ಭಾರತದ ಪ್ರಮುಖ ವಾಹನ ತಯಾರಿಕಾ ಕಂಪನಿಗಳಲ್ಲೊಂದಾದ ಟಾಟಾ ಮೋಟಾರ್ಸ್ ಸೋಮವಾರ ಪ್ಯಾಸೆಂಜರ್ ವೆಹಿಕಲ್ ವಿಚಾರದಲ್ಲಿ ಹೊಸ ಸಾಧನೆ ಮಾಡಿರುವುದಾಗಿ ಘೋಷಿಸಿದೆ. ತಾನು ಈ ಕ್ಷೇತ್ರದಲ್ಲಿ ನಾಲ್ಕು ಮಿಲಿಯನ್‌ನ ಮೈಲಿಗಲ್ಲು ದಾಟಿರುವುದಾಗಿ ಹೇಳಿದೆ. ಇದೇ ವೇಳೆ ಕಂಪನಿ ಈವರೆಗೆ ನಡೆದುಕೊಂಡು ಬಂದ ಹಾದಿಯನ್ನು ಸುಂದರ ವಿಡಿಯೋ ಮೂಲಕವೂ ಶೇರ್ ಮಾಡಿಕೊಂಡಿದೆ.

ಬದಲಾಗುತ್ತಿರುವ ಅಗತ್ಯಗಳಿಗೆ ಉದ್ಯಮ ಸೃಜನಶೀಲತೆ ಬದಲಾಗಬೇಕು: ರತನ್ ಟಾಟಾ!

ಹೀಗಿರುವಾಗ ಟಾಟಾ ಮೋಟಾರ್ಸ್‌ ಕಂಪನಿಯ ಈ ಸಾಧನೆಗೆ ಟಾಟಾ ಟ್ರಸ್ಟ್‌ನ ಚೇರ್ಮನ್ ಹಾಗೂ ಉದ್ಯಮಿ ರತನ್ ಟಾಟಾ ಶುಭಾಶಯ ಕೋರಿದ್ದಾರೆ. ಟ್ವೀಟ್ ಮೂಲಕ ಕಂಪನಿಯನ್ನು ಅಭಿನಂದಿಸಿರುವ ರತನ್ ಟಾಟಾ 'ನಾಲ್ಕು ಮಿಲಿಯನ್‌ ಮೈಲಿತಾನು ನಡೆದುಗಲ್ಲು ಸಾಧಿಸಿರುವ ನಿಮಗೆ ಅಭಿನಂದನೆಗಳು. ಮುಮದಿನ ಹಾದಿಗೆ ನಾನು ನಿಮಗೆ ಶುಭ ಕೋರುತ್ತೇನೆ' ಎಂದಿದ್ದಾರೆ.

ಇಷ್ಟೇ ಅಲ್ಲದೇ ಕಂಪನಿ ಶೇರ್ ಮಾಡಿಕೊಂಡಿರುವ ತಾನು ನಡೆದು ಬಂದ ಹಾದಿಯ ವಿಡಿಯೋವನ್ನೂ ರತನ್ ಟಾಟಾ ಶೇರ್ ಮಾಡಿಕೊಂಡಿದ್ದಾರೆ. ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲೂ ರತನ್ ಟಾಟಾ ಈ ವಿಡಿಯೋವನ್ನು ಶೇರ್ ಮಾಡಿ ಕಂಪನಿಗೆ ಶುಭ ಕೋರಿದ್ದಾರೆ. 

ಕಂಪನಿಯು ದೇಶದಲ್ಲಿ ಸುರಕ್ಷಿತ ಮತ್ತು ಅತ್ಯಂತ ನವೀನ ಉತ್ಪನ್ನಗಳನ್ನು ತಯಾರಿಸುತ್ತದೆ ಎಂದು ವೀಡಿಯೋದಲ್ಲಿ ಹೆಲಲಾಗಿದೆ. ಟಾಟಾ ಮೋಟಾರ್ಸ್‌ನ ಪ್ರಸ್ತುತ ಕಾರುಗಳಾದ ಡಿಯಾಗೋ, ಟೈಗರ್, ನೆಕ್ಸಸ್, ಅಲ್ಟ್ರೋಸ್ ಮತ್ತು ಹ್ಯಾರಿಯರ್ ಬಗ್ಗೆಯೂ ಇಲ್ಲಿ ತಿಳಿಸಲಾಗಿದೆ.

ಟಾಟಾ ಮೋಟಾರ್ಸ್ ಇತ್ತೀಚೆಗೆ ಪ್ರಯಾಣಿಕರ ವಾಹನ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ರಸ್ತುತ, ಕಂಪನಿಯು ಮಾರುತಿ ಸುಜುಕಿ ಮತ್ತು ಹ್ಯುಂಡೈ ಬಳಿಕದ ಸ್ಥಾನದಲ್ಲಿದೆ. ಗ್ಲೋಬಲ್ ಎನ್‌ಸಿಎಪಿ ಟೆಸ್ಟ್‌ನಲ್ಲಿ ನೆಕ್ಸನ್ ಮತ್ತು ಆಲ್ಟ್ರೋಸ್ ಫೈವ್ ಸ್ಟಾರ್ ಪಡೆದರೆ, ಡಿಯಾಗೋ ಮತ್ತು ಟೈಗರ್ ತಲಾ ಫೋರ್ ಸ್ಟಾರ್ ಪಡೆದಿವೆ.