Tokenization:ಗಡುವು ವಿಸ್ತರಣೆ ಕೋರಿ RBIಗೆ ಆನ್ಲೈನ್ ವರ್ತಕರ ಮನವಿ
*ಜನವರಿ 1ರಿಂದ ಆನ್ ಲೈನ್ ಪಾವತಿಯಲ್ಲಿ ಟೋಕನೈಸೇಷನ್ ವ್ಯವಸ್ಥೆಅಳವಡಿಕೆಗೆ RBI ಸೂಚನೆ
*ವ್ಯವಸ್ಥೆ ಅಳವಡಿಕೆಗೆ ಸಂಬಂಧಿಸಿ ಸವಾಲುಗಳಿರೋ ಕಾರಣ ಗಡುವು ವಿಸ್ತರಿಸುವಂತೆ ಆನ್ ಲೈನ್ ವರ್ತಕರ ಮನವಿ
*MPAI ಹಾಗೂ ADIF ಪ್ರತಿನಿಧಿಗಳಿಂದ RBIಗೆ ಮನವಿ
ನವದೆಹಲಿ (ಡಿ.22): ಆನ್ ಲೈನ್ ಪಾವತಿಯಲ್ಲಿ ಟೋಕನೈಸೇಷನ್ ವ್ಯವಸ್ಥೆ ಅನುಷ್ಠಾನಕ್ಕೆ ನೀಡಿರೋ ಗಡುವನ್ನು ವಿಸ್ತರಿಸುವಂತೆ ಕೋರಿ ಭಾರತದ ಪಾವತಿ ವರ್ತಕರ ಒಕ್ಕೂಟ (MPAI) ಹಾಗೂ ಡಿಜಿಟಲ್ ಇಂಡಿಯಾ ಫೌಂಡೇಷನ್ ಒಕ್ಕೂಟ (ADIF) ಬುಧವಾರ ಭಾರತೀಯ ರಿಸರ್ವ್ ಬ್ಯಾಂಕ್ ಗೆ (RBI) ಮನವಿ ಮಾಡಿವೆ.
2022ರ ಜನವರಿ 1ರಿಂದ ಎಲ್ಲ ಆನ್ ಲೈನ್ ವರ್ತಕರು ಹಾಗೂ ಇ-ಪಾವತಿ ಅಪ್ಲಿಕೇಷನ್ ಗಳು ಕಡ್ಡಾಯವಾಗಿ ಟೋಕನೈಸೇಷನ್ (tokenization) ವ್ಯವಸ್ಥೆಯನ್ನು ಜಾರಿಗೊಳಿಸುವಂತೆ ಆರ್ ಬಿಐ (RBI) ಸೆಪ್ಟೆಂಬರ್ ನಲ್ಲೇ ನಿರ್ದೇಶನ ನೀಡಿತ್ತು. ಆದ್ರೆ ಕಾರ್ಡ್ ಆನ್ ಫೈಲ್ ಟೋಕನೈಸೇಷನ್(card-on-file tokenization) ವ್ಯವಸ್ಥೆ ಜಾರಿಗೆ ಇನ್ನೂ ಆನ್ ಲೈನ್ ಸಂಸ್ಥೆಗಳು ಸಿದ್ಧಗೊಂಡಿಲ್ಲ. ಈ ವ್ಯವಸ್ಥೆ ಅಳವಡಿಕೆ ಹಾಗೂ ಕಾರ್ಯನಿರ್ವಹಣೆಗೆ ಸಂಬಂಧಿಸಿ ಅನೇಕ ಸವಾಲುಗಳಿರೋ ಕಾರಣ ಇದಕ್ಕೆ ತಕ್ಕುದಾದ ಪರಿಸರ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಇನ್ನೂ ಸಮಯದ ಅಗತ್ಯವಿದೆ ಎಂದು MPAI ಹಾಗೂ ADIF ತಿಳಿಸಿವೆ.
Payment Card Tokenization:ಜನವರಿ 1ರಿಂದ ಆನ್ಲೈನ್ ತಾಣಗಳಲ್ಲಿ ಕ್ರೆಡಿಟ್, ಡೆಬಿಟ್ ಕಾರ್ಡ್ ಬಳಕೆಗೆ ಹೊಸ ನಿಯಮ
ಆನ್ ಲೈನ್ ಪಾವತಿಯನ್ನು(Online payment) ಹೆಚ್ಚು ಸುರಕ್ಷಿತವಾಗಿಡಲು ಹಾಗೂ ಡೆಬಿಟ್/ಕ್ರೆಡಿಟ್ ಕಾರ್ಡ್ ಸುರಕ್ಷತೆ ಹೆಚ್ಚಿಸಲು ಆನ್ಲೈನ್ ವ್ಯಾಪಾರಿಗಳು (online merchants)ಹಾಗೂ ಪೇಮೆಂಟ್ ಗೇಟ್ ವೇಗಳ(payment gateways) ಬಳಿಯಿರೋ ಕಾರ್ಡ್ ಮಾಹಿತಿಗಳನ್ನು 2022ರ ಜನವರಿ 1ರೊಳಗೆ ಅಳಿಸಿ ಹಾಕುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (RBI) ಸೂಚಿಸಿದೆ. ಅಲ್ಲದೆ, ಗ್ರಾಹಕರ ಮಾಹಿತಿಯನ್ನು ಸೇವ್ ಮಾಡೋ ಬದಲು ಟೋಕನೈಸ್ಡ್ ವಹಿವಾಟುಗಳನ್ನು ನಡೆಸುವಂತೆ ನಿರ್ದೇಶನ ನೀಡಿತ್ತು.
ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ನಡೆಸೋ ಆನ್ ಲೈನ್ ವಹಿವಾಟುಗಳಲ್ಲಿ ಈ ತನಕ ವರ್ತಕರು, ಪೇಮೆಂಟ್ ಗೇಟ್ ವೇಗಳು ಗ್ರಾಹಕರ ಕಾರ್ಡ್ ಮಾಹಿತಿಗಳನ್ನು ಸಂಗ್ರಹಿಸಿಡುತ್ತಿದ್ದವು. ಇದ್ರಿಂದ ಆ ಗ್ರಾಹಕ ಇನ್ನೊಮ್ಮೆ ಅದೇ ಆನ್ ಲೈನ್ ಸಂಸ್ಥೆಯಿಂದ ಖರೀದಿ ಮಾಡೋವಾಗ ಇನ್ನೊಮ್ಮೆ ಕಾರ್ಡ್ ಮಾಹಿತಿಗಳನ್ನು ದಾಖಲಿಸಬೇಕಾದ ಅಗತ್ಯವಿರಲಿಲ್ಲ. ಇದ್ರಿಂದ ತಕ್ಷಣವೇ ಪಾವತಿ ಪ್ರಕ್ರಿಯೆ ನಡೆಸಲು ಸಾಧ್ಯವಾಗುತ್ತಿತ್ತು. ಇದು ವರ್ತಕ ಹಾಗೂ ಗ್ರಾಹಕ ಇಬ್ಬರಿಗೂ ಸಮಯ ಉಳಿತಾಯ ಮಾಡುತ್ತಿತ್ತು. ಉದಾಹರಣೆಗೆ ನೀವು ಒಂದು ಆನ್ ಲೈನ್ ತಾಣದಲ್ಲಿ ಏನೋ ಖರೀದಿಸಿದ ಬಳಿಕ ಪಾವತಿ ಮಾಡೋ ಸಮಯದಲ್ಲಿ ನಿಮ್ಮ ಕ್ರೆಡಿಟ್/ ಡೆಬಿಟ್ ಕಾರ್ಡ್ನ 16 ಅಂಕೆಗಳನ್ನು ನಮೂದಿಸಬೇಕಿತ್ತು. ಆ ಬಳಿಕ CVV ಕೋಡ್ ದಾಖಲಿಸಬೇತ್ತು. ಈ ಎರಡೂ ಮಾಹಿತಿಗಳು ಆ ಸೈಟ್ ನಲ್ಲಿ ಸೇವ್ ಆಗುತ್ತಿತ್ತು. ಇದ್ರಿಂದ ಇನ್ನೊಮ್ಮೆ ಶಾಪಿಂಗ್ ಮಾಡೋವಾಗ ಈ ಎರಡು ಮಾಹಿತಿಗಳನ್ನು ಮತ್ತೆ ನೀಡಬೇಕಾದ ಅಗತ್ಯವಿರಲಿಲ್ಲ.
Tie up for Tokenization:ಮಾಸ್ಟರ್ ಕಾರ್ಡ್-ಗೂಗಲ್ ಪೇ ಒಪ್ಪಂದ; ಟೋಕನೈಸ್ಡ್ ಕಾರ್ಡ್ ಸೇವೆಗೆ ಸಿದ್ಧ
ಆದ್ರೆ ಆರ್ ಬಿಐ ನೀಡಿರೋ ಹೊಸ ನಿರ್ದೇಶನದ ಅನ್ವಯ ಇನ್ನು ಮುಂದೆ ಈ ವ್ಯವಸ್ಥೆ ಜಾರಿಯಲ್ಲಿರೋದಿಲ್ಲ.ಇನ್ನು ಮುಂದೆ ನೀವು ಆನ್ ಲೈನ್ ವ್ಯಾಪಾರ ತಾಣದಲ್ಲಿ ಖರೀದಿ ಪ್ರಾರಂಭಿಸಿದ ತಕ್ಷಣ ವರ್ತಕ ಟೋಕನೈಸೇಷನ್ ಪ್ರಕ್ರಿಯೆಗೆ ಚಾಲನೆ ನೀಡುತ್ತಾನೆ. ನಿಮ್ಮ ಡೆಬಿಟ್ /ಕ್ರೆಡಿಟ್ ಕಾರ್ಡ್ ಟೋಕನೈಸೇಷನ್ ಮಾಡಲು ಅನುಮತಿ ಕೇಳುತ್ತಾನೆ. ನೀವು ಅನುಮತಿ ನೀಡಿದ ತಕ್ಷಣ ಕಾರ್ಡ್ ನೆಟ್ ವರ್ಕ್ಗೆ ಟೋಕನ್ ಕೋರಿ ಮನವಿ ಕಳುಹಿಸುತ್ತಾನೆ. ಆ ನಿರ್ದಿಷ್ಟ ಕಾರ್ಡ್ಗೆ ಸಂಬಂಧಿಸಿ ಕಾರ್ಡ್ ನೆಟ್ ವರ್ಕ್ 16 ಅಂಕೆಗಳ ಟೋಕನ್ ಸೃಷ್ಟಿಸಿ ವರ್ತಕನಿಗೆ ಕಳುಹಿಸುತ್ತದೆ. ಈ ಟೋಕನ್ ಅನ್ನು ವರ್ತಕ ಸೇವ್ ಮಾಡಿಟ್ಟುಕೊಳ್ಳುತ್ತಾನೆ. ಆದ್ರೆ ಈ ಟೋಕನ್ ಮೂಲಕ ಯಾವುದೇ ವಹಿವಾಟು ನಡೆಸಲು ಗ್ರಾಹಕರು ಒಟಿಪಿ(OPT)ಹಾಗೂ ಸಿವಿವಿ( CVV)ಸಂಖ್ಯೆ ನಮೂದಿಸೋ ಮೂಲಕ ಅನುಮತಿ ನೀಡೋದು ಅಗತ್ಯ.