ಕಾನ್ಫರೆನ್ಸ್ ಟೂರಿಸಂ: ವಾರ್ಷಿಕ 25 ಲಕ್ಷ ಕೋಟಿ ರು. ವಹಿವಾಟಿನ ಜಾಗತಿಕ ಉದ್ಯಮದ ಮೇಲೆ ಭಾರತದ ಕಣ್ಣು
ದೇಶದಲ್ಲಿ ಸಾಹಸ, ವೈದ್ಯಕೀಯ, ಸಾಂಸ್ಕೃತಿಕ, ಪರಿಸರ ಟೂರಿಸಂ ರೀತಿಯಲ್ಲೇ ಕಾನ್ಫರೆನ್ಸ್ ಟೂರಿಸಂ (conference tourism)ಅಭಿವೃದ್ಧಿಯ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದ್ದಾರೆ.
ನವದೆಹಲಿ: ದೇಶದಲ್ಲಿ ಸಾಹಸ, ವೈದ್ಯಕೀಯ, ಸಾಂಸ್ಕೃತಿಕ, ಪರಿಸರ ಟೂರಿಸಂ ರೀತಿಯಲ್ಲೇ ಕಾನ್ಫರೆನ್ಸ್ ಟೂರಿಸಂ (conference tourism)ಅಭಿವೃದ್ಧಿಯ ಅವಶ್ಯಕತೆ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಬಲವಾಗಿ ಪ್ರತಿಪಾದಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ವಾರ್ಷಿಕ 25 ಲಕ್ಷ ಕೋಟಿ ರು. ಮೌಲ್ಯದ ಉದ್ಯಮ ಹೊಂದಿರುವ ಈ ವಲಯದಲ್ಲಿ ಪ್ರಸಕ್ತ ಭಾರತದ ಪಾಲು ನಗಣ್ಯವಾಗಿದ್ದು, ಈ ವಲಯದಲ್ಲಿ ದೇಶಕ್ಕೆ ಅಪರಿಮಿತ ಅವಕಾಶವಿದೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.
ದೆಹಲಿಯ ದ್ವಾರಕಾದಲ್ಲಿ ನಿರ್ಮಿಸಲಾಗಿರುವ 5400 ಕೋಟಿ ರು. ವೆಚ್ಚದ ‘ಯಶೋಭೂಮಿ’ ಸಭಾಂಗಣ/ವಸ್ತು ಪ್ರದರ್ಶನ ಕೇಂದ್ರದ ಮೊದಲ ಹಂತಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದ ಪ್ರಧಾನಿ (Prime Minister Narendra Modi), ‘ಇಂದು ರಾಷ್ಟ್ರಕ್ಕೆ ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ ಯಶೋಭೂಮಿ (Yashobhoomi) ಸಿಕ್ಕಿದೆ. ಇದು ನನ್ನ ವಿಶ್ವಕರ್ಮ ಸಹೋದರರ ತಪಸ್ಸನ್ನು ತೋರಿಸುತ್ತದೆ. ನಾನು ಈ ಕೇಂದ್ರವನ್ನು ರಾಷ್ಟ್ರದ ಪ್ರತಿಯೊಬ್ಬ ವಿಶ್ವಕರ್ಮರಿಗೂ ಸಮರ್ಪಿಸುತ್ತೇನೆ. ಇದು ವಿಶ್ವಕರ್ಮರಿಗೆ ಸಹಕಾರಿಯಾಗಲಿದೆ. ಭಾರತೀಯ ಕಲೆ ಮತ್ತು ಕರಕುಶಲ ವಸ್ತುಗಳನ್ನು ಜಾಗತಿಕ ಮಟ್ಟಕ್ಕೆ ತಲುಪಿಸಲು ಇದು ರೋಮಾಂಚಕ ಕೇಂದ್ರವಾಗಲಿದೆ. ಇದು ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶನ ಮಾಡುವಲ್ಲಿ ಬಹುದೊಡ್ಡ ಪಾತ್ರವನ್ನು ವಹಿಸುತ್ತದೆ’ ಎಂದರು.
ಹುಡುಗರೇ ಈ ಹಕ್ಕಿ ಮುಂದೆ ನೀವ್ಯಾವ ಲೆಕ್ಕ: ಮನದರಸಿಯ ಒಲಿಸಿಕೊಳ್ಳಲು ಪಡ್ತಿರುವ ಪಾಡು ನೋಡಿ : ವೀಡಿಯೋ
ಇದೇ ವೇಳೆ ವಸ್ತುಪ್ರದರ್ಶನಗಳ ಮಹತ್ವದ ಬಗ್ಗೆ ವಿವರಿಸಿದ ಅವರು, ‘ಭಾರತಕ್ಕೆ ಅನಿಯಮಿತ ಸಾಧ್ಯತೆಗಳನ್ನು ಹೊಂದಿರುವ ವಸ್ತುಪ್ರದರ್ಶನ ಪ್ರವಾಸೋದ್ಯಮವು (Exhibition tourism) (ಕಾನ್ಫರೆನ್ಸ್ ಟೂರಿಸಂ) ವಿಶ್ವದಲ್ಲಿ ಹೆಚ್ಚುತ್ತಿದೆ. ವಸ್ತುಪ್ರದರ್ಶನ ಪ್ರವಾಸೋದ್ಯಮವು ವಿಶ್ವದಲ್ಲಿ 25 ಲಕ್ಷ ಕೋಟಿ ರು.ಗಿಂತ ಹೆಚ್ಚು ಮೌಲ್ಯದ್ದಾಗಿದೆ. ಪ್ರಪಂಚದಲ್ಲಿ ಪ್ರತಿ ವರ್ಷ 32,000ಕ್ಕೂ ಹೆಚ್ಚು ದೊಡ್ಡ ಪ್ರದರ್ಶನಗಳು ನಡೆಯುತ್ತವೆ. 2ರಿಂದ 5 ಕೋಟಿ ಜನಸಂಖ್ಯೆ ಇರುವ ದೇಶಗಳೂ ವಸ್ತಪ್ರದರ್ಶನ ಏರ್ಪಡಿಸುತ್ತವೆ. ನಮ್ಮ ಜನಸಂಖ್ಯೆ 140 ಕೋಟಿ. ನಮ್ಮಲ್ಲಿ ವಸ್ತುಪ್ರದರ್ಶನಕ್ಕೆಂದೇ ಬರುವ ಪ್ರವಾಸಿಗರು ಮಾಮೂಲಿ ಪ್ರವಾಸಿಗರಿಗಿಂತ ಹೆಚ್ಚು ಹಣ ವ್ಯಯಿಸುತ್ತಾರೆ. ಆದರೆ ವಸ್ತುಪ್ರದರ್ಶನಗಳಲ್ಲಿ ಭಾರತೀಯರ ಭಾಗವಹಿಸುವಿಕೆ ಕೇವಲ ಶೇ.1ರಷ್ಟು ಇದೆ.
ಆದರೆ ಇನ್ನು ಮುಂದೆ ‘ನವ ಭಾರತ’ವು ವಸ್ತುಪ್ರದರ್ಶನ ಪ್ರವಾಸೋದ್ಯಮಕ್ಕೆ ತನ್ನನ್ನು ತಾನು ತೆರೆದುಕೊಳ್ಳಲಿದೆ. ಸರ್ಕಾರ ಇದಕ್ಕೆ ಪೂರಕ ವಾತಾವರಣ ನಿರ್ಮಿಸಲಿದೆ. ಭಾರತ ಮಂಟಪ (Bharat Mandapam) ಮತ್ತು ಯಶೋಭೂಮಿ ಕೇಂದ್ರಗಳು ದೆಹಲಿಯನ್ನು ‘ವಸ್ತುಪ್ರದರ್ಶನ ಪ್ರವಾಸೋದ್ಯಮ’ದ ಅತಿದೊಡ್ಡ ಕೇಂದ್ರವನ್ನಾಗಿ ಮಾಡಲಿವೆ’ ಎಂದರು.
ರುಚಿ ನೋಡೋ ನೆಪದಲ್ಲಿ ಅರೆಬೆಂದ ಆಹಾರ ತಿನ್ನುವ ಮುನ್ನ ಜೋಪಾನ: ದೇಹದ ಸ್ವಾಧೀನವನ್ನೇ ಕಳೆದುಕೊಂಡ ಮಹಿಳೆ
ಯಶೋಭೂಮಿ ಕನ್ವೆನ್ಷನ್ ಸೆಂಟರ್ ವಿಶ್ವದ ವಿಸ್ತಾರವಾದ ಕನ್ವೆನ್ಷನ್ ಸೆಂಟರ್‌ಗಳಲ್ಲಿ ಒಂದಾಗಿದ್ದು, ದೆಹಲಿಯ ದ್ವಾರಕಾ ಪ್ರದೇಶದಲ್ಲಿ 8.9 ಲಕ್ಷ ಚದರ ಮೀ. ಸ್ಥಳದಲ್ಲಿ ನಿರ್ಮಾಣಗೊಂಡಿದೆ. ಇದರಲ್ಲಿ 1.8 ಲಕ್ಷ ಚದರ ಮೀಟರ್ ಸ್ಥಳದಲ್ಲಿ ಕನ್ವೆನ್ಷನ್ ಸೆಂಟರ್ ನಿರ್ಮಾಣ ಮಾಡಲಾಗಿದೆ. 13 ಸಭಾ ಕೋಣೆಗಳನ್ನು 8 ಮಹಡಿಗಳಲ್ಲಿ ಕಟ್ಟಲಾಗಿದೆ. 15 ಸಭಾಂಗಣಗಳು ಇವೆ. ಒಟ್ಟಾರೆ ಸೆಂಟರ್‌ನಲ್ಲಿ 11 ಸಾವಿರ ಜನರು ಆಸೀನರಾಗಬಹುದಾಗಿದೆ.
ರಜೆ ಕಳೆಯಲು ಬಂದಿದ್ದ ಯೋಧನ ಅಪಹರಿಸಿ ಹತ್ಯೆ
ನವದೆಹಲಿ: ರಜೆ ಕಳೆಯಲು ಮಣಿಪುರದ (Manipur) ತನ್ನ ಗ್ರಾಮಕ್ಕೆ ತೆರಳಿದ್ದ ಯೋಧನೊಬ್ಬರನ್ನು ಅಪಹರಿಸಿ ಹತ್ಯೆ ಮಾಡಿರುವ ಘಟನೆ ಭಾನುವಾರ ನಡೆದಿದೆ. ಸೆಪೋಯ್ ಸೆರ್ಟೊ ಥಂಗ್‌ಥಂಗ್ ಕೋಮ್ (Sepoy Serto Thangthang Kom) ಮೃತ ಯೋಧ. ಇಂಫಾಲ ಜಿಲ್ಲೆಯ ತಮ್ಮ ಗ್ರಾಮಕ್ಕೆ ಯೋಧ ರಜೆ ಕಳೆಯಲು ತೆರಳಿದ್ದರು. ಶನಿವಾರ ಗ್ರಾಮದಿಂದ ಯೋಧನನ್ನು ಅಪಹರಿಸಲಾಗಿದೆ (abducted). ಭಾನುವಾರ ಬೆಳಿಗ್ಗೆ ಅವರ ಮೃತದೇಶ ಪತ್ತೆಯಾಗಿದೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಕೆಲವು ಶಸ್ತ್ರಸಜ್ಜಿತ ಅಪರಿಚಿತ ವ್ಯಕ್ತಿಗಳು ಯೋಧನನ್ನು ಅಪಹರಿಸಿದ್ದರು. ಮನೆಯ ಅಂಗಳದಲ್ಲಿ ಯೋಧ ತಮ್ಮ 10 ವರ್ಷದ ಪುತ್ರನ ಜತೆ ಕೆಲಸ ಮಾಡುತ್ತಿದ್ದ ವೇಳೆ ಅಲ್ಲಿದ ನುಗ್ಗಿದ ಮೂವರು ವ್ಯಕ್ತಿಗಳು ಅಲ್ಲಿಗೆ ಧಾವಿಸಿ ಕೋಮ್ ತಲೆಗೆ ಪಿಸ್ತೂಲ್ ಅನ್ನು ತೋರಿಸಿ ಬಿಳಿ ವಾಹನವೊಂದರಲ್ಲಿ ಅಪಹರಿಸಿದರು ಎಂದು ಯೋಧನ ಪುತ್ರ ಪೊಲೀಸರಿಗೆ ಹೇಳಿದರು. ಸೆಪೋಯ್ ಕೋಮ್ ಪತ್ನಿ, ಪುತ್ರಿ ಮತ್ತು ಪುತ್ರನನ್ನು ಅಗಲಿದ್ದಾರೆ.