EPF calculation:25 ಸಾವಿರ ಮೂಲವೇತನ ಹೊಂದಿರುವ ಉದ್ಯೋಗಿಗೆ ನಿವೃತ್ತಿ ವೇಳೆ ಎಷ್ಟು ಇಪಿಎಫ್ ಸಿಗುತ್ತೆ?

ವೇತನ ಪಡೆಯುವ ಉದ್ಯೋಗಿಗಳು ಇಪಿಎಫ್ ಖಾತೆ ಹೊಂದಿರುತ್ತಾರೆ.ಇಪಿಎಫ್ ಗೆ ಪ್ರತಿ ತಿಂಗಳು ಎಷ್ಟು ಹಣ ಜಮೆ ಆಗುತ್ತದೆ ಹಾಗೂ ಅದನ್ನು ಹೇಗೆ ಲೆಕ್ಕಾಚಾರ ಮಾಡಲಾಗುತ್ತದೆ? ಹಾಗೆಯೇ ನಿವೃತ್ತಿ ಬಳಿಕ ಎಷ್ಟು ಇಪಿಎಫ್ ಹಣ ಸಿಗುತ್ತದೆ? ಎಂಬುದು ಬಹುತೇಕರಿಗೆ ತಿಳಿದಿರೋದಿಲ್ಲ.ಹಾಗಾದ್ರೆ ಅದನ್ನು ಲೆಕ್ಕ ಮಾಡೋದು ಹೇಗೆ? ಇಲ್ಲಿದೆ ಮಾಹಿತಿ.
 

Provident Fund EPF calculation for basic salary Rs 25000 How much you can get on retirement anu

Business Desk:ವೇತನ ಪಡೆಯುವ ಉದ್ಯೋಗಿಗಳು ನೌಕರರ ಭವಿಷ್ಯ ನಿಧಿ (ಇಪಿಎಫ್) ಖಾತೆ ಹೊಂದಿರುತ್ತಾರೆ. ಖಾಸಗಿ ವಲಯದ ಪ್ರತಿ ಉದ್ಯೋಗಿ ತನ್ನ ಮೂಲ ವೇತನ + ತುಟ್ಟಿ ಭತ್ಯೆಯ ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡಬೇಕಾಗುತ್ತದೆ. ಆದ್ರೆ ಡಿಎ ಸರ್ಕಾರಿ ನೌಕರರಿಗೆ ಮಾತ್ರ ನೀಡಲಾಗುತ್ತದೆ. ಹೀಗಾಗಿ ಖಾಸಗಿ ವಲಯದ ಉದ್ಯೋಗಿಗಳ ಇಪಿಎಫ್ ಕೊಡುಗೆಯನ್ನು ಮೂಲ ವೇತನದ ಆಧಾರದಲ್ಲಿ ನಿರ್ಧರಿಸಬೇಕಾಗುತ್ತದೆ. ಇನ್ನು ಖಾಸಗಿ ವಲಯದಲ್ಲಿ ಉದ್ಯೋಗದಾತ ಸಂಸ್ಥೆ ಕೂಡ  ಶೇ.12ರಷ್ಟನ್ನು ಇಪಿಎಫ್ ಗೆ ಕೊಡುಗೆಯಾಗಿ ನೀಡುತ್ತದೆ. ಈ ಶೇ.12ರಲ್ಲಿ ಶೇ.8.33 ಉದ್ಯೋಗಿಗಳ ಪಿಂಚಣಿ ಯೋಜನೆಗೆ ಹಾಗೂ ಶೇ.3.67ಉದ್ಯೋಗಿಗಳ ಭವಿಷ್ಯ ನಿಧಿಗೆ ಹೋಗುತ್ತದೆ. 20 ಅಥವಾ ಅದಕ್ಕಿಂತ ಹೆಚ್ಚು ವ್ಯಕ್ತಿಗಳು ಉದ್ಯೋಗದಲ್ಲಿರುವ ಪ್ರತಿಯೊಂದು ಸಂಸ್ಥೆಯು ಉದ್ಯೋಗಿಗಳಿಗೆ ಇಪಿಎಫ್ ಸೌಲಭ್ಯ ಕಲ್ಪಿಸೋದು ಕಡ್ಡಾಯ. ನಿವೃತ್ತಿಯ ಕೊನೆಯಲ್ಲಿ ಅಥವಾ ಸೇವೆಯ ಸಮಯದಲ್ಲಿ (ಕೆಲವು ಸಂದರ್ಭಗಳಲ್ಲಿ), ನೌಕರನು ಪಿಎಫ್ ಕೊಡುಗೆಯ ಮೇಲಿನ ಬಡ್ಡಿಯನ್ನು ಒಳಗೊಂಡಂತೆ ಒಟ್ಟು ಮೊತ್ತವನ್ನು ಪಡೆಯುತ್ತಾನೆ. 

ಇಪಿಎಫ್ಒ ನಿಯಮಗಳ ಅನ್ವಯ ಇಪಿಎಫ್ ಕೊಡುಗೆ ನೀಡಲು ಉದ್ಯೋಗಿ  ಮೂಲವೇತನ ಕನಿಷ್ಠ 15,000ರೂ. ಇರಬೇಕು. ಅಂದರೆ ಉದ್ಯೋಗದಾತ ಸಂಸ್ಥೆ ಉದ್ಯೋಗಿಯ ಇಪಿಎಸ್ ಖಾತೆಗೆ ಕೇವಲ 1250 ರೂ. ಕೊಡುಗೆಯಾಗಿ ನೀಡುತ್ತದೆ. ಉಳಿದ ಮೊತ್ತ ಇಪಿಎಫ್ ಖಾತೆಗೆ ಜಮೆ ಆಗುತ್ತದೆ. ಉದಾಹರಣೆಗೆ ಉದ್ಯೋಗಿ ಮೂಲವೇತನ 25,000ರೂ. ಇದೆ ಎಂದು ಭಾವಿಸಿ. ಇದಕ್ಕೆ ಉದ್ಯೋಗಿಗಳ ಕೊಡುಗೆ 3000ರೂ. (12% of Rs 25,000).ಇನ್ನು ಉದ್ಯೋಗದಾತ ಸಂಸ್ಥೆ ಮೂಲವೇತನದ ಶೇ.8.33ರಷ್ಟನ್ನು ಇಪಿಎಸ್ ಗೆ ಹಾಗೂ ಶೇ.3.67 ಇಪಿಎಫ್ ಗೆ ಕೊಡುಗೆಯಾಗಿ ನೀಡುತ್ತದೆ. 

ಈ 5 ಸಿದ್ಧತೆ ಮಾಡಿಕೊಂಡ್ರೆ ಸಾಕು, ನಿಮ್ಮ ITR ನೀವೇ ಸುಲಭವಾಗಿ ಸಲ್ಲಿಕೆ ಮಾಡಬಹುದು!

ಈ ಪ್ರಕರಣದಲ್ಲಿ ಉದ್ಯೋಗಿಯ ಶೇ.8.33 ಮೂಲವೇತನ 2082ರೂ. ಇದು 1250ರೂ.ಗಿಂತ ಹೆಚ್ಚು. ಹೀಗಾಗಿ ಈ ಪ್ರಕರಣದಲ್ಲಿ 1250 ರೂ. ಉದ್ಯೋಗಿಯ ಇಪಿಎಸ್ ಖಾತೆಗೆ ಹೋಗುತ್ತದೆ. ಇನ್ನು ಉಳಿದ ಮೊತ್ತ 832 ಉದ್ಯೋಗಿಯ ಇಪಿಎಫ್ ಖಾತೆಗೆ ಹೋಗುತ್ತದೆ. ಇನ್ನು ಉದ್ಯೋಗದಾತ ಸಂಸ್ಥೆ ಕೂಡ ಉದ್ಯೋಗಿ ಮೂಲವೇತನದ ಶೇ.3.67ರಷ್ಟನ್ನು ಇಪಿಎಫ್ ಖಾತೆಗೆ ಹಾಕಬೇಕು. ಈ ಮೊತ್ತ 917ರೂ. (3.67% of Rs 25,000). ಹೀಗಾಗಿ 25,000 ರೂ. ಮೂಲವೇತನ ಪಡೆಯುವ ಉದ್ಯೋಗಿಯ ಇಪಿಎಫ್ ಖಾತೆಗೆ ತಿಂಗಳಿಗೆ ಒಟ್ಟು 4749ರೂ. ಜಮೆ ಆಗುತ್ತದೆ.

ನಿವೃತ್ತಿ ಬಳಿಕ ಎಷ್ಟು ಸಿಗುತ್ತದೆ?
ಪ್ರಸ್ತುತ ಇಪಿಎಫ್ ಖಾತೆ ಮೇಲಿನ ಬಡ್ಡಿದರ ಶೇ.8.15. ಸಾಮಾನ್ಯವಾಗಿ ಈ ಬಡ್ಡಿದರ ಇಲ್ಲಿಯ ತನಕ ಶೇ.8ರ ಆಸುಪಾಸಿನಲ್ಲೇ ಇದೆ. ಹೀಗಿರುವಾಗ  ಉದ್ಯೋಗಿ ನಿವೃತ್ತಿ ತನಕ 25 ಸಾವಿರ ರೂ. ಮೂಲವೇತನ ಹೊಂದಿರುತ್ತಾನೆ ಎಂದು ಭಾವಿಸೋಣ. ಹೀಗಿರುವಾಗ ಆತ 25 ವರ್ಷಕ್ಕೆ ಉದ್ಯೋಗಕ್ಕೆ ಸೇರ್ಪಡೆಗೊಂಡಿದ್ದು, 58ನೇ ವಯಸ್ಸಿಗೆ ನಿವೃತ್ತಿಯಾದ್ರೆ ಈ ಮೇಲೆ ಹೇಳಿದಷ್ಟೇ ಇಪಿಎಫ್ ಕೊಡುಗೆ ಹಾಗೂ ಬಡ್ಡಿಯನ್ನು ಪರಿಗಣಿಸಿದರೆ ಆತ ಅಂದಾಜು 95 ಲಕ್ಷ ರೂ. ಗಳಿಸುತ್ತಾನೆ. ಒಂದು ವೇಳೆ ಉದ್ಯೋಗಿ ಮೂಲವೇತನದಲ್ಲಿ ವಾರ್ಷಿಕ ಶೇ.5ರಷ್ಟು ಏರಿಕೆಯಾದ್ರೆ ನಿವೃತ್ತಿ ವೇಳೆ ಪಿಎಫ್ ಖಾತೆಯಲ್ಲಿರುವ ಒಟ್ಟು ಮೊತ್ತ 1.9 ಕೋಟಿ ರೂ. ಆಗಿರುತ್ತದೆ.

Income Tax Refund: ಹೆಚ್ಚುವರಿ ಆದಾಯ ತೆರಿಗೆ ಪಾವತಿಸಿದ್ದೀರಾ? ರೀಫಂಡ್ ಕ್ಲೇಮ್ ಮಾಡಲು ಹೀಗೆ ಮಾಡಿ

ಒಂದು ವೇಳೆ ಉದ್ಯೋಗಿ 30ನೇ ವಯಸ್ಸಿನಲ್ಲಿ ಉದ್ಯೋಗಕ್ಕೆ ಸೇರಿ 58ನೇ ವಯಸ್ಸಿನಲ್ಲಿ ನಿವೃತ್ತಿಯಾದ್ರೆ ಆಗ ಇಪಿಎಫ್ ಖಾತೆಗೆ ಅವರ ತಿಂಗಳ ಕೊಡುಗೆ 4749ರೂ. ಈ ಉದ್ಯೋಗಿ ನಿವೃತ್ತಿ ವೇಳೆ 39ಲಕ್ಷ ರೂ. ಗಳಿಸುತ್ತಾನೆ. ಒಂದು ವೇಳೆ ಆತನ ಮೂಲವೇತನದಲ್ಲಿ ಮಾಸಿಕ 5 ಸಾವಿರ ರೂ. ಏರಿಕೆಯಾದ್ರೆ ಆಗ ಆತ ನಿವೃತ್ತಿ ಸಮಯದಲ್ಲಿ 69ಲಕ್ಷ ರೂ. ಗಳಿಸುತ್ತಾನೆ.

Latest Videos
Follow Us:
Download App:
  • android
  • ios