Asianet Suvarna News Asianet Suvarna News

ಒಂದು ಲಕ್ಷ ಠೇವಣಿಗೆ 50 ಸಾವಿರ ರೂ. ಬಡ್ಡಿ: ಎಲ್ಲಕ್ಕಿಂತ ಬೆಸ್ಟ್‌ ಅಂಚೆ ಇಲಾಖೆಯ ಎಫ್‌ಡಿ!

ಒಂದು ಲಕ್ಷ ರೂಪಾಯಿ ಠೇವಣಿ ಇಟ್ಟರೆ ನಿಮಗೆ ಸಿಗಲಿದೆ  50 ಸಾವಿರ ರೂ. ಬಡ್ಡಿ: ಅಂಚೆ ಇಲಾಖೆಯ ಭದ್ರತಾ ಠೇವಣಿ ಮಾಹಿತಿ ಇಲ್ಲಿದೆ ನೋಡಿ.
 

Post office FD interest rate ranges between 6.9  to 7.5 percentage for tenures of 1 year to 5 years
Author
First Published Oct 4, 2024, 2:20 PM IST | Last Updated Oct 4, 2024, 2:20 PM IST

ಒಂದಿಷ್ಟು ಹಣವನ್ನು ಭದ್ರತಾ ಠೇವಣಿ (Fixed Deposit) ಇಟ್ಟು, ಅತಿ ಹೆಚ್ಚು ಬಡ್ಡಿ ಪಡೆಯುವ ಜೊತೆಗೆ, ಅದೇ ರೀತಿಯ ವಿಶ್ವಾಸಾರ್ಹವಾಗಿರುವ ಜಾಗವನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ ಬ್ಯಾಂಕ್‌ಗಳಿಗಿಂತಲೂ ಅತಿ ಹೆಚ್ಚು ಬಡ್ಡಿ ಸಿಗುವುದು ಎಂದು ಅದು ಅಂಚೆ ಕಚೇರಿ ಮಾತ್ರ.  ಕೆಲವು ಸಹಕಾರಿ ಸಂಸ್ಥೆಗಳು ಬಡ್ಡಿಯನ್ನು ಹೆಚ್ಚಿಗೆ ನೀಡಿದರೂ ಅದರಲ್ಲಿ ಹೂಡಿಕೆ ಮಾಡುವುದು ಅಷ್ಟೇ ತೊಂದರೆ ಇದೆ. ಮೋಸ, ವಂಚನೆಗಳ ಹೆಚ್ಚಾಗುತ್ತವೆ. ಯಾವಾಗ ಈ ಸಂಸ್ಥೆಗಳು ಜಾಗ ಖಾಲಿ ಮಾಡಿಕೊಂಡು ಹೋಗುತ್ತದೆ ಎನ್ನುವುದನ್ನು ಹೇಳುವುದೇ ಕಷ್ಟ. ಆದ್ದರಿಂದ ನಿಮ್ಮ ಹಣ ಸಂಪೂರ್ಣ ಸುರಕ್ಷಿತವಾಗಿ ಇರಬೇಕು ಜೊತೆಗೆ ಹೆಚ್ಚಿಗೆ ಬಡ್ಡಿ ಸಿಗಬೇಕು ಎಂದರೆ, ಅಂಚೆ ಕಚೇರಿಗಿಂತಲೂ ಮತ್ತೊಂದು ಜಾಗವಿಲ್ಲ.

ಹಾಗಿದ್ದರೆ ನೀವು ಎಫ್‌ಡಿ ಇಟ್ಟರೆ ಎಷ್ಟು ಹಣ ನಿಮಗೆ ಸಿಗುತ್ತದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಅಷ್ಟಕ್ಕೂ ಅಂಚೆ ಕಚೇರಿಯಲ್ಲಿ ಹಲವಾರು ಯೋಜನೆಗಳು ಇವೆ. ಆದರೆ ಇಲ್ಲಿ ನಿಮಗೆ ಸಾಮಾನ್ಯ ಬಡ್ಡಿಯ ಬಗ್ಗೆ ಮಾಹಿತಿ ನೀಡಲಾಗಿದೆ. ಅಂಚೆ ಕಚೇರಿಯಲ್ಲಿ ನೀವು ಒಂದು ವರ್ಷದಿಂದ ಐದು ವರ್ಷಗಳವರೆಗೆ ಎಫ್‌ಡಿ ಇಡಬಹುದು. ಇದಕ್ಕೆ ಆದಾಯ ತೆರಿಗೆ ಕಾಯ್ದೆಯ  80C ಅಡಿಯಲ್ಲಿ ತೆರಿಗೆ ವಿನಾಯಿತಿ ಕೂಡಾ ಇರುತ್ತದೆ. ಹಾಗಿದ್ದರೆ ನೀವು ಎಷ್ಟಿಟ್ಟರೆ ನಿಮಗೆ ಎಷ್ಟು ಹಣ ಸಿಗುತ್ತದೆ ಎನ್ನುವುದನ್ನು ನೋಡೋಣ.

ಪೋಸ್ಟ್ ಆಫೀಸ್‌ಲ್ಲಿ 500 ರೂ ಉಳಿತಾಯ ಮಾಡಿ 30 ಲಕ್ಷ ರೂಪಾಯಿ ಪಡೆಯಿರಿ, ಸುರಕ್ಷಾ ಯೋಜನೆ!
  
1 ವರ್ಷಕ್ಕೆ ನಿಮಗೆ ಶೇಕಡಾ 6.90, ಎರಡು ವರ್ಷಕ್ಕೆ ಶೇಕಡಾ 7, ಮೂರು ವರ್ಷಕ್ಕೆ  7.10% ಹಾಗೂ ಐದು ವರ್ಷಕ್ಕೆ  7.50% ಬಡ್ಡಿ ಸಿಗುತ್ತದೆ. ಇದನ್ನು ಗಮನಿಸಿದರೆ,   ಐದು ವರ್ಷಗಳವರೆಗೆ ಹೂಡಿಕೆ ಮಾಡಿದರೆ ನಿಮಗೆ ಎಲ್ಲಕ್ಕಿಂತಲೂ ಹೆಚ್ಚಿನ ಬಡ್ಡಿದರ ಅಂದರೆ 7.5% ಬಡ್ಡಿ ಸಿಗುತ್ತದೆ. ಇದು ಎಲ್ಲಾ ಬ್ಯಾಂಕ್‌ಗಳಿಗಿಂತಲೂ ಅಧಿಕ ದರ ಬಡ್ಡಿಯಾಗಿದೆ. ಅಂದರೆ, ನೀವು ಒಂದು ಲಕ್ಷ ರೂಪಾಯಿಗಳನ್ನು ಐದು ವರ್ಷಗಳವರೆಗೆ ಎಫ್‌ಡಿ ಇಟ್ಟರೆ, ನಿಮಗೆ ಒಂದು ಲಕ್ಷದ ಜೊತೆಗೆ ಹೆಚ್ಚುವರಿಯಾಗಿ 44,995 ರೂಪಾಯಿಗಳು ಸಿಗುತ್ತವೆ. ಒಂದು ವೇಳೆ ನೀವು ಐದು ಲಕ್ಷ ರೂಪಾಯಿ ಐದು ವರ್ಷಕ್ಕೆ ಇಟ್ಟಿದ್ದೇ ಆದಲ್ಲಿ ನಿಮಗೆ 2 ಲಕ್ಷದ 26 ಸಾವಿರದ 647 ರೂಪಾಯಿ ಬಡ್ಡಿ ಸಿಗುತ್ತದೆ. ಅಂದರೆ ನಿಮ್ಮ ಕೈಗೆ ಐದು ವರ್ಷಕ್ಕೆ ₹7,26,647 ಸಿಗುತ್ತದೆ. 

ಐದು ಲಕ್ಷದಷ್ಟು ಹಣ ಇಡುವುದು ಕಷ್ಟ ಎಂದಾದರೆ, ಮೂರು ವರ್ಷದ ಅವಧಿಗೆ ನೀವು ಒಂದು ಲಕ್ಷ ರೂಪಾಯಿ ಎಫ್‌ಡಿ ಇಟ್ಟರೆ ನಿಮಗೆ  ₹ 1,23,661 ಹಾಗೂ ಐದು ವರ್ಷಕ್ಕೆ ₹ 1,45,329 ಸಿಗುತ್ತದೆ. ಎರಡು ಲಕ್ಷ ರೂಪಾಯಿಗಳನ್ನು ಇಟ್ಟರೆ  ಮೂರು ವರ್ಷಕ್ಕೆ ₹ 2,47,322     ಮತ್ತು ಐದು ವರ್ಷಕ್ಕೆ ₹ 2,90,659 ಸಿಗುತ್ತದೆ. ಐದು ಲಕ್ಷ ರೂಪಾಯಿ ಇಟ್ಟರೆ,  ಮೂರು ವರ್ಷಕ್ಕೆ ₹ 6,18,304 ಮತ್ತುಐದು ವರ್ಷಕ್ಕೆ ₹ 7,26,647 ಸಿಗುತ್ತದೆ. ನಿಮ್ಮಲ್ಲಿ ಇನ್ನೂ ಹೆಚ್ಚಿನ ದುಡ್ಡು ಇದ್ದು,  10 ಲಕ್ಷ ರೂಪಾಯಿ ಠೇವಣಿ ಇಟ್ಟರೆ ನಿಮಗೆ  ಐದು ವರ್ಷಕ್ಕೆ  14,53,294 ರೂಪಾಯಿ ಸಿಗುತ್ತದೆ. ಹತ್ತಿರದ ಅಂಚೆ ಕಚೇರಿಯನ್ನು ನೇರವಾಗಿ ಭೇಟಿ ಮಾಡಿದರೆ ಹಲವು ಯೋಜನೆಗಳ ಮಾಹಿತಿ ಪಡೆದುಕೊಳ್ಳಬಹುದು. 

21 ವರ್ಷಕ್ಕೆ 71 ಲಕ್ಷ ರೂಪಾಯಿ! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಹೇಗೆ?
 

Latest Videos
Follow Us:
Download App:
  • android
  • ios