‌ ಚಿನ್ನವನ್ನು ಲಂಡನ್‌ ಹಾಗೂ ಸ್ವಿಜರ್ಲೆಂಡ್‌ ಬ್ಯಾಂಕಿನಲ್ಲಿ ಅಂದಿನ ಪ್ರಧಾನಿ ಚಂದ್ರಶೇಖರ ರಾವ್‌ ಅವರು ಅಡ ಇಟ್ಟು, ಹಣ ತಂದಿದ್ದರು.