Asianet Suvarna News Asianet Suvarna News

ಚೆಕ್ ಮೂಲಕ ಪೇಮೆಂಟ್ ಮಾಡ್ತೀರಾ?: 15 ದಿನದಲ್ಲಿ ಈ 3 ಬ್ಯಾಂಕ್ Cheque ಬುಕ್ ಬಂದ್!

* ಚೆಕ್‌ ಮೂಲಕ ಹಣ ಪಾವತಿಸ್ತೀರಾ? ಹಾಗಾದ್ರೆ ತಿಳಿದಿರಲಿ ಈ ನೂತನ ನಿಯಮ

* ಇನ್ನು ಹದಿನೈದು ದಿನದಲ್ಲಿ ಅಮಾನ್ಯವಾಗುತ್ತದೆ ಈ ಮೂರು ಬ್ಯಾಂಕ್‌ಗಳ ಚೆಕ್‌ಬುಕ್

Punjab National Bank announces cheque books of these banks will not work from next month pod
Author
Bangalore, First Published Sep 15, 2021, 1:48 PM IST

ನವದೆಹಲಿ(ಸೆ.15): ಚೆಕ್ ಮೂಲಕ ನಡೆಸುವ ಹಣದ ವಹಿವಾಟು ಬಹಳ ಸುರಕ್ಷಿತ ವಿಧಾನವೆಂದು ಪರಿಗಣಿಸಲಾಗಿದೆ. ಜನ ಸಾಮಾನ್ಯರಿಂದ ವ್ಯಾಪಾರಿವರೆಗೆ  ಬಹುತೇಕ ಮಂದಿ ಚೆಕ್ ಮೂಲಕವೇ ದೊಡ್ಡ ದೊಡ್ಡ ಹಣದ ವಹಿವಾಟು ಮಾಡುತ್ತಾರೆ. ನೀವೂ ಚೆಕ್ ಮೂಲಕ ಹಣ ಪಾವತಿಸುತ್ತೀರೆಂದಾದರೆ ಈ ಸುದ್ದಿ ನಿಮಗಾಗಿ. ವಾಸ್ತವವಾಗಿ, ಅಕ್ಟೋಬರ್ 1 ರಿಂದ, ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ (OBC), ಅಲಹಾಬಾದ್ ಬ್ಯಾಂಕ್ (AB) ಮತ್ತು ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ (UNI) ಈ ಮೂರು ಬ್ಯಾಂಕ್ ಖಾತೆದಾರರ ಹಳೆಯ ಚೆಕ್‌ಬುಕ್‌ಗಳು ಅಮಾನ್ಯವಾಗುತ್ತವೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಅನ್ನು ಪಿಎನ್‌ಬಿಯೊಂದಿಗೆ ವಿಲೀನಗೊಳಿಸುವುದರಿಂದ, ಈ ಬ್ಯಾಂಕುಗಳ ಚೆಕ್ ಬುಕ್ ಬಂದ್ ಆಗಲಿದೆ ಎಂಬುವುದು ಉಲ್ಲೇಖನೀಯ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪಿಎನ್‌ಬಿ 'ಇಒಬಿಸಿ ಮತ್ತು ಇಯುಐನ ಹಳೆಯ ಚೆಕ್ ಪುಸ್ತಕಗಳನ್ನು 1-10-2021 ರಿಂದ ಮುಚ್ಚಲಾಗುತ್ತದೆ. ದಯವಿಟ್ಟು ನಿಮ್ಮ ಹಳೆಯ ಇ-ಒಬಿಸಿ ಮತ್ತು ಇ-ಯುಎನ್‍ಐ ಚೆಕ್ ಬುಕ್ ಅನ್ನು ಪಿಎನ್‌ಬಿ ಚೆಕ್ ಬುಕ್‌ನೊಂದಿಗೆ ನವೀಕರಿಸಿದ ಪಿಎನ್‌ಬಿ ಐಎಫ್‌ಎಸ್‌ಸಿ ಕೋಡ್ ಮತ್ತು ಎಂಐಸಿಆರ್ ಕೋಡ್‌ನೊಂದಿಗೆ ಬದಲಾಯಿಸಿ ಕೊಳ್ಳಿ ಎಂದಿದೆ.

ನಿಮ್ಮ ಹಳೆ ಚೆಕ್ ಬುಕ್ ಈ ರೀತಿ ಬದಲಾಯಿಸಿ

ಅಲಹಾಬಾದ್ ಬ್ಯಾಂಕ್ MICR ಕೋಡ್ ಮತ್ತು ಚೆಕ್ ಬುಕ್ 30 ಸೆಪ್ಟೆಂಬರ್ 2021 ರವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಬ್ಯಾಂಕಿಂಗ್ ವಹಿವಾಟುಗಳನ್ನು ಮುಂದುವರಿಸಲು, ನೀವು ಅಕ್ಟೋಬರ್ 1 ರ ಮೊದಲು ಶಾಖೆಗೆ ಹೋಗಿ ಚೆಕ್ ಪುಸ್ತಕವನ್ನು ತೆಗೆದುಕೊಳ್ಳಬಹುದು ಅಥವಾ ಆನ್‌ಲೈನ್‌ನಲ್ಲಿ ಆರ್ಡರ್ ಮಾಡಬಹುದು (ಇಂಟರ್ನೆಟ್ ಬ್ಯಾಂಕಿಂಗ್, ಆನ್‌ಲೈನ್ ಬ್ಯಾಂಕಿಂಗ್).

ಇದೇ ವೇಳೆ ಓರಿಯಂಟಲ್ ಬ್ಯಾಂಕ್ ಮತ್ತು ಯುನೈಟೆಡ್ ಬ್ಯಾಂಕ್‌ನ ಹಳೆಯ ಚೆಕ್‌ಬುಕ್‌ಗಳು ಸೆಪ್ಟೆಂಬರ್ 30 ರ ನಂತರ ಅಮಾನ್ಯವಾಗುತ್ತವೆ. ಈ ಎರಡು ಬ್ಯಾಂಕುಗಳ ಹಳೆಯ ಚೆಕ್ ಪುಸ್ತಕಗಳ ಜಾಗದಲ್ಲಿ, IFSC ಕೋಡ್ ಮತ್ತು PNB ಯ MICR ಕೋಡ್ ಹೊಂದಿರುವ ಹೊಸ ಚೆಕ್‌ಬುಕ್‌ಗಳು ಮಾನ್ಯವಾಗಿರುತ್ತವೆ. ಚೆಕ್ ಬುಕ್ ಗಾಗಿ ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್ ಅಥವಾ PNB One ಸೇವೆಯನ್ನು ಬಳಸಬಹುದು. ಈ ಬ್ಯಾಂಕುಗಳ ಖಾತೆದಾರರು PNB ಶಾಖೆಯಿಂದ ಹೊಸ ಚೆಕ್ ಪುಸ್ತಕವನ್ನು ಸಹ ಪಡೆಯಬಹುದು ಅಥವಾ ಗ್ರಾಹಕರ ಸೇವೆಯನ್ನು ಸಂಪರ್ಕಿಸುವ ಮೂಲಕ ATM ಮೂಲಕ ಹೊಸ ಚೆಕ್ ಪುಸ್ತಕಕ್ಕಾಗಿ ಅರ್ಜಿ ಸಲ್ಲಿಸಬಹುದು.

PNB IFSC ಮತ್ತು MICR ಹೊಂದಿರುವ ನವೀಕರಿಸಿದ PNB ಚೆಕ್ ಬುಕ್ ಅಕ್ಟೋಬರ್ 1, 2021 ರಿಂದ ಮಾನ್ಯವಾಗಿರುತ್ತದೆ ಮತ್ತು ಎಲ್ಲಾ ಗ್ರಾಹಕರು ನವೀಕರಿಸಿದ ಚೆಕ್ ಪುಸ್ತಕವನ್ನು ಪಡೆಯುವುದು ಅಗತ್ಯವಾಗಿದೆ. ಯಾವುದೇ ಪ್ರಶ್ನೆಗೆ, ಗ್ರಾಹಕರು 1800-180-2222 ಅನ್ನು ಸಂಪರ್ಕಿಸಬಹುದು.

Follow Us:
Download App:
  • android
  • ios