Asianet Suvarna News Asianet Suvarna News

Union Budget 2024: ಪ್ರವಾಸೋದ್ಯಮಕ್ಕೆ ಶುರುವಾದ ಬೇಡಿಕೆ, ಲಕ್ಷದ್ವೀಪಕ್ಕೆ ಸರ್ಕಾರದ ಹೂಡಿಕೆ!

ಲಕ್ಷದ್ವೀಪವನ್ನು ಆಕರ್ಷಕ ಹಾಗೂ ಭಾರತೀಯ ಪ್ರವಾಸಿಗರ ತಾಣವಾಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಮಾಲ್ಡೀವ್ಸ್‌ ಜೊತೆಗಿನ ರಾಜತಾಂತ್ರಿಕ ಬಿಕ್ಕಟ್ಟಿನ ಬೆನ್ನಲ್ಲಿಯೇ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಲಕ್ಷದ್ವೀಪದ ಪ್ರವಾಸೋದ್ಯಮ ಅಭಿವೃದ್ಧಿಯನ್ನು ಘೋಷಣೆ ಮಾಡಿದೆ.

prioritize tourism sector investments Lakshadweep takes center stage Interim Budget 2024 san
Author
First Published Feb 1, 2024, 12:54 PM IST

ನವದೆಹಲಿ (ಜ.1): ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಕೇಂದ್ರ ಮಧ್ಯಂತರ ಬಜೆಟ್‌ನಲ್ಲಿ ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ನಿಟ್ಟಿನಲ್ಲಿ ಈ ಕ್ಷೇತ್ರದಲ್ಲಿ ಮಾಡಲಾಗುವ ಹೂಡಿಕೆಗಳ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಟೂರಿಸಂ ಸೆಕ್ಟರ್‌ನಲ್ಲಿ ಮಾಡಲಾಗುವ ಕೆಲಸಗಳ ಬಗ್ಗೆ ಮಾತನಾಡಿದ ನಿರ್ಮಲಾ ಸೀತಾರಾಮನ್‌, ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪದಲ್ಲಿ ಪ್ರವಾಸಿ ಮೂಲಸೌಕರ್ಯವನ್ನು ಹೆಚ್ಚಿಸುವ ದೊಡ್ಡ ಮಟ್ಟದ ಗುರಿಯನ್ನು ಪ್ರಸ್ತಾಪ ಮಾಡಿದ್ದಾರೆ.  ಪ್ರವಾಸೋದ್ಯಮವನ್ನು ಬೆಳೆಸುವ ಸರ್ಕಾರದ ಬದ್ಧತೆಯ ಭಾಗವಾಗಿ, ಲಕ್ಷದ್ವೀಪ ಪ್ರದೇಶ ತನ್ನ ಪ್ರವಾಸಿ ಸೌಕರ್ಯಗಳನ್ನು ಉನ್ನತೀಕರಿಸಲು ಸರ್ಕಾರದಿಂದ ಅಗತ್ಯವಾದ ಗಮನ ಹಾಗೂ ಹೂಡಿಕೆಗಳನ್ನು ಪಡೆಯಲಿದೆ. ಮಾಲ್ಡೀವ್ಸ್‌ನೊಂದಿಗೆ ಭಾರತದ ರಾಜತಾಂತ್ರಿಕ ಬಿಕ್ಕಟ್ಟಿನ ಬೆನ್ನಲ್ಲಿಯೇ ಭಾರತದ ಪ್ರವಾಸಿಗರಿಗೆ ಲಕ್ಷದ್ವೀಪವನ್ನು ಆಕರ್ಷಕ ಹಾಗೂ ಪ್ರಮುಖ ಪ್ರವಾಸಿ ತಾಣವಾಗಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ಮಾಲ್ಡೀವ್ಸ್‌ ದೇಶಕ್ಕೆ ಪರ್ಯಾಯವಾಗಿ ಲಕ್ಷದ್ವೀಪ ಪ್ರವಾಸಿ ತಾಣವಾಗಿ ಪ್ರಾಮುಖ್ಯತೆ ಪಡೆದಿರುವುದರಿಂದ, ಕೇಂದ್ರಾಡಳಿತದಲ್ಲಿರುವ ದ್ವೀಪ ಪ್ರದೇಶ, ಸರ್ಕಾರದ ಕಾರ್ಯತಂತ್ರದ ಹೂಡಿಕೆಯು ದೇಶದೊಳಗಿನ ವೈವಿಧ್ಯಮಯ ಪ್ರವಾಸಿ ಆಕರ್ಷಣೆಗಳನ್ನು ಅಭಿವೃದ್ಧಿಪಡಿಸುವ ಮತ್ತು ಉತ್ತೇಜಿಸುವ ಬದ್ಧತೆಯನ್ನು ತಿಳಿಸಿದೆ. ಈ ಕ್ರಮವು ಇಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಆರ್ಥಿಕ ಕೊಡುಗೆಯನ್ನು ಹೆಚ್ಚಿಸಲು ಮತ್ತು ಬೆಳವಣಿಗೆಗೆ ಸುಸ್ಥಿರ ಮಾರ್ಗಗಳನ್ನು ಸೃಷ್ಟಿಸಲು ವ್ಯಾಪಕ ಪ್ರಯತ್ನಗಳೊಂದಿಗೆ ಸಂಯೋಜಿಸಿದೆ.

50 ವರ್ಷದ ಬಡ್ಡಿ ರಹಿತ ಸಾಲ ಮತ್ತೊಂದು ವರ್ಷ ಮುಂದುವರಿಕೆ, ಇದರಿಂದ ರಾಜ್ಯಕ್ಕೇನು ಲಾಭ?

ಮಾಲ್ಡಿವ್ಸ್‌ ಜೊತೆಗಿನ ಬಿಕ್ಕಟ್ಟಿನ ಬೆನ್ನಲ್ಲಿಯೇ ಸೂಕ್ತ ಬೀಚ್‌ ತಾಣಗಳ ಹುಡುಕಾಟದಲ್ಲಿದ್ದವರಿಗೆ ಲಕ್ಷದ್ವೀಪ ಸೌಂದರ್ಯ ಗಮನಸೆಳೆದಿತ್ತು. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಕೂಡ ಲಕ್ಷದ್ವೀಪಕ್ಕೆ ಪ್ರಯಾಣ ಬೆಳೆಸಿ ಅಲ್ಲಿನ ಪ್ರಕೃತಿ ಸೌಂದರ್ಯದ ಬಗ್ಗೆ ಪೋಸ್ಟ್‌ ಮಾಡಿದ್ದರು. ಇದು ದೇಶೀಯ ಪ್ರವಾಸೋದ್ಯಮದ ಸಾಮರ್ಥ್ಯವನ್ನು ಬಳಸಿಕೊಳ್ಳುವ ಕೇಂದ್ರ ಸರ್ಕಾರದ ಗಮನವನ್ನು ಸೂಚಿಸಿದೆ.ಮೂಲಸೌಕರ್ಯ ಅಗತ್ಯಗಳನ್ನು ಪರಿಹರಿಸುವ ಮೂಲಕ ಮತ್ತು ಒಟ್ಟಾರೆ ಪ್ರವಾಸಿ ಅನುಭವವನ್ನು ಹೆಚ್ಚಿಸುವ ಮೂಲಕ, ಲಕ್ಷದ್ವೀಪದ ನೈಸರ್ಗಿಕ ಸೌಂದರ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಳಸಿಕೊಳ್ಳುವ ಗುರಿಯನ್ನು ಸರ್ಕಾರ ಹೊಂದಿದೆ, ಇಂದು ದೇಶದೊಳಗಿನ ಸ್ಥಳಗಳನ್ನು ಅನ್ವೇಷಿಸುವ ಪ್ರಯಾಣಿಕರಿಗೆ ಲಕ್ಷದ್ವೀಪ ಪ್ರಮುಖ ಆಯ್ಕೆಯಾಗಿದೆ.

Live Blog ಕೇಂದ್ರ ಬಜೆಟ್‌ 2024: ಜನಪ್ರಿಯ ಬಜೆಟ್ ಅಲ್ಲ, ಜುಲೈನಲ್ಲಿ ವಿಕಸಿತ ಭಾರತದ ನೀಲಿನಕ್ಷೆ ಘೋಷಣೆ ...

Follow Us:
Download App:
  • android
  • ios