ಪ್ರೈಮ್‌ ಪ್ಲಸ್‌ನಲ್ಲಿ ಗ್ರಾಹಕರು ಕ್ಯಾಬ್‌ ಬುಕ್‌ ಮಾಡಿದರೆ, ಖಚಿತವಾಗಿ ಕಾರು ಲಭ್ಯವಾಗಲಿದೆ. ಯಾವುದೇ ಕಾರಣಕ್ಕೂ ರದ್ದಾಗದು. ಜೊತೆಗೆ ಗುಣಮಟ್ಟದ ಕಾರುಗಳು, ಉತ್ತಮ ಚಾಲಕರ ಸೇವೆ ಸಿಗಲಿದೆ. ಹಾಗೆಂದು ಇದು ದುಬಾರಿ ಅಲ್ಲ: ಭವೀಶ್‌ ಅಗರವಾಲ್‌ 

ಬೆಂಗಳೂರು(ಮೇ.30): ಪ್ರಯಾಣಿಕರು ಕ್ಯಾಬ್‌ ಬುಕ್‌ ಮಾಡಿದಾಗ ಬುಕಿಂಗ್‌ ಕ್ಯಾನ್ಸಲ್‌ ಆಗುವುದು, ಎಷ್ಟು ಹೊತ್ತಾದರೂ ಕ್ಯಾಬ್‌ ಬಾರದೇ ಇರುವುದು ಕ್ಯಾಬ್‌ ಸೇವೆಯ ಸಾಮಾನ್ಯ ತೊಂದರೆ. ಇಂಥ ಸಮಸ್ಯೆಯನ್ನು ನಿವಾರಿಸಿ ಗ್ರಾಹಕರಿಗೆ ಖಚಿತ ಬುಕಿಂಗ್‌ ಸೇವೆ ಒದಗಿಸುವ ‘ಪ್ರೈಮ್‌ ಪ್ಲಸ್‌’ ಎಂಬ ಹೊಸ ಸೇವೆಯನ್ನು ಓಲಾ ಕ್ಯಾಬ್‌ ಬೆಂಗಳೂರಿನಲ್ಲಿ ಪರಿಚಯಿಸಿದೆ. ಆರಂಭದಲ್ಲಿ ಸೀಮಿತ ಗ್ರಾಹಕರಿಗೆ ಮಾತ್ರವೇ ಈ ಸೇವೆ ಲಭ್ಯವಿರಲಿದೆ.

ಏನಿದು ಪ್ರೈಮ್‌ ಪ್ಲಸ್‌?: 

ಪ್ರೈಮ್‌ ಪ್ಲಸ್‌ನಲ್ಲಿ ಗ್ರಾಹಕರು ಕ್ಯಾಬ್‌ ಬುಕ್‌ ಮಾಡಿದರೆ, ಖಚಿತವಾಗಿ ಕಾರು ಲಭ್ಯವಾಗಲಿದೆ. ಯಾವುದೇ ಕಾರಣಕ್ಕೂ ರದ್ದಾಗದು. ಜೊತೆಗೆ ಗುಣಮಟ್ಟದ ಕಾರುಗಳು, ಉತ್ತಮ ಚಾಲಕರ ಸೇವೆ ಸಿಗಲಿದೆ. ಹಾಗೆಂದು ಇದು ದುಬಾರಿ ಅಲ್ಲ ಎನ್ನುವುದು ಕಂಪನಿಯ ಸಿಇಒ ಭವೀಶ್‌ ಅಗರವಾಲ್‌ ಭರವಸೆ.

ಬೆಂಗಳೂರು ರಸ್ತೆಗಿಳಿದ ಕ್ಯೂಟ್‌ ಟ್ಯಾಕ್ಸಿ, ಸಾರಿಗೆ ಇಲಾಖೆಯಿಂದಲೂ ಗ್ರೀನ್‌ ಸಿಗ್ನಲ್‌!

ಈ ಸಂಬಂಧ ಅವರೇ ಟ್ವೀಟ್‌ ಮಾಡಿರುವ ಬುಕಿಂಗ್‌ ಒದರ ಫೋಟೋದಲ್ಲಿ, ಪ್ರೈಮ್‌ ಪ್ಲಸ್‌ನಲ್ಲಿ ಕ್ಯಾಬ್‌ ಮಾಡಿದ ಸ್ಥಳಕ್ಕೆ 455 ರು. ಶುಲ್ಕ ತೋರಿಸುತ್ತಿದ್ದರೆ, ಕೆಳಗಡೆ ಇರುವ ಮಿನಿ ಅಥವಾ ಬುಕ್‌ ಎನಿ ಕಾರ್‌ ಟೈಪ್‌ ಆಯ್ಕೆ ಯಲ್ಲಿ ದರ 535-664 ರು.ವರೆಗೂ ತೋರಿಸುತ್ತಿದೆ. ಈ ಮೂಲಕ ಉತ್ತಮ ಗುಣಮಟ್ಟದ ಖಚಿತ ಸೇವೆ ನೀಡುತ್ತಿರುವ ಹೊರತಾಗಿಯೂ ಸೇವೆ ಇನ್ನಷ್ಟುಅಗ್ಗವಾಗಿರಲಿದೆ ಎಂಬ ಸುಳಿವು ನೀಡಿದ್ದಾರೆ. ಜೊತೆಗೆ ಈ ಪ್ರಯೋಗ ಯಶಸ್ವಿಯಾದರೆ ಇದನ್ನು ಬೇರೆ ನಗರಗಳಲ್ಲಿಯೂ ವಿಸ್ತರಣೆ ಮಾಡಲಾಗುವುದು ಎಂದು ಓಲಾ ಸಿಇಓ ಭವೀಶ್‌ ಅಗರ್ವಾಲ್‌ ತಿಳಿಸಿದ್ದಾರೆ.