Asianet Suvarna News Asianet Suvarna News

ಹೊಸ ಮನೆ ಖರೀದಿಸುತ್ತಿದ್ದೀರಾ? ಹಾಗಾದ್ರೆ ಆಸ್ತಿ ತೆರಿಗೆ ಬಗ್ಗೆ ನೀವು ತಿಳಿಯಲೇಬೇಕು!

ಸ್ವಂತ ಸೂರು ಬೇಕೆಂಬ ಬಯಕೆಯಲ್ಲಿ ಮನೆ, ಫ್ಲ್ಯಾಟ್ ಖರೀದಿಸೋರು ಕೆಲವೊಂದು ವಿಷಯಗಳ ಬಗ್ಗೆ ಮಾಹಿತಿ ಹೊಂದಿರೋದು ಅಗತ್ಯ. ಅದ್ರಲ್ಲೂ ಆಸ್ತಿ ತೆರಿಗೆ ಬಗ್ಗೆ ತಿಳಿದಿರೋದು ಅತ್ಯವಶ್ಯಕ. ಹಾಗಾದ್ರೆ ಈ ಆಸ್ತಿ ತೆರಿಗೆ ಅಂದ್ರೇನು? ಯಾರು, ಎಲ್ಲಿ ಪಾವತಿಸಬೇಕು? ಇಲ್ಲಿದೆ ಮಾಹಿತಿ. 

Property Tax Filing What Why How Where of House Tax Payment New Homebuyers Should know
Author
First Published Oct 29, 2022, 12:48 PM IST

Business Desk: ಸ್ವಂತ ಮನೆ ಹೊಂದಬೇಕೆಂಬುದು ಬಹುತೇಕ ಎಲ್ಲರ ಬದುಕಿನ ಅತೀದೊಡ್ಡ ಕನಸು. ಅದ್ರಲ್ಲೂ ಕೊರೋನಾ ಮಹಾಮಾರಿ ಕಾಣಿಸಿಕೊಂಡ ಬಳಿಕ ಮನೆ ಖರೀದಿಸೋರ ಸಂಖ್ಯೆ ಕೂಡ ಹೆಚ್ಚಿದೆ ಎಂದು ವರದಿಗಳು ಹೇಳುತ್ತಿವೆ. ಮನೆ ಅಥವಾ ಫ್ಲ್ಯಾಟ್ ಖರೀದಿಸೋದು ಸುಲಭದ ಮಾತಲ್ಲ. ಅದಕ್ಕೆ ಸಂಬಂಧಿಸಿ ಅನೇಕ ಕಾನೂನು, ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ಬಗ್ಗೆ ಮನೆ ಖರೀದಿಸುವ ಪ್ರತಿಯೊಬ್ಬರು ಮಾಹಿತಿ ಹೊಂದಿರೋದು ಅಗತ್ಯ. ಹಾಗೆಯೇ ಆಸ್ತಿ ತೆರಿಗೆ ಬಗ್ಗೆ ಕೂಡ ತಿಳಿದುಕೊಳ್ಳೋದು ಅಗತ್ಯ.  ಹೊಸದಾಗಿ ಮನೆ ಖರೀದಿಸುತ್ತಿರುವ ಅನೇಕರಿಗೆ ಆಸ್ತಿ ತೆರಿಗೆ ಪಾವತಿಸಬೇಕು ಎಂಬುದು ತಿಳಿದಿರೋದಿಲ್ಲ.  ಮನೆ ಇರುವ ಪ್ರದೇಶದ ವ್ಯಾಪ್ತಿಯ ಸ್ಥಳೀಯ ಆಡಳಿತ ಸಂಸ್ಥೆ ಅದರ ಮಾಲೀಕರಿಗೆ ಆಸ್ತಿ ತೆರಿಗೆ ವಿಧಿಸುವ ಹಾಗೂ ಸಂಗ್ರಹಿಸುವ ಕಾರ್ಯ ಮಾಡುತ್ತದೆ. ಈ ತೆರಿಗೆಯನ್ನು ಸಾಮಾನ್ಯವಾಗಿ ಮುನ್ಷಿಪಲ್ ಅಥವಾ ಮನೆ ತೆರಿಗೆ ಎಂದು ಕರೆಯಲಾಗುತ್ತದೆ. ಹಾಗಾದ್ರೆ ಈ ಆಸ್ತಿ ಅಥವಾ ಮನೆ ತೆರಿಗೆ ಬಗ್ಗೆ ಹೊಸದಾಗಿ ಮನೆ ಖರೀದಿಸೋರು ತಿಳಿದಿರಬೇಕಾದ ಅಂಶಗಳೇನು? ಯಾಕೆ ಈ ತೆರಿಗೆಯನ್ನು ಸಂಗ್ರಹಿಸಲಾಗುತ್ತದೆ? ಆಸ್ತಿ ತೆರಿಗೆಯನ್ನು ಎಲ್ಲಿ ಪಾವತಿಸಬೇಕು? ಇಲ್ಲಿದೆ ಮಾಹಿತಿ.

ಆಸ್ತಿ ತೆರಿಗೆ ಅಂದ್ರೇನು?
ಭೂಮಿ/ಆಸ್ತಿ ಮಾಲೀಕರು ಸ್ಥಳೀಯ ಸರ್ಕಾರ ಅಥವಾ ಆ ಪ್ರದೇಶದ ಸ್ಥಳೀಯ ಸಂಸ್ಥೆಗೆ ವಾರ್ಷಿಕ/ಅರೆ ವಾರ್ಷಿಕವಾಗಿ ಪಾವತಿಸುವ ಮೊತ್ತವೇ ಆಸ್ತಿ ತೆರಿಗೆ. ಭೌತಿಕ ರೂಪದ ರಿಯಲ್ ಎಸ್ಟೇಟ್ ಆಸ್ತಿಗಳಾದ ಮನೆಗಳು, ಕಚೇರಿ ಕಟ್ಟಗಳು, ಫ್ಲ್ಯಾಟ್ ಗಳು ಇತ್ಯಾದಿಗಳ ಮಾಲೀಕತ್ವದ ಮೇಲೆ ಭಾರತದಲ್ಲಿ ಆಸ್ತಿ ತೆರಿಗೆ ವಿಧಿಸಲಾಗುತ್ತದೆ. 

ಬೆಂಗಳೂರಲ್ಲಿ ಮನೆ ಕೊಳ್ಳಲು ಬಯಸಿದ್ದೀರಾ... ಇಲ್ಲಿದೆ ಸುವರ್ಣಾವಕಾಶ

ಏಕೆ ಆಸ್ತಿ ತೆರಿಗೆ ಸಂಗ್ರಹಿಸಲಾಗುತ್ತದೆ?
ಒಂದು ಹಳ್ಳಿ ಅಥವಾ ನಗರ ಪ್ರದೇಶದ ಮೂಲಸೌಕರ್ಯದ ಜವಾಬ್ದಾರಿಯನ್ನು ಅಲ್ಲಿನ ಸ್ಥಳೀಯ ಆಡಳಿತ ಸಂಸ್ಥೆ ನಿರ್ವಹಿಸುತ್ತದೆ. ಹಳ್ಳಿಗಳಲ್ಲಿ ಗ್ರಾಮ ಪಂಚಾಯತ್, ನಗರಗಳಲ್ಲಿ ನಗರಸಭೆ ಅಥವಾ ಮಹಾನಗರ ಪಾಲಿಕೆಗಳು ಈ ಕಾರ್ಯ ಮಾಡುತ್ತವೆ. ಈ ಮೂಲಸೌಕರ್ಯ ಮತ್ತಿತರ ವೆಚ್ಚಗಳನ್ನು ನಿಭಾಯಿಸಲು ಸ್ಥಳೀಯ ಆಡಳಿತ ಸಂಸ್ಥೆಗಳು ಆಸ್ತಿ ತೆರಿಗೆಯಿಂದ ಸಂಗ್ರಹಿಸಿದ ಹಣವನ್ನು ಬಳಸುತ್ತವೆ. ಆ ಹಳ್ಳಿ ಅಥವಾ ನಗರದ ರಸ್ತೆಗಳ ಸ್ವಚ್ಛತೆ, ನಿರ್ವಹಣೆ, ಒಳಚರಂಡಿ ವ್ಯವಸ್ಥೆ ಮತ್ತಿತರ ಮೂಲಸೌಕರ್ಯಕ್ಕೆ ಸಂಬಂಧಿಸಿದ ವೆಚ್ಚಗಳಿಗೆ ಆಸ್ತಿ ತೆರಿಗೆಯಿಂದ ಸಂಗ್ರಹಿಸಿದ ಹಣವನ್ನು ಬಳಸಲಾಗುತ್ತದೆ.

ಆಸ್ತಿ ತೆರಿಗೆ ಲೆಕ್ಕಾಚಾರ ಹೇಗೆ?
ಸಾಮಾನ್ಯವಾಗಿ ಆಸ್ತಿ ತೆರಿಗೆ ಲೆಕ್ಕಾಚಾರಕ್ಕೆ ಈ ಕೆಳಗಿನ ಸೂತ್ರ ಬಳಸುತ್ತಾರೆ.
ಆಸ್ತಿ ತೆರಿಗೆ= ಮೂಲ ಮೌಲ್ಯXನಿರ್ಮಾಣ ಪ್ರದೇಶX ಕಟ್ಟಡದ ವಯಸ್ಸು Xಕಟ್ಟಡದ ವರ್ಗ Xಬಳಕೆ Xಅಂತಸ್ತುಗಳು
ಇನ್ನು ಆಸ್ತಿ ತೆರಿಗೆಯನ್ನು ಮನೆ ಅಥವಾ ಕಟ್ಟಡವಿರುವ ಪ್ರದೇಶ, ವಾಣಿಜ್ಯ ಅಥವಾ ವಾಸ್ತವ್ಯದ ಕಟ್ಟಡ, ನಿರ್ಮಾಣದ ವರ್ಷ ಹಾಗೂ ನಿರ್ಮಾಣದ ವಿಧಾನದ ಆಧಾರದಲ್ಲಿ ತೆರಿಗೆಯನ್ನು ನಿರ್ಧರಿಸಲಾಗುತ್ತದೆ. ಇನ್ನು ಆfತಿ ತೆರಿಗೆ ಲೆಕ್ಕಾಚಾರ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತದೆ ಕೂಡ. 

ವಿಶ್ವದ ಟಾಪ್ 100 ಅತ್ಯಂತ ಮೌಲ್ಯಯುತ ಬ್ರ್ಯಾಂಡ್ ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ಕಂಪನಿ ಇದೇ ನೋಡಿ!

ಖರೀದಿ ಮುನ್ನ ಆಸ್ತಿ ತೆರಿಗೆ ಪರಿಶೀಲಿಸಿ
ಆಸ್ತಿ ಖರೀದಿಸುವ ವ್ಯಕ್ತಿ ಖರೀದಿಗೆ ಮುನ್ನ ಅದರ ಮೇಲೆ ಎಷ್ಟು ಆಸ್ತಿ ತೆರಿಗೆ ವಿಧಿಸಬಹುದು ಎಂಬುದನ್ನು ಲೆಕ್ಕಾಚಾರ ಹಾಕೋದು ಅಗತ್ಯ. ಇನ್ನು ಆಸ್ತಿ ತೆರಿಗೆಯನ್ನು ಆ ಪ್ರದೇಶಕ್ಕೆ ಸಂಬಂಧಿಸಿದ ಗ್ರಾಮ ಪಂಚಾಯತ್/ಪುರಸಭೆ/ನಗರಸಭೆ/ಮಹಾನಗರ ಪಾಲಿಕೆಯಲ್ಲಿ ಪಾವತಿಸಬಹುದು. ಈಗಂತೂ ಬಹುತೇಕ ಕಡೆಗಳಲ್ಲಿ ಆನ್ ಲೈನ್ ಪಾವತಿಗೆ ಕೂಡ ಅವಕಾಶವಿದೆ. ಪಟ್ಟಣ ಹಾಗೂ ನಗರ ಪ್ರದೇಶಗಳ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಇಂದು ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಗೆ ಅವಕಾಶ ಇರೋದ್ರಿಂದ ಹಿಂದಿನಂತೆ ಕಚೇರಿಗೆ ತೆರಳಿ ಆಸ್ತಿ ತೆರಿಗೆ ಪಾವತಿಸಬೇಕಾದ ಅಗತ್ಯವಿಲ್ಲ. 

Follow Us:
Download App:
  • android
  • ios