ಆರ್ಥಿಕ ಪ್ಯಾಕೇಜ್ 4ನೇ ಕಂತು; ಕಲ್ಲಿದಲ್ಲು, ವಿದ್ಯುತ್ ಕ್ಷೇತ್ರ ಖಾಸಗೀಕರಣಕ್ಕೆ ನಿರ್ಧಾರ!
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇದೀಗ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್‌ನ 4ನೇ ಕಂತು ಪ್ರಕಟಿಸಿದ್ದಾರೆ. ಕಲ್ಲಿದ್ದಲ್ಲು, ಖನಿಜ ಸಂಪತ್ತು, ವೈಮಾನಿಕ, ರಕ್ಷಣಾ ಉತ್ಪಾದನೆ, ಇಂಧನ ಪೂರೈಕೆ ಕಂಪನಿ, ಬಾಹ್ಯಕಾಶ, ಅಣುಶಕ್ತಿ ಸೇರಿದಂತೆ 8 ವಲಯದಲ್ಲಿ ಖಾಸಗೀಕರಣ ಹಾಗೂ ಖಾಸಗೀ ಸಹಭಾಗಿತ್ವದ ಮೂಲಕ ಹೊಸ ಹೆಜ್ಜೆ ಇಡಲು ಕೇಂದ್ರ ನಿರ್ಧರಿಸಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ 4ನೇ ಕಂತಿನ ವಿವರಣೆ ಇಲ್ಲಿದೆ.
ನವದೆಹಲಿ(ಮೇ.16): ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ 20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್‌ನ 4ನೇ ಕಂತು ಪ್ರಕಟವಾಗಿದೆ. ವಿವಿದ ಕ್ಷೇತ್ರಗಳಿಗೆ ನಿರ್ಮಲಾ ಸೀತಾರಾಮನ್ ಹಣ ಹಂಚಿದ್ದಾರೆ. ಈ ಮೂಲಕ ಸ್ವಾವಲಂಬಿ ಭಾರತಕ್ಕೆ ಭದ್ರ ಬುನಾದಿ ಹಾಕಿದ್ದಾರೆ.
"
ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ಹಲವು ಕ್ಷೇತ್ರಗಳು ನೀತಿಗಳನ್ನು ಸಡಿಸಲಾಗಿದೆ. ಇನ್ನು ಹಲವು ವಲಯಗಳಲ್ಲಿ ನೀತಿಗಳನ್ನು ಸರಳೀಕರಣ ಮಾಡಬೇಕಿದೆ. ಅಭಿವೃದ್ದಿ, ಉದ್ಯೋಗ ಸೃಷ್ಟಿಗೆ ಅಗತ್ಯ ಕ್ರಮ ಕೈಗೊಂಡಿದ್ದೇವೆ. ನಗದು ವರ್ಗಾವಣೆ, ಜಿಎಸ್‌ಟಿ, ಐಬಿಟಿ ಸೇರಿದಂತೆ ಪ್ರಧಾನಿ ಮೋದಿ ಮಹತ್ವದ ನಿರ್ಧಾರಗಳಿಂದ ಭಾರತ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
20 ಲಕ್ಷ ಕೋಟಿ ರೂಪಾಯಿ ಆರ್ಥಿಕ ಪ್ಯಾಕೇಜ್ ಕುರಿತು ನಡೆಸಿದ 4ನೇ ಸುದ್ದಿಗೋಷ್ಠಿಯಲ್ಲಿ ನಿರ್ಮಲಾ ಸೀತಾರಾಮನ್‌ಗೆ ರಾಜ್ಯ ಸಚಿವ ಅನುರಾಗ್ ಠಾಕೂರ್ ಸಾಥ್ ನೀಡಿದರು. ಮೋದಿ ಘೋಷಿಸಿದ ಸ್ವಾಲಂಬಿ ಭಾರತಕ್ಕೆ 3 ವರ್ಷದ ಹಿಂದೆ ಮೇಕ್ ಇನ್ ಇಂಡಿಯಾ ಮೂಲಕ ಅಡಿಪಾಯ ಹಾಕಲಾಗಿದೆ. ಮೇಕ್ ಇನ್ ಇಂಡಿಯಾದ ಮೂಲಕ ಹಲವು ಉತ್ಪಾದನ ಘಟಕಗಳು ಭಾರತದಲ್ಲಿ ಆರಂಭಗೊಂಡಿದೆ ಎಂದರು.
20 ಲಕ್ಷ ಕೋಟಿ ರೂ ಪ್ಯಾಕೇಜ್: ಯಾರಿಗೆ ಎಷ್ಟು? ಇಲ್ಲಿದೆ ಫುಲ್ ಡಿಟೇಲ್ಸ್...
ಕೈಗಾರಿಕಾ ವಲಯದ ಉನ್ನತೀಕರಣ:
ಕೈಗಾರಿಕಾ ವಲಯಗಳ ಉನ್ನತೀಕರಣ, ಮೂಲ ಸೌಕರ್ಯ ಒದಗಿಸಲು ನೀತಿ ಹಾಗೂ ಭೂ ಬ್ಯಾಂಕ್‌ಗಳ ನಿರ್ಮಾಣದ ಮೂಲಕ ಹೂಡಿಕೆಗೆ ಉತ್ತೇಜನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಬಳಿ 5 ಲಕ್ಷ ಹೆಕ್ಟೆರ್ ಕೈಕಾರಿಗಾ ಭೂಮಿ ಲಬ್ಯವಿದೆ. 3376 ಕೈಗಾರಿಕಾ ಪಾರ್ಕ್‌ಗಳಿವೆ. ಇದರೊಂದಿಗೆ ಕೈಗಾರಿಕಾ ಕ್ಲಸ್ಟರ್‌ಗಳನ್ನ ಮೇಲ್ದರ್ಜೆಗೆ ಏರಿಸಲಾಗುತ್ತದೆ. ಭಾರತದಲ್ಲಿ ಉತ್ಪಾದನೆ ಹಾಗೂ ರಫ್ತಿಗೆ ಆದ್ಯತೆ ನೀಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
20 ಲಕ್ಷ ಕೋಟಿ ಪ್ಯಾಕೇಜ್ 3ನೇ ಕಂತು: ಶುಕ್ರವಾರ ಯಾರಿಗೆ ಏನು ಸಿಕ್ತು..?...
ಕಲ್ಲಿದ್ದಲ್ಲು, ಖನಿಜ ಸಂಪತ್ತು, ವೈಮಾನಿಕ, ರಕ್ಷಣಾ ಉತ್ಪಾದನೆ, ಇಂಧನ ಪೂರೈಕೆ ಕಂಪನಿ, ಬಾಹ್ಯಕಾಶ, ಅಣುಶಕ್ತಿ ಸೇರಿದಂತೆ 8 ವಲಯದ ಸುಧಾರಣೆ ಕ್ರಮಗಳನ್ನು ಘೋಷಿಸಲಾಯಿತು. ಈ 8 ವಲಯದಲ್ಲಿ ವಿದೇಶಿ ಹೂಡಿಕೆ ಆಕರ್ಷಿಸಲು ಕ್ರಮಗಳನ್ನು ಕೈಗೊಳ್ಳಲಾಗಿದೆ.
ಕಲ್ಲಿದಲ್ಲು ವಲಯಕ್ಕೆ 50 ಸಾವಿರ ಕೋಟಿ
ವಿಶ್ವದಲ್ಲಿ ಭಾರತ ಕಲ್ಲಿದಲ್ಲು ಗಣಿ ಹೊಂದಿರುವ 3ನೇ ಅತೀ ದೊಡ್ಡ ದೇಶವಾಗಿ ಗುರುತಿಸಿಕೊಂಡಿದೆ. ಇದೀಗ ಕಲ್ಲಿದಲ್ಲು ಆಮದು ಕಡಿಮೆ ಮಾಡಿ ಭಾರದಲ್ಲಿ ಕಲ್ಲಿದಲ್ಲು ಉತ್ಪಾದನೆಗೆ ಕ್ರಮ ತೆಗೆದಕೊಳ್ಳಲಾಗಿದೆ.. ಕಲ್ಲಿದಲ್ಲು ವಲಯದಲ್ಲಿ ವಾಣಿಜ್ಯ ಗಣಿಗಾರಿಕೆಯನ್ನು ಜಾರಿಗೊಳಿಸಲಿದ್ದೇವೆ. ಈ ಮೂಲಕ ಕಲ್ಲಿದಲ್ಲು ಗಣಿಯನ್ನು ಯಾರೂ ಬೇಕಾದರೂ ಖರೀದಿಸಬಹುದು. ಬಿಡ್ ಮೂಲಕ ಕಲ್ಲಿದಲ್ಲು ಗಣಿಯನ್ನು ಪಡೆಯಬಹುದು. ಈ ಮೂಲಕ ಕಲ್ಲಿದಲ್ಲು ವಲಯವನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲಾಗಿದೆ. ಖಾಸಗಿ ವಲಯದಲ್ಲಿ ಸ್ಪರ್ಧಾತ್ಮಕತೆ ಹಾಗೂ ಪಾರದರ್ಶಕತೆ ಜಾರಿಗೊಳಿಸಲಾಗುವುದು. ಹೀಗಾಗಿ ಕಲ್ಲಿದಲ್ಲು ವಲಯಕ್ಕೆ 50,000 ಕೋಟಿ ರೂಪಾಯಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದರು.
ಕಲ್ಲಿದಲ್ಲು ಗಣಿ ಹಂಚಿಕೆ ಮಾಡಲು ಯಾವುದೇ ರೀತಿಯ ಷರತ್ತು, ಅರ್ಹತೆ ಇಲ್ಲ. ಯಾರು ಮುಂಗಡ ಹಣ ನೀಡುತ್ತಾರೋ ಅವರಿಗೆ ಗಣಿ ಹಂಚಿಕೆ ಮಾಡಲಾಗುತ್ತದೆ. ಇದರೊಂದಿಗೆ 500 ಕಲ್ಲಿದಲ್ಲು ಗಣಿಗಳನ್ನು ತಕ್ಷಣವೇ ಬಿಡ್ಡಿಂಗ್ ಮೂಲಕ ಮಾರಾಟ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಖನಿಜ ಉತ್ಪಾದನೆ ಹೆಚ್ಚಿಸಲು ಖಾಸಗಿ ಭಾಗಿತ್ವಕ್ಕೆ ಅವಕಾಶ ನೀಡಲಾಗಿದೆ. ಈ ಮೂಲಕ ಖನಿಜ ವಲಯದಲ್ಲಿ ಖಾಸಗಿತನವನ್ನು ಹೆಚ್ಚಿಸಲಾಗುವುದು. ಇಷ್ಟೇ ಅಲ್ಲ 500 ಖನಿಜ ಗಣಿಗಳನ್ನು ಮುಕ್ತ ಮತ್ತು ಪಾರದರ್ಶಕ ಹರಾಜಿಗೆ ಕೇಂದ್ರ ಸರ್ಕಾರ ಕ್ರಮ ಕೈಗೊಂಡಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಮೀನುಗಾರಿಕೆ, ಪಶುಸಂಗೋಪನೆಗೂ ಕೋಟಿ ಕೋಟಿ ಹಣ; ಇಲ್ಲಿದೆ ಆರ್ಥಿಕ ಪ್ಯಾಕೇಜ್ ವಿಂಗಡಣೆ ಲೆಕ್ಕ
ರಕ್ಷಣಾ ಉತ್ಪಾದನಾ ವಲಯ ಖಾಸಗೀಕರಣವಲ್ಲ ಬದಲಾಗಿ ಸಾಂಸ್ಥೀಕರಣ:
ರಕ್ಷಣಾ ವಲಯದ ಉತ್ಪನ್ನಗಳ ಆಮದು ಕಡಿಮೆ ಮಾಡಿ, ಭಾರತದಲ್ಲೇ ಉತ್ಪಾದಿಸಲು ಕ್ರಮಕೈಗೊಳ್ಳಾಲಾಗಿದೆ. ಭಾರತದಲ್ಲಿ ಮಿಲಿಟರಿ ರಕ್ಷಣಾ ಸಾಮಾಗ್ರಿಗಳನ್ನು ಉತ್ಪಾದಿಸಲು ಇದು ಸಹಕಾರಿಯಾಗಿದೆ. ಮಿಲಿಟರಿ ಅಫೈರ್ಸ್ ಸಚಿವಾಲಯದ ಜೊತೆ ಮಾತುಕತೆ ನಡಸಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಂಡಳಿ ಮೂಲಕ ಶಸ್ತಾಸ್ತ್ರ ಹೆಚ್ಚಿಸಲಾಗುವುದು . ಭಾರದಲ್ಲಿ ಶಸ್ತಾಸ್ತ್ರ ಖರೀದಿಗೆ ಬಜೆಟ್‌ನಲ್ಲಿ ಅವಕಾಶ ನೀಡಲಾಗಿದೆ. ಶಾಸ್ತಾಸ್ತ್ರ ಕೈಗಾರಿಯೆಲ್ಲಿ ಸ್ವಾಯತ್ತತೆ, ಹೊಣೆಗಾರಿಗೆ ಹಾಗೂ ದಕ್ಷತೆಗೆ ಒತ್ತು ನೀಡಲಾಗುವುದು. ರಕ್ಷಣಾ ವಲಯದಲ್ಲಿ FDI ಶೇಕಡಾ 49 ರಿಂದ ಶೇಕಡಾ 79 ರಷ್ಟು ಹೆಚ್ಚಿಸಲಾಗುವುದು.
ರಕ್ಷಣ ವಲಯದ ಕಂಪನಿಗಳು ಷೇರು ಮಾರುಕಟ್ಟೆ ಪ್ರವೇಶಿಸಲು ಕ್ರಮ ಕೈಗೊಳ್ಳಲಾಗಿದೆ. ರಕ್ಷಣಾ ವಲಯವನ್ನು ಕಾರ್ಪೋರೇಟೈಸ್ ಮಾಡಲಾಗಿದೆ ಹೊರತು ಖಾಸಗೀಕರಣ ಮಾಡಲಾಗಿಲ್ಲ. ಇದರಿಂದ ಶಸ್ತಾಸ್ತ್ರಕ್ಕಾಗಿ ಇತರ ದೇಶವನ್ನು ಅವಲಂಬಿಸುವುದು ಹಾಗೂ ಆಮದು ಮಾಡುವುದು ತಪ್ಪಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವಿಮಾನಯಾನದಲ್ಲಿ ಖಾಸಗಿ ಸಹಭಾಗಿತ್ವ:
ನಾಗರೀಕ ವಿಮಾನಯಾನ ಹಾರಾಟಕ್ಕೆ ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ. ಗರಿಷ್ಠ ವೈಮಾನಿಕ ಸ್ಥಳಾವಕಾಶ ಬಳಕೆಗೆ ನಿರ್ಧರಿಸಲಾಗಿದೆ. ರಕ್ಷಣಾ ತಾಣಗಳಿಂದ ಹಾಗೂ ಇತರ ಕಾರಣಗಳಿಂದ ವಿಮಾನಗಳು ಸುತ್ತಿ ಬಳಸಿ ಹಾರಾಟ ಮಾಡಲಾಗುತ್ತಿತ್ತು. ಇದರಿಂದ ಹೆಚ್ಚು ಇಂಧನ ಹಾಗೂ ಸಮಯ ವ್ಯರ್ಥವಾಗುತ್ತಿತ್ತು. ಇದೀಗ ಈ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ವಾಯನೆಲೆಯನ್ನು ಮತ್ತಷ್ಟು ದಕ್ಷವಾಗಿ ಕಾರ್ಯನಿರ್ವಹಿಸುವಂತೆ ಮಾಡಿ ವೆಚ್ಚ ಕಡಿಮೆ ಮಾಡಲಿದ್ದೇವೆ.
ಪಿಪಿಪಿ ಮೂಲಕ ಮತ್ತಷ್ಟು ವಿಮಾನ ನಿಲ್ದಾಣ ಸ್ಥಾಪನೆ ಮಾಡಲಾಗುವುದು. ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೆ ಏರಿಸಲಾಗುವುದು. ಇದಕ್ಕಾಗಿ ವಿಮಾನ ನಿಲ್ದಾಣಗಳನ್ನು ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದ ಮೂಲಕ ಸ್ಥಾಪನೆ ಮಾಡಲಾಗುವುದು. ಇದಕ್ಕಾಗಿ 1000 ಕೋಟಿ ರೂಪಾಯಿ ವೆಚ್ಚ ಮಾಡಲಾಗುವುದು. 12 ವಿಮಾನ ನಿಲ್ದಾಣದಲ್ಲಿ ಖಾಸಗಿ ಹೂಡಿಕೆಯಿಂದ 13 ಸಾವಿರ ಕೋಟಿ ರೂಪಾಯಿ ನಿರೀಕ್ಷೆ ಮಾಡಲಾಗಿದೆ. 2ನೇ ಹಂತದಲ್ಲಿ ಹೆಚ್ಚುವರಿಯಾಗಿ 6 ವಿಮಾನ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವ ವಹಿಸಲು ನಿರ್ಧರಿಸಲಾಗಿದೆ. ಇದರಿಂದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ 2,300 ಕೋಟಿ ರೂಪಾಯಿ ಮುಂಗಡ ಸಿಗಲಿದೆ. ಭಾರದಲ್ಲಿ ವಿಮಾನ ದುರಸ್ಥಿ ಕಂಪನಿ ತೆರೆಯಲು ಹಲವು ಕಂಪನಿಗಳು ಉತ್ಸಾಹ ತೋರಿದೆ. ಈ ಎಲ್ಲಾ ಕ್ರಮಗಳಿಂದ ವಿಮಾನ ನಿರ್ವಹಣಾ ವೆಚ್ಚ ಕಡಿಮೆಯಾಗಲಿದೆ.
ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣ
ಕೇಂದ್ರಾಡಳಿತ ಪ್ರದೇಶದಲ್ಲಿ ವಿದ್ಯುತ್ ಸರಬರಾಜು ಕಂಪನಿಗಳ ಖಾಸಗೀಕರಣ ಮಾಡಲಾಗುವುದು. ಡಿಸ್ಕಾಂಗಳಿಂದ ಗ್ರಾಹಕರಿಗೆ ಸಮಸ್ಯೆಯಾದರೆ ಕಂಪನಿಗಳಿಗೆ ದಂಡ ವಿಧಿಸಲಾಗುವುದು. ಲೋಡ್ ಶೆಡ್ಡಿಂಗ್, ನಿಗದಿತ ವಿದ್ಯುತ್ ಪೂರೈಕೆ ಮಾಡದಿದ್ದರೆ ಕ್ರಮ ಕೈಗೊಳ್ಳಲಾಗುತ್ತದೆ. ವಿದ್ಯುತ್ ಸಬ್ಸಿಡಿಯನ್ನು ನೇರ ನಗದು ವರ್ಗಾವಣೆ ಮೂಲಕ ನೀಡಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಸ್ಮಾರ್ಟ್ ಪ್ರೀಪೇಯ್ಡ್ ಮೀಟರ್ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಲಾಗಿದೆ.
ಬಾಹ್ಯಕಾಶ ವಲಯದಲ್ಲ ಖಾಸಗೀಕರಣಕ್ಕೆ ನಿರ್ಧರಿಸಲಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಹಲವು ಕ್ಷೇತ್ರಗಳನ್ನು ಖಾಸಗೀಕರಣ, ಖಾಸಗೀ ಸಹಭಾಗಿತ್ವ ಹಾಗೂ ಸಾಂಸ್ಥೀಕರಣ ಮಾಡಿದೆ.