Asianet Suvarna News Asianet Suvarna News

ಕೃಷಿ ಪತ್ತಿನ ಸೊಸೈಟಿಗೆ ಎಲ್‌ಪಿಜಿ, ಪೆಟ್ರೋಲ್‌ ಡೀಲರ್‌ಶಿಪ್‌: ಸಹಕಾರ ಸಂಘ ಬಲಪಡಿಸಲು ಕೇಂದ್ರದ ಮಹತ್ವದ ನಿರ್ಧಾರ

ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ ಮತ್ತು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್‌ ಪುರಿ ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

primary agricultural credit societies will get priority in allotment of new petrol diesel dealerships ash
Author
First Published Apr 13, 2023, 11:06 AM IST

ನವದೆಹಲಿ (ಏಪ್ರಿಲ್‌ 13, 2023): ದೇಶದ ಸಹಕಾರ ವಲಯಕ್ಕೆ ಇನ್ನಷ್ಟು ಬಲ ತುಂಬಲು ಮುಂದಾಗಿರುವ ಕೇಂದ್ರ ಸರ್ಕಾರ, ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳಿಗೆ ಮುಂಬರುವ ದಿನಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಮತ್ತು ಎಲ್‌ಪಿಜಿ ಡೀಲರ್‌ಶಿಪ್‌ ನೀಡಲು ನಿರ್ಧರಿಸಿದೆ. ಜೊತೆಗೆ ಈಗಾಗಲೇ ಸಗಟು ಪೆಟ್ರೋಲ್‌/ ಡೀಸೆಲ್‌ ಸಗಟು ಗುತ್ತಿಗೆ ಹೊಂದಿರುವ ಸೊಸೈಟಿಗಳಿಗೆ ಅದನ್ನು ಚಿಲ್ಲರೆ ಮಾರಾಟ ಮಳಿಗೆಗಳಾಗಿ ಬದಲಾಯಿಸುವ ಒಂದು ಬಾರಿಯ ಅವಕಾಶವನ್ನೂ ನೀಡಲು ನಿರ್ಧರಿಸಿದೆ.

ಬುಧವಾರ ಕೇಂದ್ರ ಸಹಕಾರ ಸಚಿವ ಅಮಿತ್‌ ಶಾ (Union Co-operative Minister Amit Shah) ಮತ್ತು ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್‌ ಪುರಿ (Petroleum and Natural Gas Minister Hardeep Singh Puri) ನಡುವೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದಲ್ಲದೆ ಸಕ್ಕರೆ (Sugar) ಸಹಕಾರ ಮಿಲ್‌ಗಳಿಗೆ ಎಥೆನಾಲ್‌ (Ethanol) ಮಿಶ್ರಣ ಯೋಜನೆಯಡಿ, ಎಥೆನಾಲ್‌ ಮಾರಾಟ ಮಾಡುವ ಅನುಮತಿಯನ್ನು ಆದ್ಯತೆಯ ಮೇರೆಗೆ ನೀಡಲಾಗುವುದು. ಅಲ್ಲದೆ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳು (Primary Agricultural Credit Societies) ತಮ್ಮದೇ ಆದ ಚಿಲ್ಲರೆ ಮಾರಾಟ ಮಳಿಗೆ (Retail Outlets) ತೆಗೆಯಲೂ ಅನುಮತಿ ನೀಡಲಾಗುವುದು.

ಇದನ್ನು ಓದಿ: ಮಾರ್ಚ್‌ನಲ್ಲಿ ಚಿಲ್ಲರೆ ಹಣದುಬ್ಬರ 15 ತಿಂಗಳ ಕನಿಷ್ಠಕ್ಕೆ, ಒಂದೇ ವರ್ಷದಲ್ಲಿ ಸಿಲಿಂಡರ್‌ ಬೆಲೆ 150 ರೂ. ಏರಿಕೆ!

ಈ ಯೋಜನೆಗಳ ಮೂಲಕ ದೇಶದ 1 ಲಕ್ಷ ಪ್ರಾಥಮಿಕ ಕೃಷಿ ಪತ್ತಿನ ಸೊಸೈಟಿಗಳನ್ನು ಗ್ರಾಮೀಣ ಆರ್ಥಿಕಾಭಿವೃದ್ಧಿ ಕೇಂದ್ರಗಳನ್ನಾಗಿ ಪರಿವರ್ತಿಸುವ ಮತ್ತು 25 ವಿವಿಧ ಯೋಜನೆಗಳ ಮೂಲಕ 13 ಕೋಟಿ ರೈತರ ಆದಾಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಉಭಯ ಸಚಿವಾಲಯಗಳು ತಿಳಿಸಿವೆ.
 

ಇದನ್ನೂ ಓದಿ: ಜಗತ್ತಿನ ಸಿರಿವಂತರು ಬಡವರಾದ್ರೆ ಹೇಗೆ ಕಾಣ್ತಾರೆ ನೋಡಿ..!

Follow Us:
Download App:
  • android
  • ios