ನವದೆಹಲಿ(ಆ.8): ಹಗರಗಳಿಂದ ಬೆಂದು ಬೆಂಡಾಗಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ 2018-19ನೇ ಸಾಲಿನ ಹಣಕಾಸು ವರ್ಷದಲ್ಲಿ ಮೊದಲ ತ್ರೈಮಾಸಿಕ ಅವಧಿಯಲ್ಲೇ 940 ಕೋಟಿ ರೂ. ನಷ್ಟ ಅನುಭವಿಸಿದೆ.

2017-18ನೇ ಸಾಲಿನ ಏಪ್ರಿಲ್ - ಜೂನ್ ತ್ರೈಮಾಸಿಕದಲ್ಲಿ ಪಿಎನ್‌ಬಿ 343.40 ಕೋಟಿ ರೂ. ಲಾಭ ಗಳಿಸಿತ್ತು. ಕೇವಲ ಒಂದು ವರ್ಷದ ಹಿಂದೆ ಪಂಜಾಬ್ ನ್ಯಾಷನಲ್ ಬ್ಯಾಂಕ್ ನ ಒಟ್ಟು ಆದಾಯ 14,468.14 ಕೋಟಿ ರೂ.ದಿಂದ 15,072 ಕೋಟಿ ರೂ.ಗೆ ಏರಿಕೆಯಾಗಿತ್ತು. 

ಆದರೆ ಜೂನ್ 30, 2018ರ ವೇಳೆಗೆ ಬ್ಯಾಂಕಿನ ಅನುತ್ಪಾದಕ ಆಸ್ತಿ ಮೌಲ್ಯ(ಎನ್‌ಪಿಎ) ಶೇ.18.26ಕ್ಕೆ ಏರಿಕೆಯಾಗಿರುವುದರಿಂದ ಸಾರ್ವಜನಿಕ ವಲಯದ ಬ್ಯಾಂಕ್ ನಷ್ಟ ಅನುಭವಿಸುತ್ತಿದೆ ಎಂದು ವರದಿ ತಿಳಿಸಿದೆ.