ಲಂಡನ್‌(ಜು.01): ವಿಶ್ವದ ಅತಿದೊಡ್ಡ ಉಕ್ಕು ಕಂಪನಿಯ ಮಾಲಿಕ ಲಕ್ಷ್ಮಿ ಮಿತ್ತಲ್‌ ಅವರ ಸೋದರ ಪ್ರಮೋದ್‌ ಮಿತ್ತಲ್‌ ಅವರು ದಿವಾಳಿಯಾಗಿದ್ದಾರೆ ಎಂದು ಸ್ಥಳೀಯ ನ್ಯಾಯಾಲವಯೊಂದು ಘೋಷಿಸಿದೆ.

ಪ್ರಮೋದ್‌ ಮಿತ್ತಲ್‌ ಅವರು ಬ್ರಿಟನ್‌ನಲ್ಲಿ ಮಾಡಿದ 130 ಪೌಂಡ್‌ ಮಿಲಿಯನ್‌(1200 ಕೋಟಿ ರು.) ಸಾಲಕ್ಕೆ ಸಂಬಂಧಿಸಿದಂತೆ ದಿವಾಳಿಯಿಂದ ರಕ್ಷಣೆ ಕೋರಿ ಈ ಅರ್ಜಿ ಸಲ್ಲಿಸಿದ್ದರು. ಬೋಸ್ನಿಯಾದಲ್ಲೇ ಅತಿಹೆಚ್ಚು ಕಲ್ಲಿದ್ದಲು ಉತ್ಪಾದನೆ ಮಾಡುವ ಗ್ಲೋಬಲ್‌ ಇಸ್ಪಾತ್‌ ಕೊಕ್‌ಸ್ನಾ ಇಂಡಸ್ಟ್ರಿಜಾ ಲುಕವ್ಯಾಕ್‌(ಜಿಐಕೆಐಎಲ್‌) ಕಂಪನಿಯ ನೇತೃತ್ವವನ್ನು ಮಿತ್ತಲ್‌ ವಹಿಸಿಕೊಂಡಿದ್ದರು.

ಮಲ್ಯ ಸೇರಿ ಟಾಪ್‌ 30 ದೊಡ್ಡ ಸುಸ್ತಿದಾರರ ಹೆಸರು ಬಹಿರಂಗ!

ಈ ಅವಧಿಯಲ್ಲಿ 2006ರಲ್ಲಿ ಜಿಐಕೆಐಎಲ್‌ ಪಡೆದ ಸಾಲಕ್ಕೆ ಪ್ರಮೋದ್‌ ಮಿತ್ತಲ್‌ ಖಾತರಿ ನೀಡಿದ್ದರು. ಇದೇ ಕಾರಣದಿಂದಾಗಿ ಇದೀಗ ಪ್ರಮೋದ್‌ ಮಿತ್ತಲ್‌ ಅವರು ದಿವಾಳಿಯಾಗಿದ್ದಾರೆ ಎಂದು ಹೇಳಲಾಗಿದೆ.