Asianet Suvarna News Asianet Suvarna News

ಅಪ್ಪ-ಅಮ್ಮ ಡಿವೋರ್ಸ್​ ಬಳಿಕ ಅನಾಥಾಶ್ರಮ ಸೇರಿದ್ದ ರತನ್​ ಟಾಟಾ ದತ್ತು ಪುತ್ರನಾಗಿ ಬೆಳೆದದ್ದೇ ಕುತೂಹಲ!

ಅಪ್ಪ-ಅಮ್ಮ ಇದ್ದರೂ ಅನಾಥಾಶ್ರಮ ಸೇರಿದ್ದ ರತನ್​ ಟಾಟಾ ಅವರು, ಕೊನೆಗೆ ದತ್ತು ಪುತ್ರನಾದರು. ಇವರ ಇತಿಹಾಸವೇ ವಿಚಿತ್ರ ಹಾಗೂ ಕುತೂಹಲವಾದದ್ದು. 
 

Ratan Tata admitted to the orphanage after parents divorce curious fact that he grew up as an adopted son suc
Author
First Published Oct 10, 2024, 12:35 PM IST | Last Updated Oct 10, 2024, 12:35 PM IST

ನಾನು ಆರೋಗ್ಯವಾಗಿದ್ದೇನೆ, ಯಾರೂ ಭಯಪಡಬೇಡಿ ಎನ್ನುತ್ತಲೇ ಇಹಲೋಕ ತ್ಯಜಿಸಿದ, ಜಗತ್ತು ಕಂಡ ಅಪರೂಪದ ಉದ್ಯಮಿ ರತನ್​ ಟಾಟಾ ಅವರ ಇತಿಹಾಸವೇ ಕುತೂಹಲವಾದದ್ದು. ಪ್ರೀತಿಸಿದ ಯುವತಿಯ ಕೈಹಿಡಿಯಲು ಸಾಧ್ಯವಾಗಲಿಲ್ಲ ಎನ್ನುವ ಕಾರಣಕ್ಕೆ ಬದುಕಿನುದ್ದಕ್ಕೂ ಅವಿವಾಹಿತರಾಗಿಯೇ ಉಳಿದ ರತನ್​ ಟಾಟಾ ಅವರ ಬಾಲ್ಯವೂ ನೋವಿನಿಂದ ಕೂಡಿದ್ದೇ.  ಅಪ್ಪ - ಅಮ್ಮ ಬದುಕಿದ್ದರೂ, ದೊಡ್ಡ ಆಸ್ತಿವಂತರಾಗಿದ್ದರೂ ಅನಾಥಾಶ್ರಮದಲ್ಲೇ ಬೆಳೆದಿದ್ದ ರತನ್ ಟಾಟಾ. ರತನ್​ ಟಾಟಾ ಅವರು ಓರ್ವ ದತ್ತು ಪುತ್ರನಾಗಿ ಬೆಳೆದು ಬಂದವರು. ಹಾಗೆಂದು ಇವರಿಗೆ ಅಪ್ಪ-ಅಮ್ಮ ಇರಲಿಲ್ಲವೇ ಎಂದು ಪ್ರಶ್ನಿಸಿದರೆ, ಅದು ಕೂಡ ತಪ್ಪಾಗುತ್ತದೆ. ಏಕೆಂದ್ರೆ ಇವರಿಗೆ ಅಪ್ಪ-ಅಮ್ಮ ಇಬ್ಬರೂ ಇದ್ದರು. ಆದರೂ ಅನಾಥಾಶ್ರಮ ಸೇರಿದರು. ಕೊನೆಗೆ ಅಜ್ಜಿ ಇವರನ್ನು ಅನಾಥಾಶ್ರಮದಿಂದ ದತ್ತು ಪಡೆದು ಸಾಕಿದರು!

ಇಂಥ ದೊಡ್ಡ ಉದ್ಯಮ ಸ್ಥಾಪಿಸಿ ಇಡೀ ವಿಶ್ವದಲ್ಲಿಯೇ ಖ್ಯಾತಿ ಪಡೆದಿರುವ ರತನ್​ ಟಾಟಾ ಅವರ ಬಾಲ್ಯದ್ದು ನೋವಿನ ಕಥೆ. 1937ರ ಡಿಸೆಂಬರ್ 28ರಂದು ಜನಿಸಿದ ರತನ್​ ಅವರು, ಹುಟ್ಟಿದ್ದು  ನಾವಲ್ ಟಾಟಾ ಹಾಗೂ ಸೂನಿ ಟಾಟಾ ಅವರ ಪುತ್ರನಾಗಿ. ಆದರೆ ರತನ್​ ಅವರು ಕೇವಲ ಹತ್ತು ವರ್ಷದವರಿರುವಾಗಿ ಅಪ್ಪ-ಅಮ್ಮ ಡಿವೋರ್ಸ್ ಪಡೆದುಕೊಂಡರು. ಮಗನನ್ನು ಯಾರು ನೋಡಿಕೊಳ್ಳುವುದು ಎಂಬ ಬಗ್ಗೆ ಪತಿ-ಪತ್ನಿಯರಲ್ಲಿ ಕಚ್ಚಾಟ ಶುರುವಾಯಿತು. ಬಹುಶಃ ಇಬ್ಬರಿಗೂ ಮಗನನ್ನು ಇಟ್ಟುಕೊಳ್ಳುವ ಇಚ್ಛೆ ಇರಲಿಲ್ಲವೋ, ಇನ್ನೇನು ಕಾರಣವೋ ಅಥವಾ ದೈವಲೀಲೆಯೋ ಗೊತ್ತಿಲ್ಲ. ಪಾಲಕರು ರತನ್​ ಅವರನ್ನು ತಮ್ಮದೇ ಕುಟುಂಬದ  ಜೆಎನ್ ಪೆಟಿಟ್ ಪಾರ್ಸಿ ಅನಾಥಾಲಯಕ್ಕೆ ಕರೆದೊಯ್ದು ಬಿಟ್ಟುಬಿಟ್ಟರು. ಇದನ್ನು ನೋಡಲಾಗದ ಅವರ ಅಜ್ಜಿ  ನವಾಜ್​ ಬಾಯಿ ಟಾಟಾ ಅವರು ರತನ್​ ಟಾಟಾ ಅವರುನ್ನು ಔಪಚಾರಿಕವಾಗಿ ದತ್ತು ಪಡೆದರು. ರತನ್ ಟಾಟಾ ಅವರ ತಾತ, ಭಾರತ ರತ್ನ ಜೆಆರ್ ಡಿ ಟಾಟಾ ಅವರ ಪತ್ನಿ ನವಾಜ್ ಬಾಯಿ. ಹೀಗೆ ರತನ್​ ಟಾಟಾ ಬೆಳೆದರು.

ಆದರೆ, ಅಷ್ಟೊತ್ತಿಗಾಗಲೇ  ರತನ್ ಟಾಟಾ ಅವರ ತಂದೆ ನಾವಲ್ ಟಾಟಾ ಮತ್ತೊಂದು ಮದುವೆಯಾಗಿ  ನೊಯೆಲ್ ಟಾಟಾ ಎಂಬ ಮತ್ತೊಬ್ಬ ಮಗ ಜನಿಸಿದ್ದ. ಕೊನೆಗೆ ಅಜ್ಜಿ, ಮನೆಗೆ ಹಿಂದುರಿಗದರು. ಅಜ್ಜಿಯ ದತ್ತು ಪುತ್ರನಾಗಿಯೇ ಕಾನೂನಾತ್ಮಕವಾಗಿ ಇದ್ದರೂ ತನ್ನ ಮಲತಾಯಿಯ ಮಗನ ಜೊತೆ ಬೆಳೆದರು. ಹೀಗೆ ಇವರ ಕಥೆ ವಿಚಿತ್ರವಾಗಿದೆ. 

'ನೀವು ಹೋದ್ರಿ ಅಂತ ಎಲ್ಲರೂ ಹೇಳ್ತಿದ್ದಾರೆ' ರತನ್ ಟಾಟಾ ನಿಧನಕ್ಕೆ ಕಣ್ಣೀರಿಟ್ಟ ಮಾಜಿ ಗೆಳತಿ
 
ಇನ್ನು ರತನ್​ ಟಾಟಾ ಅವರ ಫ್ಯಾಮಿಲಿ ಟ್ರೀ ಹೀಗಿದೆ. 
 1. ನುಸ್ಸರ್ವಾಂಜಿ ಟಾಟಾ (1822–1886). ಅವರು ಪಾರ್ಸಿ ಪಾದ್ರಿಯಾಗಿದ್ದು, ಅವರು ವ್ಯಾಪಾರದಲ್ಲಿ ತೊಡಗಿಸಿಕೊಂಡರು, ಕುಟುಂಬದ ಭವಿಷ್ಯದ ಉದ್ಯಮಗಳಿಗೆ ಅಡಿಪಾಯ ಹಾಕಿದರು.
2. ಜಮ್ಶೆಡ್ಜಿ ಟಾಟಾ (1839–1904) ಇವರು ನುಸ್ಸರ್ವಾಂಜಿ ಟಾಟಾ ಅವರ ಮಗ ಹಾಗೂ ಟಾಟಾ ಸಮೂಹದ ಸ್ಥಾಪಕರು "ಭಾರತೀಯ ಉದ್ಯಮದ ಪಿತಾಮಹ" ಎಂದು ಕರೆಯಲ್ಪಡುವ ಅವರು ಸ್ಟೀಲ್ (ಟಾಟಾ ಸ್ಟೀಲ್), ಹೋಟೆಲ್‌ಗಳು (ತಾಜ್ ಮಹಲ್ ಹೋಟೆಲ್) ಮತ್ತು ಜಲವಿದ್ಯುತ್‌ನಲ್ಲಿ ಪ್ರಮುಖ ವ್ಯವಹಾರಗಳನ್ನು ಸ್ಥಾಪಿಸಿದರು.
3. ದೊರಾಬ್ಜಿ ಟಾಟಾ (1859–1932): ಜಮ್ಶೆಡ್ಜಿ ಟಾಟಾ ಅವರ ಹಿರಿಯ ಮಗ. ಜಮ್ಶೆಡ್ಜಿಯವರ ಮರಣದ ನಂತರ ಟಾಟಾ ಗ್ರೂಪ್ ಅನ್ನು ತೆಗೆದುಕೊಂಡಿತು. ಟಾಟಾ ಸ್ಟೀಲ್ ಮತ್ತು ಟಾಟಾ ಪವರ್‌ನಂತಹ ಇತರ ಪ್ರಮುಖ ಉದ್ಯಮಗಳನ್ನು ಸ್ಥಾಪಿಸುವಲ್ಲಿ ಅವರು ನಿರ್ಣಾಯಕ ಪಾತ್ರವನ್ನು ವಹಿಸಿದರು.
4. ರತನ್‌ಜಿ ಟಾಟಾ (1871–1918): ಜಮ್ಶೆಡ್ಜಿ ಟಾಟಾ ಅವರ ಕಿರಿಯ ಮಗ. ಟಾಟಾ ವ್ಯಾಪಾರ ಆಸಕ್ತಿಗಳನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ, ವಿಶೇಷವಾಗಿ ಹತ್ತಿ ಮತ್ತು ಜವಳಿಗಳಲ್ಲಿ.
5. JRD ಟಾಟಾ (ಜಹಾಂಗೀರ್ ರತಂಜಿ ದಾದಾಭೋಯ್ ಟಾಟಾ) (1904–1993): ರತನ್‌ಜಿ ಟಾಟಾ ಮತ್ತು ಸುಝೇನ್ ಬ್ರಿಯೆರ್ (ಫ್ರೆಂಚ್ ಮಹಿಳೆ) ಅವರ ಪುತ್ರ. 50 ವರ್ಷಗಳ ಕಾಲ ಟಾಟಾ ಗ್ರೂಪ್‌ನ ಅಧ್ಯಕ್ಷರು (1938-1991). ಟಾಟಾ ಏರ್‌ಲೈನ್ಸ್‌ನ ಸ್ಥಾಪಕ, ಅದು ನಂತರ ಏರ್ ಇಂಡಿಯಾವಾಯಿತು. ಟಾಟಾ ಸಮೂಹವನ್ನು ವೈವಿಧ್ಯಮಯ ಬಹುರಾಷ್ಟ್ರೀಯ ಸಂಘಟಿತ ಸಂಸ್ಥೆಯಾಗಿ ಬೆಳೆಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

6. ನೇವಲ್ ಟಾಟಾ (1904–1989): ರತನ್​ಜೀ ಟಾಟಾ ಅವರ ದತ್ತುಪುತ್ರ. ಟಾಟಾ ಸಮೂಹದಲ್ಲಿ ಮಹತ್ವದ ವ್ಯಕ್ತಿ. ಅವರ ವಂಶಸ್ಥರಲ್ಲಿ ಇಂದು ಟಾಟಾ ಕುಟುಂಬದಲ್ಲಿ ಇಬ್ಬರು ಪ್ರಮುಖ ವ್ಯಕ್ತಿಗಳು ಸೇರಿದ್ದಾರೆ: ರತನ್ ನೇವಲ್ ಟಾಟಾ (ಜ. 1937): ಟಾಟಾ ಗ್ರೂಪ್‌ನ ಮಾಜಿ ಅಧ್ಯಕ್ಷರು (1991–2012, 2016–2017ರಲ್ಲಿ ಹಂಗಾಮಿ ಅಧ್ಯಕ್ಷರು). ಅವರು ಸಮೂಹದ ಜಾಗತಿಕ ವಿಸ್ತರಣೆ ಮತ್ತು ಜಾಗ್ವಾರ್ ಲ್ಯಾಂಡ್ ರೋವರ್ ಮತ್ತು ಟೆಟ್ಲಿಯಂತಹ ಅಂತರಾಷ್ಟ್ರೀಯ ಬ್ರಾಂಡ್‌ಗಳ ಸ್ವಾಧೀನಕ್ಕೆ ಕಾರಣರಾದರು. ನೋಯೆಲ್ ಟಾಟಾ (ಜ. 1957): ಟಾಟಾ ಇಂಟರ್‌ನ್ಯಾಷನಲ್‌ನ ಅಧ್ಯಕ್ಷರು, ವಿವಿಧ ಟಾಟಾ ಗ್ರೂಪ್ ಕಂಪನಿಗಳಲ್ಲಿ ತೊಡಗಿಸಿಕೊಂಡಿದ್ದಾರೆ.

7. ರತನ್ ಟಾಟಾ (ಜ. 1937): ನೇವಲ್ ಟಾಟಾ ಮತ್ತು ಸೂನಿ ಕಮಿಷರಿಯಟ್ ಅವರ ಪುತ್ರ. ಟಾಟಾ ಸಮೂಹದ ಅತ್ಯಂತ ಪ್ರಸಿದ್ಧ ಆಧುನಿಕ ನಾಯಕ. ಕೋರಸ್, ಜೆಎಲ್‌ಆರ್ ಮತ್ತು ಟೆಟ್ಲಿಯಂತಹ ಸ್ವಾಧೀನಗಳ ಮೂಲಕ ಟಾಟಾ ಗ್ರೂಪ್ ಅನ್ನು ಜಾಗತಿಕವಾಗಿ ಹೆಸರಿಸುವ ಅವರ ದೃಷ್ಟಿಗೆ ಹೆಸರುವಾಸಿಯಾಗಿದೆ.

ತಾತ ಮೊಮ್ಮಗನಂತಿದ್ದ ಅಪರೂಪದ ಸ್ನೇಹವಿದು: ಟಾಟಾಗೆ ನಂಬಿಕಸ್ಥ ಸಹಾಯಕನ ಭಾವುಕ ವಿದಾಯ

8. ನೋಯೆಲ್ ಟಾಟಾ (1957): ರತನ್ ಟಾಟಾ ಅವರ ಮಲ ಸಹೋದರ. ಟಾಟಾ ಗ್ರೂಪ್‌ನ ರಿಟೇಲ್ ಅಂಗವಾದ ಟ್ರೆಂಟ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಟಾಟಾ ಇಂಟರ್‌ನ್ಯಾಷನಲ್ ಮತ್ತು ಇತರ ಟಾಟಾ ಉದ್ಯಮಗಳಲ್ಲಿ ಮಹತ್ವದ ಪಾತ್ರವನ್ನು ಹೊಂದಿದ್ದಾರೆ. ಟಾಟಾ ಕುಟುಂಬವು ವ್ಯಾಪಾರದಷ್ಟೇ ಪರೋಪಕಾರಕ್ಕೂ ಹೆಸರುವಾಸಿಯಾಗಿದೆ. ಟಾಟಾ ಕುಟುಂಬದ ಅನೇಕ ಸದಸ್ಯರು ಚಾರಿಟಬಲ್ ಸಂಸ್ಥೆಗಳು, ಸಂಶೋಧನಾ ಕೇಂದ್ರಗಳು ಮತ್ತು ಫೌಂಡೇಶನ್‌ಗಳನ್ನು ಸ್ಥಾಪಿಸಿದ್ದಾರೆ, ಟಾಟಾ ಟ್ರಸ್ಟ್‌ಗಳು ಸೇರಿದಂತೆ, ಭಾರತದ ಅತಿದೊಡ್ಡ ದತ್ತಿ ಸಂಸ್ಥೆಗಳಲ್ಲಿ ಒಂದಾಗಿದೆ.
 

Latest Videos
Follow Us:
Download App:
  • android
  • ios