Asianet Suvarna News

ಆರ್ಥಿಕ ಪ್ಯಾಕೇಜ್‌ನ ಕೊನೆಯ ಕಂತಿನಲ್ಲಿ ಏಳು ಪ್ರಮುಖ ಘೋಷಣೆ!

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 20  ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್‌ನ 5ನೇ ಹಾಗೂ ಕೊನೆಯ ಕಂತು ಪ್ರಕಟಿಸಿದ್ದಾರೆ. ಮಾಈ ಐದನೇ ಕಂತಿನಲ್ಲಿ ಪ್ರಮುಖ ಏಳು ಘೋಷಣೆಗಳನ್ನು ಮಾಡಿದ್ದಾರೆ.

PSU merger private sector reforms Nirmala Sitharaman gives breakup of Rs 21 lakh crore stimulus
Author
Bangalore, First Published May 17, 2020, 12:55 PM IST
  • Facebook
  • Twitter
  • Whatsapp

ನವದೆಹಲಿ(ಮೇ.17): ಈ ಸಂಬಂಧ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಐದನೇ ಹಾಗೂ ಕೊನೆಯ ಕಂತಿನಲ್ಲಿ ನರೇಗಾಗೆ ಸಂಬಂಧಿಸಿದ ಯೋಜನೆ, ಗ್ರಾಮೀಣ, ನಗರ ಪ್ರದೇಶದ ಅಭಿವೃದ್ಧಿ ಶಿಕ್ಷಣ, ವ್ಯವಹಾರ, ಉದ್ಯಮ ಸ್ನೇಹಿ ವಾತಾವರಣ ನಿರ್ಮಾಣ, ಸಾರ್ವಜನಿಕ ವಲಯ ಉದ್ದಿಮೆಗೆ ಸಂಬಂಧಿಸಿದ ಘೋಷಣೆ ಮಾಡಿದ್ದಾರೆ.

"

ಕಂತು 1: ಸ್ವಾವಲಂಬಿ ಭಾರತಕ್ಕೆ ಮದ್ದು ಯಾವುದೆಂದು ವಿವರಿಸಿದ ವಿತ್ತ ಸಚಿವೆ ನಿರ್ಮಲಾ!

ಐದನೇ ಹಾಗೂ ಕೊನೆಯ ಕಂತಿನಲ್ಲಿ ಏಳು ಘೋಷಣೆ

ನರೇಗಾ ಯೋಜನೆಗೆ ಒಂದು ಲಕ್ಷ ಕೋಟಿ

* ನರೇಗಾ ಯೋಜನೆಗೆ 61 ಸಾವಿರ ಕೋಟಿ ಮೀಸಲು
* ಹೆಚ್ಚುವರಿಯಾಗಿ ನಲ್ವತ್ತು ಸಾವಿರ ಕೋಟಿ ಅನುದಾನ
* ಊರಿಗೆ ಮರಳಿರುವ ವಲಸೆ ಕಾರ್ಮಿಕರಿಗೆ ಕೆಲಸ ನೀಡಲು ನಿರ್ಧಾರ

"

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ 2ನೇ ಹಂತದ ಪ್ಯಾಕೇಜ್ ಪ್ರಕಟಿಸಿದ ನಿರ್ಮಲಾ ಸೀತಾರಾಮನ್!

ಆರೋಗ್ಯ ಕ್ಷೇತ್ರ

* ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಮಾಡಲಾಗುವ ಖರ್ಚು ಹೆಚ್ಚಿಸಲಾಗುವುದು
* ಗ್ರಾಮೀಣ, ನಗರ ಪ್ರದೇಶಗಳಲ್ಲಿ ಆರೋಗ್ಯ ಕೇಂದ್ರಗಳ ಹೆಚ್ಚಳ
* ಸಾರ್ವಜನಿಕ ಆರೋಗ್ಯ ಸುಧಾರಣೆಗೆ ಮಾಡಲಾಗುವ ಖರ್ಚು ಹೆಚ್ಚಿಸಲಾಗುವುದು
* ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಸಾಂಕ್ರಾಮಿಕ ರೋಗ ತಡೆ ಕೇಂದ್ರ
* ಬ್ಲಾಕ್ ಹಂತದಲ್ಲಿ ಸಾರ್ವಜನಿಕ ಆರೋಗ್ಯ ಲ್ಯಾಬ್‌ಗಳ ಸ್ಥಾಪನೆ
* ಭವಿಷ್ಯದಲ್ಲಿ ಬರಬಹುದಾದ ಕೋವಿಡ್ ರೀತಿಯ ಸಂಕಟಗಳ ತಡೆಗೆ ತಯಾರಿ

20 ಲಕ್ಷ ಕೋಟಿ ರೂ ಪ್ಯಾಕೇಜ್: ಯಾರಿಗೆ ಎಷ್ಟು? ಇಲ್ಲಿದೆ ಫುಲ್ ಡಿಟೇಲ್ಸ್...

ಶಿಕ್ಷಣ ಕ್ಷೇತ್ರ

* PM- ಇ ವಿದ್ಯಾ ಯೋಜನೆ ಈ ಕೂಡಲೇ ಜಾರಿ
* ಪ್ರತಿ ತರಗತಿಗೆ ಒಂದೊಂದು ಚಾನೆಲ್
* ಆನ್‌ಲೈನ್ ಶಿಕ್ಷಣದಲ್ಲಿ ರೇಡಿಯೋದ ಪರಿಣಾಮಕಾರಿ ಹೇಳಿಕೆ
* ಕುರುಡ ಕಿವುಡ ಮಕ್ಕಳಿಗೆ ಪ್ರತ್ಯೇಕ ಆನ್‌ಲೈನ್ ಪಾಠಗಳು 
* ಆಡಿಯೋ ಶಿಕ್ಷಣದಲ್ಲಿ ರೇಡಿಯೋ ಹಾಗೂ ಸಮೂಕ ರೇಡಿಯೋ ಪರಿಣಾಮಕಾರಿ ಬಳಕೆ
* ಪ್ರಮುಖ ನೂರು ವಿಶ್ವವಿದ್ಯಾಲಯಗಳಲ್ಲಿ ಆನ್‌ಲೈನ್ ತರಗತಿ ಆರಂಭಕ್ಕೆ ಅನುಮತಿ
* ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರ ಮಾನಸಿಕ ಬೆಂಬಲಕ್ಕೆ ಮನೋದರ್ಪಣ್ ಚಾನೆಲ್ ಆರಂಭ

ಸಾಲದ ಕತೆ ಏನು?
* ಕೊರೋನಾ ಕಾರಣಕ್ಕೆ ಮಾಡಿರುವ ಸಾಲ ಬಾಕಿ ಲೆಕ್ಕಕ್ಕೆ ತೆಗೆದುಕೊಳ್ಳುವುದಿಲ್ಲ
* ಸಾಲ ಮರು ಪಾವತಿ ಅವಧಿ ಒಂದು ವರ್ಷಕ್ಕೆ ಹೆಚ್ಚಿಸುವ ಗುರಿ
* ಸಾಲ ವಸೂಲಾತಿ ಕ್ರಮಗಳಲ್ಲಿ ಕ್ರಾಂತಿಕಾರಿ ಬದಲಾವಣೆ
* ಸಣ್ಣ ಕೈಗಾರಿಕೆಗಳು ಒಂದು ಕೋಟಿ ಬಾಕಿ ಉಳಿಸಿಕೊಂಡರೆ ಮಾತ್ರ ಕ್ರಮ, ಈ ಹಿಂದೆ ಒಂದು ಲಕ್ಷ ಬಾಕಿ ಉಳಿಸಿಕೊಮಡರೂ ಕ್ರಮ ತೆಗೆದುಕೊಳ್ಲಲಾಗುತ್ತಿತ್ತು.
* ಲಾಕ್‌ಡೌನ್‌ನಿಂದ ಸಾಲ ಮರುಪಾವತಿ ಮಾಡದವರು ಸುಸ್ತಿದಾರರಲ್ಲ.

ಆರ್ಥಿಕ ಪ್ಯಾಕೇಜ್ 4ನೇ ಕಂತು; ಕಲ್ಲಿದಲ್ಲು, ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ನಿರ್ಧಾರ!

ಕಂಪನಿ ಕಾನೂನಲ್ಲಿ ಬದಲಾವಣೆ

* ಏಳು ಕಂಪನಿ ಅಪರಾಧಗಳನ್ನು ಅಪರಾಧಗಳೆಂದು ಪರಿಗಣಿಸಲಾಗುವುದಿಲ್ಲ.
* ಐದು ಅಪರಾಧಗಳ ವಿಚಾರಣೆ ರೀತಿಯಲ್ಲಿ ಬದಲಾವಣೆ
* ಸಣ್ಣಪುಟ್ಟ ತಾಂತ್ರಿಕ ಕಾರಣಗಳ ತಪ್ಪುಗಳಿಗೆ ಶಿಕ್ಷಿಸುವ ಪದ್ಧತಿ ಇತ್ತು
* ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸಲು ಕ್ರಮ
* ಪ್ರಾದೇಶಿಕ ನಿರ್ದೇಶಕರಿಗೆ ಹೆಚ್ಚಿನ ಅಧಿಕಾರ

ಉದ್ಯಮ
* ಉದ್ಯಮ ಸರಳೀಕರಣದಲ್ಲಿ ಭಾರತದ ಶ್ರೇಣಿ ಹೆಚ್ಚಿಸಲು ಯತ್ನ
* ವಿದೇಶಿ ಷೇರು ಮಾರುಕಟ್ಟೆಯಲ್ಲಿ ಭಾರತದ ಕಂಪನಿಗಳ ನೋಂದವಣಿಗೆ ಅವಕಾಶ
* ಸಾರ್ವಜನಿಕ ವಲಯದ ಉದ್ಯಮಗಳ ಏಕಸ್ವಾಮ್ಯ ಇಲ್ಲ
* ಖಾಸಗಿ ಸಂಸ್ಥೆಗಳು ಸಾರ್ವಜನಿಕ ಉದ್ಯಮಗಳ ಉತ್ಪಾದನೆ ಮಾಡಬಹುದು
* ಕೆಲವು ನಿರ್ದಿಷ್ಟ ಕ್ಷೇತ್ರಗಳಲ್ಲಿ ಮಾತ್ರ PSEಗೆ ಮನ್ನಣೆ
* ಸಾರ್ವಜನಿಕ ವಲಯದ ಉದ್ದಿಮೆಗಳ ಖಾಸಗೀಕರಣಕ್ಕೆ ಒತ್ತು

ಕರ್ನಾಟಕದ ರಾಗಿ, ಜೋಳ ಗ್ಲೋಬಲ್‌ ಬ್ರಾಂಡ್‌!

ಕೊರೋನಾ ವಿರುದ್ಧದ ಹೋರಾಟದಲ್ಲಿ ರಾಜ್ಯಗಳು ಮುಂಚೂಣಿ

* ಏಪ್ರಿಲ್‌ನಲ್ಲಿ 46038 ಕೋಟಿ ರಾಜ್ಯಗಳಿಗೆ ನಿಡಲಾಗಿದೆ
* SDRF ನಿಧಿಗೆ 11092 ಕೋಟಿ ಮುಂಗಡ ನೀಡಲಾಗಿದೆ.
* ತೆರಿಗೆ ಕೊರತೆ ಹಣ 122390 ಕೋಟಿಯನ್ನು ಸರಿಯಾದ ಸಮಯಕ್ಕೆ ನೀಡಲಾಗಿದೆ
* ರಾಜ್ಯಗಳ ಮುಂಗಡ ಮೊತ್ತವನ್ನು ಶೇ60ರಷ್ಟು ಹೆಚ್ಚಿಸಲಾಗಿದೆ
* ರಾಜ್ಯಗಳ ಓವರ್ ಡ್ರಾಫ್ಟ್ ಅವಧಿಯನ್ನು 21 ದಿನಕ್ಕೆ ಹೆಚ್ಚಳ
* ರಾಜ್ಯಗಳ ಸಾಲದ ಮಿತಿ ಹೆಚ್ಚಳ, ಈ ಹಿಂದೆ ರಾಜ್ಯಗಳ GDPಯ ಶೇ. 3ರಷ್ಟು ಸಾಲ ತೆಗೆದುಕೊಳ್ಳುವ ಅವಕಾಶವಿತ್ತು. ಈ ಅವಕಾಶವನ್ನು ಶೇ. 5 ರಷ್ಟು ಹೆಚ್ಚಿಸಲಾಗಿದೆ.

ರಾಜ್ಯಗಳಿಗೆ ಪ್ರೋತ್ಸಾಹ

* ಒನ್ ನೇಷನ್, ಒನ್ ರೇಷನ್ ಯೋಜನೆ ಜಾರಿಗೊಳಿಸುವ ರಾಜ್ಯಗಳಿಗೆ ಪ್ರೋತ್ಸಾಹ
* ಉತ್ತಮ ರೀತಿ ಯೋಜನೆ ಜಾರಿಗೊಳಿಸಿದರೆ ಹೆಚ್ಚಿನ ಸಾಲ
* ಉದ್ಯಮ ಸ್ನೇಹಿ ವಾತಾವರಣ ನಿರ್ಮಿಸದರೆ ಹೆಚ್ಚಿನ ಸಾಲ
* ವಿದ್ಯುತ್ ಸರಬರಾಜು ವ್ಯವಸ್ಥೆ ಸುಧಾರಿಸಿದರೆ ಹೆಚ್ಚಿನ ಸಾಲ
* ನಗರ, ಸ್ಥಳೀಯ ಸಂಸ್ಥೆಗಳ ಆದಾಯ ಹೆಚ್ಚಿಸಿದರೆ ಹೆಚ್ಚಿನ ಸಾಲ

ಜೂನ್ 1 ರಿಂದ ಕೇವಲ ದೇಶಿಯ ಉತ್ಪನ್ನ ಮಾರಾಟ; ಗೃಹ ಸಚಿವರ ಆದೇಶ

20 ಲಕ್ಷ 97 ಸಾವಿರದ 53 ಕೋಟಿಯ ಒಟ್ಟು ಪ್ಯಾಕೇಜ್

- ಕೊರೋನಾ ಕಾರಣಕ್ಕೆ ತೆರಿಗೆ ವಿನಾಯಿತಿ 7800 ಕೋಟಿ
- ಗರೀಬ್ ಕಲ್ಯಾಣ್ ಯೋಜನೆಯಲ್ಲಿ 170 ಸಾವಿರ ಕೋಟಿ
- ಆರೋಗ್ಯ ಕ್ಷೇತ್ರಕ್ಕೆ 15 ಸಾವಿರ ಕೋಟಿ ನೇರವಾಗಿ ಬಿಡುಗಡೆ
- ಉದ್ಯಮಿಗಳಿಗೆ ತುರ್ತು ಸಾಲ 3 ಲಕ್ಷ ಕೋಟಿ
- ಸಂಕಷ್ಟದಲ್ಲಿರುವ MSMEಗಳಿಗೆ ಹೆಚ್ಚುವರಿ 20 ಸಾವಿರ ಕೋಟಿ
- ವಲಸೆ ಕಾರ್ಮಿಕರಿಗೆ ಉಚಿತ ಧಾನ್ಯಕ್ಕೆ 3 ಸಾವಿರ ಕೋಟಿ
- ಮುದ್ರಾ ಶಿಶು ಸಾಲದ ಬಡ್ಡಿ ಸಬ್ಸಿಡಿಗೆ 1500 ಕೋಟಿ
- ಬೀದಿ ಬದಿ ವ್ಯಾಪಾರಿಗಳ ಸಾಲಕ್ಕೆ 5 ಸಾವಿರ ಕೋಟಿ
- ಕಿಸಾನ್ ಕ್ರೆಡಿಟ್ ಮೂಲಕ 2 ಲಕ್ಷ ಕೋಟಿ
- ನಬಾರ್ಡ್ ಮೂಲಕ ರೈತರಿಗೆ 30 ಸಾವಿರ ಕೋಟಿ
- ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಗೆ 20 ಸಾವಿರ ಕೋಟಿ
- ಹಣ್ಣು ತರಕಾರಿ ಬೆಳೆಗಾರರಿಗೆ 500 ಕೋಟಿ

Follow Us:
Download App:
  • android
  • ios