Asianet Suvarna News Asianet Suvarna News

Tokenization Deadline: ಆನ್ಲೈನ್ ವರ್ತಕರಿಗೆ ಕೊಂಚ ನೆಮ್ಮದಿ, ಟೋಕನೈಸೇಷನ್ ಗಡುವು ಜೂನ್ 30ಕ್ಕೆ ವಿಸ್ತರಣೆ

*ಈ ಹಿಂದೆ ಕಾರ್ಡ್ ಆನ್ ಫೈಲ್ (CoF) ಮಾಹಿತಿ ಅಳಿಸಲು ಡಿಸೆಂಬರ್ 31ರ ತನಕ ಗಡುವು ನೀಡಿದ್ದ RBI
*ಜನವರಿ 1,2022ರಿಂದ ಕಡ್ಡಾಯವಾಗಿ ಟೋಕನೈಸೇಷನ ವ್ಯವಸ್ಥೆ ಜಾರಿಗೊಳಿಸುವಂತೆ ಆದೇಶ
*MPAI ಹಾಗೂ ADIF ಮನವಿ ಹಿನ್ನಲೆಯಲ್ಲಿ ಗಡುವು ವಿಸ್ತರಿಸಿದ RBI

RBI extended card tokenization deadline by 6 months to to June 30 2022 anu
Author
Bangalore, First Published Dec 24, 2021, 1:46 PM IST

ಮುಂಬೈ(ಡಿ.24): ಆನ್ ಲೈನ್ ಪಾವತಿಯಲ್ಲಿ ಟೋಕನೈಸೇಷನ್ (Tokenization) ವ್ಯವಸ್ಥೆ ಅನುಷ್ಠಾನಕ್ಕೆ ನೀಡಿರೋ ಗಡುವನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2022ರ ಜೂನ್ 30ರ ತನಕ ವಿಸ್ತರಿಸಿದೆ. ಟೋಕನೈಸೇಷನ್ ಅಳವಡಿಕೆಗೆ ಕಾರ್ಡ್ ಆನ್ ಫೈಲ್ (CoF)ಮಾಹಿತಿ ಅಳಿಸಿ ಹಾಕಲು ಈ ಹಿಂದೆ ಆರ್ ಬಿಐ 2021ರ ಡಿಸೆಂಬರ್ 31ರ ತನಕ ಗಡುವು ನೀಡಿತ್ತು. ಟೋಕನೈಸೇಷನ್ ಗಡುವು ವಿಸ್ತರಿಸುವಂತೆ ಇತ್ತೀಚೆಗಷ್ಟೇ ಆನ್ ಲೈನ್ ವರ್ತಕರು ಆರ್ ಬಿಐಗೆ ಮನವಿ ಮಾಡಿದ್ದರು.

'ಅನೇಕ ಮನವಿಗಳು ಬಂದಿರೋ ಹಿನ್ನೆಲೆಯಲ್ಲಿ ಕಾರ್ಡ್ ಆನ್ ಫೈಲ್ (CoF)ಟೋಕನೈಸೇಷನ್ ಗಡುವನ್ನು ಆರು ತಿಂಗಳ ಅವಧಿಗೆ ಅಂದ್ರೆ 2022ರ ಜೂನ್ 30ರ ತನಕ ವಿಸ್ತರಿಸಲಾಗಿದೆ. ಈ ದಿನಾಂಕದ ಬಳಿಕ ಕಾರ್ಡ್ ಮಾಹಿತಿಗಳನ್ನು ಅಳಿಸಿ ಹಾಕಬೇಕು.  ಟೋಕನೈಸೇಷನ್ ಜೊತೆಗೆ ಉದ್ಯಮದ ಷೇರುದಾರರು (stakeholders)ಇತರ ಪಾವತಿ ವಿಧಾನಗಳಿಗೆ  (ಇಎಂಐ ಆಯ್ಕೆ, ಸಂಚಿತ ಇ-ಆದೇಶಗಳು) ಅಥವಾ ವಹಿವಾಟಿನ ಬಳಿಕದ ಚಟುವಟಿಕೆ(chargeback handling, dispute resolution,reward /loyalty programme etc.) ಪರ್ಯಾಯ ವಿಧಾನಗಳನ್ನುಆಯ್ಕೆ ಮಾಡಿಕೊಳ್ಳಬಹುದು' ಎಂದು ಆರ್ ಬಿಐ ಸುತ್ತೋಲೆಯಲ್ಲಿ ತಿಳಿಸಿದೆ.

Tokenization:ಗಡುವು ವಿಸ್ತರಣೆ ಕೋರಿ RBIಗೆ ಆನ್ಲೈನ್ ವರ್ತಕರ ಮನವಿ

ಟೋಕನೈಸೇಷನ್ ವ್ಯವಸ್ಥೆ ಅನುಷ್ಠಾನಕ್ಕೆ ನೀಡಿರೋ ಗಡುವನ್ನು ವಿಸ್ತರಿಸುವಂತೆ ಕೋರಿ ಭಾರತದ ಪಾವತಿ ವರ್ತಕರ ಒಕ್ಕೂಟ (MPAI) ಹಾಗೂ ಡಿಜಿಟಲ್ ಇಂಡಿಯಾ ಫೌಂಡೇಷನ್ ಒಕ್ಕೂಟ (ADIF) ಡಿ.22ರಂದು  ಭಾರತೀಯ ರಿಸರ್ವ್ ಬ್ಯಾಂಕ್ ಗೆ (RBI) ಮನವಿ ಸಲ್ಲಿಸಿದ್ದವು.  ಈ ಮನವಿಯನ್ನು ಪರಿಗಣಿಸಿದ ಆರ್ ಬಿಐ  ಟೋಕನೈಸೇಷನ್ ಗಡುವು ವಿಸ್ತರಿಸಿದೆ.  

2022ರ ಜನವರಿ 1ರಿಂದ ಎಲ್ಲ ಆನ್ ಲೈನ್ ವರ್ತಕರು ಹಾಗೂ ಇ-ಪಾವತಿ ಅಪ್ಲಿಕೇಷನ್ ಗಳು ಕಡ್ಡಾಯವಾಗಿ ಟೋಕನೈಸೇಷನ್ (tokenization) ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಆರ್ ಬಿಐ (RBI)ಈ ಹಿಂದೆ ಸೆಪ್ಟೆಂಬರ್ ನಲ್ಲೇ ನಿರ್ದೇಶನ ನೀಡಿತ್ತು. ಆದ್ರೆ ಕಾರ್ಡ್ ಆನ್ ಫೈಲ್ ಟೋಕನೈಸೇಷನ್(card-on-file tokenization) ವ್ಯವಸ್ಥೆ ಜಾರಿಗೆ ಇನ್ನೂ ಆನ್ ಲೈನ್ ಸಂಸ್ಥೆಗಳು ಸಿದ್ಧಗೊಂಡಿಲ್ಲ. ಈ ವ್ಯವಸ್ಥೆ ಅಳವಡಿಕೆ ಹಾಗೂ ಕಾರ್ಯನಿರ್ವಹಣೆಗೆ ಸಂಬಂಧಿಸಿ ಅನೇಕ ಸವಾಲುಗಳಿರೋ ಕಾರಣ ಇದಕ್ಕೆ ತಕ್ಕುದಾದ ಪರಿಸರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು  ಇನ್ನೂ ಸಮಯದ ಅಗತ್ಯವಿದೆ ಎಂದು MPAI ಹಾಗೂ ADIF ಆರ್ ಬಿಐಗೆ ನೀಡಿರೋ ಮನವಿಯಲ್ಲಿ ತಿಳಿಸಿದ್ದವು. 

Payment Card Tokenization:ಜನವರಿ 1ರಿಂದ ಆನ್ಲೈನ್ ತಾಣಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಕೆಗೆ ಹೊಸ ನಿಯಮ

ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ನಡೆಸೋ ಆನ್ ಲೈನ್ ವಹಿವಾಟುಗಳಲ್ಲಿ ಈ ತನಕ ವರ್ತಕರು, ಪೇಮೆಂಟ್ ಗೇಟ್ ವೇಗಳು ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಡುತ್ತಿದ್ದವು. ಇದ್ರಿಂದ ಆ ಗ್ರಾಹಕ ಇನ್ನೊಮ್ಮೆ ಅದೇ ಆನ್ ಲೈನ್ ಸಂಸ್ಥೆಯಿಂದ ಖರೀದಿ ಮಾಡೋವಾಗ ಕಾರ್ಡ್ ಮಾಹಿತಿಗಳನ್ನು ದಾಖಲಿಸಬೇಕಾದ ಅಗತ್ಯವಿರಲಿಲ್ಲ. ಇದ್ರಿಂದ ತಕ್ಷಣವೇ ಪಾವತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿತ್ತು. ಇದು ವರ್ತಕ ಹಾಗೂ ಗ್ರಾಹಕ ಇಬ್ಬರಿಗೂ ಸಮಯ ಉಳಿತಾಯ ಮಾಡುತ್ತಿತ್ತು. ಆದ್ರೆ  ಟೋಕನೈಸೇಷನ್ ಜಾರಿಗೆ ಬಂದ ಬಳಿಕ ಈ ವ್ಯವಸ್ಥೆ ಇರೋದಿಲ್ಲ. ನೀವು ಆನ್ ಲೈನ್ ವ್ಯಾಪಾರ ತಾಣದಲ್ಲಿ ಖರೀದಿ ಪ್ರಾರಂಭಿಸಿದ ತಕ್ಷಣ ವರ್ತಕ ಟೋಕನೈಸೇಷನ್ ಪ್ರಕ್ರಿಯೆಗೆ ಚಾಲನೆ ನೀಡುತ್ತಾನೆ. ನಿಮ್ಮ ಡೆಬಿಟ್ /ಕ್ರೆಡಿಟ್ ಕಾರ್ಡ್ ಟೋಕನೈಸೇಷನ್ ಮಾಡಲು ಅನುಮತಿ ಕೇಳುತ್ತಾನೆ. ನೀವು ಅನುಮತಿ ನೀಡಿದ ತಕ್ಷಣ ಕಾರ್ಡ್ ನೆಟ್ ವರ್ಕ್ಗೆ ಟೋಕನ್ ಕೋರಿ ಮನವಿ ಕಳುಹಿಸುತ್ತಾನೆ. ಆ ನಿರ್ದಿಷ್ಟ ಕಾರ್ಡ್ಗೆ ಸಂಬಂಧಿಸಿ ಕಾರ್ಡ್ ನೆಟ್ ವರ್ಕ್ 16 ಅಂಕೆಗಳ ಟೋಕನ್ ಸೃಷ್ಟಿಸಿ  ವರ್ತಕನಿಗೆ  ಕಳುಹಿಸುತ್ತದೆ. ಈ ಟೋಕನ್ ಅನ್ನು ವರ್ತಕ ಸೇವ್ ಮಾಡಿಟ್ಟುಕೊಳ್ಳುತ್ತಾನೆ.  ಆದ್ರೆ ಈ ಟೋಕನ್ ಮೂಲಕ ಯಾವುದೇ ವಹಿವಾಟು ನಡೆಸಲು ಗ್ರಾಹಕರು ಒಟಿಪಿ(OPT)ಹಾಗೂ ಸಿವಿವಿ( CVV)ಸಂಖ್ಯೆ ನಮೂದಿಸೋ ಮೂಲಕ ಅನುಮತಿ ನೀಡೋದು ಅಗತ್ಯ.

Follow Us:
Download App:
  • android
  • ios