Asianet Suvarna News Asianet Suvarna News

ವಿವಿಧ ಬ್ಯಾಂಕ್‌ಗಳ 70 ಶಾಖೆ ಬಂದ್.. ಕಾರಣ

ಭಾರತದಲ್ಲಿ ಇರುವವರಿವವರಿಗೆ ಮಾತ್ರವಲ್ಲದೆ ಎನ್ ಆರ್‌ ಐ ಗಳಿಗೆ ಇದು ಬಹಳ ಪ್ರಮುಖವಾದ ಸುದ್ದಿ. ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 70 ಶಾಖೆಗಳನ್ನು ಬಂದ್ ಮಾಡಲು ತೀರ್ಮಾನ ತೆಗೆದುಕೊಂಡಿವೆ.

PSU banks plans closure of 70 overseas offices during this fiscal
Author
Bengaluru, First Published Aug 26, 2018, 4:43 PM IST

ನವದೆಹಲಿ[ಆ.26] ಕರೆನ್ಸಿ ಮತ್ತು ಕ್ಯಾಪಿಟಲ್ ಬದಲಾವಣೆಯಲ್ಲಿ ಸರಳತೆ ತರಲು, ಏಕರೂಪತೆ ತರಲು ಸಾರ್ವಜನಿಕ ವಲಯದ ಬ್ಯಾಂಕ್ ಗಳು ಮುಂದಾಗಿದ್ದು ವಿದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ 70 ಕ್ಕೂ ಅಧಿಕ ಶಾಖೆಗಳನ್ನು ಬಂದ್ ಮಾಡಲು ಮುಂದಾಗಿವೆ.

ಒಂದೇ ನಗರದಲ್ಲಿ ಇರುವ ಒಂದೇ ಬ್ಯಾಂಕ್ ನ  ಹಲವು ಶಾಖೆಗಳನ್ನು ಒಂದೇ ಶಾಖೆಯನ್ನಾಗಿ  ಮಾಡಲಾಗುತ್ತದೆ. ಈ ಹಣಕಾಸು ವರ್ಷದಲ್ಲಿಯೇ 70 ಕ್ಕೂ ಅಧಿಕ ಶಾಖೆಗಳು ಬಾಗಿಲು ಹಾಕಿಕೊಳ್ಳಲಿವೆ.

ಕಳೆದ ವರ್ಷ ಇದೇ ಬಗೆಯಲ್ಲಿ 35 ಶಾಖೆ ಗಳನ್ನು ಬಂದ್ ಮಾಡಲಾಗಿತ್ತು. ವಿದೇಶಗಳಲ್ಲಿ ಭಾರತದ 159 ಶಾಖೆಗಳು ಕೆಲಸ ಮಾಡುತ್ತಿದ್ದು 2016-17 ರಲ್ಲಿ 41 ಶಾಖೆಗಳನ್ನು ಬಂದ್ ಮಾಡಲಾಗಿತ್ತು.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಬ್ಯಾಂಕ್ ಆಫ್ ಇಂಡಿಯಾ ಸೆರಿದಂತೆ ವಿವಿಧ ಬ್ಯಾಂಕ್ ಗಳ ಶಾಖೆಗಳಿವೆ. ಯುಕೆಯಲ್ಲಿ 32, ಹಾಂಗ್ ಕಾಂಗ್ ನಲ್ಲಿ 13. ಸಿಂಗಪುರ್ ನಲ್ಲಿ 12  ಶಾಖೆಗಳಿವೆ. ಪ್ರದೇಶಕ್ಕೆ ಅನುಗುಣವಾಗಿ ಒಂದು ಶಾಖೆ ಸಾಕು ಎಂಬ ನಿಯಮಕ್ಕೆ ಬ್ಯಾಂಕ್ ಗಳು ಬಂದಂತೆ ಕಾಣುತ್ತಿದೆ.

Follow Us:
Download App:
  • android
  • ios