Asianet Suvarna News Asianet Suvarna News

ವ್ಹೀಲ್‌ಚೇರ್‌ನಲ್ಲೇ ಕಜ್ರಾ ರೇ ಹಾಡಿಗೆ ನರ್ತಿಸಿದ್ದ ರಾಕೇಶ್ ಜುಂಜುನ್‌ವಾಲಾ: ಹಳೆ ವಿಡಿಯೋ ವೈರಲ್‌

ಮುಂಬೈ ಷೇರು ಮಾರುಕಟ್ಟೆಯ ಬಿಗ್‌ಬುಲ್‌ ಎಂದೇ ಗುರುತಿಸಿಕೊಂಡಿದ್ದ ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಅವರು ಐಶ್ವರ್ಯಾ ರೈ ನಟನೆಯ ಖ್ಯಾತ ಹಾಡು ಕಜ್ರಾರೇ ಹಾಡಿಗೆ ಗಾಲಿಕುರ್ಚಿಯಲ್ಲೇ ಕುಳಿತು ನರ್ತಿಸುತ್ತಿರುವ ವಿಡಿಯೋವೊಂದು ಈಗ ಅವರ ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Rakesh Jhunjhunwala grooving to popular Aishwarya Rai song Kajra Re video while sitting on a wheelchair akb
Author
Bangalore, First Published Aug 14, 2022, 4:46 PM IST

ಇಂದು ಹಠಾತ್‌ ನಿಧನರಾದ ಮುಂಬೈ ಷೇರು ಮಾರುಕಟ್ಟೆಯ ಬಿಗ್‌ಬುಲ್‌ ಎಂದೇ ಗುರುತಿಸಿಕೊಂಡಿದ್ದ ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಅವರು ಐಶ್ವರ್ಯಾ ರೈ ನಟನೆಯ ಖ್ಯಾತ ಹಾಡು ಕಜ್ರಾರೇ ಹಾಡಿಗೆ ಗಾಲಿಕುರ್ಚಿಯಲ್ಲೇ ಕುಳಿತು ನರ್ತಿಸುತ್ತಿರುವ ವಿಡಿಯೋವೊಂದು ಈಗ ಅವರ ನಿಧನದ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹಲವು ಕನಸುಗಳ ಸರದಾರ ರಾಕೇಶ್ ಜುಂಜುನ್‌ವಾಲ್ ಅಷ್ಟು ಉನ್ನತ ಸ್ಥಾನಕ್ಕೆ ಏರಿದ್ದರೂ ತಮ್ಮ ಸರಳ ವ್ಯಕ್ತಿತ್ವದಿಂದ ಅವರು ಸುದ್ದಿಯಾಗಿದ್ದರು. ತನ್ನಿಬ್ಬರು ಅವಳಿ ಮಕ್ಕಳಿಗೆ 25 ತುಂಬುವವರೆಗೂ ಬದುಕಿರಬೇಕು ಎಂದು ಮಹಾದಾಸೆ ಇಟ್ಟುಕೊಂಡಿದ್ದ ಅವರು ಇಂದು ತಮ್ಮ 62ನೇ ವಯಸ್ಸಿಗೆ ದಿಢೀರ್ ಇಹಲೋಕ ತ್ಯಜಿಸಿದ್ದಾರೆ. 

ವಾರದ ಹಿಂದಷ್ಟೇ ಅವರ ಸಹ ಮಾಲೀಕತ್ವದ ಭಾರತದ ಹೊಸ ವಿಮಾನಯಾನ ಸಂಸ್ಥೆಯಾದ ಆಕಾಶ ಏರ್‌ ಕಾರ್ಯಾಚರಣೆ ಆರಂಭಿಸಿತ್ತು. ಆದರೆ ಅದು ಸಂಪೂರ್ಣ ಟೇಕ್‌ಆಫ್ ಆಗುವ ಮೊದಲೇ ರಾಕೇಶ್ ತಮ್ಮೆಲ್ಲಾ ಕನಸುಗಳನ್ನು ಮಧ್ಯದಲ್ಲೇ ಬಿಟ್ಟು ದೂರ ಸಾಗಿದ್ದಾರೆ. ಮೂಲಗಳ ಪ್ರಕಾರ, ಈ ಕೋಟ್ಯಾಧಿಪತಿ ಉದ್ಯಮಿ ಜುಂಜುನ್ವಾಲಾ ಅವರನ್ನು ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ಬೆಳಗ್ಗೆ 6.45 ಕ್ಕೆ ಕರೆತರಲಾಗಿತ್ತು. ಆದರೆ ಅಷ್ಟರಲ್ಲಾಗಲೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದರು. 

ಅನುಭವಿ ಷೇರು ಮಾರುಕಟ್ಟೆ ಹೂಡಿಕೆದಾರರಾಗಿದ್ದ  62 ವರ್ಷದ ರಾಕೇಶ್‌ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಪ್ರಧಾನಿ ಸೇರಿದಂತೆ ಗಣ್ಯಾತಿಗಣ್ಯರು ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಸಂತಾಪ ಸೂಚಿಸಿದ್ದಾರೆ. ವ್ಯವಹಾರ ಸಿನಿಮಾ ಸೇರಿದಂತೆ ಹಲವು ವಿಭಾಗಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ಜುಂಜುನ್‌ವಾಲಾ ಅವರು ವ್ಹೀಲ್‌ಚೇರ್‌ನಲ್ಲಿದ್ದರು ತಮ್ಮದೇ ರೀತಿಯಲ್ಲಿ ಐಶ್ವರ್ಯಾ ರೈ ನಟನೆಯ ಬಂಟಿ ಔರ್ ಬಬ್ಲಿ ಸಿನಿಮಾದ ಖ್ಯಾತ ಹಾಡು ಕಜ್ರಾರೆಗೆ ಕುಳಿತಲ್ಲಿಯೇ ಡಾನ್ಸ್ ಮಾಡಿದ್ದು ಅವರ ಜೀವನೋತ್ಸಾಹಕ್ಕೆ ಸಾಕ್ಷಿಯಾಗಿದೆ.

ನನ್ನ ಅವಳಿ ಮಕ್ಕಳಿಗೆ 25 ವರ್ಷ ಆಗೋವರೆಗೆ ಬದುಕಬೇಕು, ಹಾಗಾಗಿ ಮೀನಿನ ಥರ ನೀರು ಕುಡಿತೇನೆ!

ಕಾಂಗ್ರೆಸ್ ನಾಯಕ ಸಂಜಯ್ ನಿರುಪಮ್ ಅವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ ಜುಂಜುನ್‌ವಾಲಾ ಅವರು ಗಾಲಿಕುರ್ಚಿಯ ಮೇಲೆ ಕುಳಿತು ಅಭಿಷೇಕ್ ಬಚ್ಚನ್, ಅಮಿತಾಬ್ ಬಚ್ಚನ್ ಮತ್ತು ರಾಣಿ ಮುಖರ್ಜಿ ನಟಿಸಿರುವ ಬಂಟಿ ಔರ್ ಬಬ್ಲಿ ಚಿತ್ರದ ಜನಪ್ರಿಯಹಾಡು ಕಜ್ರಾ ರೇಗೆ ಸಂತೋಷದಿಂದ ಕುಣಿಯುತ್ತಿರುವುದನ್ನು ತೋರಿಸುತ್ತದೆ. ರಾಕೇಶ್ ಅವರು ಡಯಾಲಿಸಿಸ್‌ಗೆ ಒಳಗಾಗುತ್ತಿದ್ದ ಸಮಯದಲ್ಲಿ ಈ ವೀಡಿಯೊವನ್ನು ರೆಕಾರ್ಡ್ ಮಾಡಲಾಗಿದೆ. ಆದಾಗ್ಯೂ, ಅವರು ತಮ್ಮ ಮನಸ್ಸಿನಿಂದ ನೃತ್ಯ ಮಾಡುವುದನ್ನು ಯಾವ ಕಾಯಿಲೆಗೂ ತಡೆಯಲಾಗಿಲ್ಲ ಇದು ಅವರು ಬದುಕಿನ ಬಗ್ಗೆ ಇರಿಸಿಕೊಂಡಿದ್ದ ಆಸಕ್ತಿಗೆ ಸಾಕ್ಷಿ.

5 ಸಾವಿರದಿಂದ 46 ಸಾವಿರ ಕೋಟಿ ರೂಪಾಯಿಯ ಸಾಮ್ರಾಜ್ಯ ಕಟ್ಟಿದ್ದ ಬಿಗ್‌ ಬುಲ್‌ ರಾಕೇಶ್‌ ಜುಂಜುನ್‌ವಾಲಾ!

ರಾಕೇಶ್ ಜುಂಜುನ್‌ವಾಲಾ ಇಹಲೋಕ ತ್ಯಜಿಸುತ್ತಿದ್ದಂತೆ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು, ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಕೇವಲ ಹೂಡಿಕೆದಾರರಲ್ಲದೇ ಹಲವು ಕ್ಷೇತ್ರಗಳಲ್ಲಿ ಅವರು ತಮ್ಮ ಕೈಯಾಡಿಸಿದ್ದು, ಅವರು ಆಪ್ಟೆಕ್ ಲಿಮಿಟೆಡ್ ಮತ್ತು ಹಂಗಾಮಾ ಡಿಜಿಟಲ್ ಮೀಡಿಯಾ ಎಂಟರ್‌ಟೈನ್‌ಮೆಂಟ್ ಪ್ರೈವೇಟ್ ಲಿಮಿಟೆಡ್‌ನ ಅಧ್ಯಕ್ಷರೂ ಆಗಿದ್ದರು. 

Follow Us:
Download App:
  • android
  • ios