Asianet Suvarna News Asianet Suvarna News

Post Office Scheme: ಈ ಯೋಜನೆಯಲ್ಲಿ ದಿನಕ್ಕೆ ಕೇವಲ 70ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ 1.50ಲಕ್ಷ ರೂ.!

ಮಕ್ಕಳ ಭವಿಷ್ಯದ ಭದ್ರತೆಗೆ ಎಲ್ಲಿ ಹೂಡಿಕೆ ಮಾಡಬೇಕೆಂದು ತಿಳಿಯದೆ ತಲೆಕೆಡಿಸಿಕೊಂಡಿರುವ ಪೋಷಕರು ಅಂಚೆ ಇಲಾಖೆಯ ಈ ಯೋಜನೆ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಈ ಖಾತೆಯಲ್ಲಿ ತಿಂಗಳಿಗೆ ನಿರ್ದಿಷ್ಟ ಮೊತ್ತದ ಹಣ ಠೇವಣಿಯಿಟ್ಟರೆ ಸಾಕು, ಉತ್ತಮ ರಿಟರ್ನ್ಸ್ ಸಿಗುವುದು ಪಕ್ಕಾ. 

Post Office Savings Scheme Deposit Rs 70 Daily to Get Rs 1.5 Lakh at Maturity
Author
Bangalore, First Published May 6, 2022, 4:53 PM IST

Business Desk:ಕಾರು, ಮನೆ ಖರೀದಿ, ಮಕ್ಕಳ ವಿದ್ಯಾಭ್ಯಾಸ, ನಿವೃತ್ತಿ ಜೀವನಕ್ಕೆ ದುಡಿದ ಹಣವನ್ನು ಉಳಿತಾಯ ಮತ್ತು ಹೂಡಿಕೆ ಮಾಡಲು ಹತ್ತಾರು ಕಾರಣಗಳಿರುತ್ತವೆ. ಆದ್ರೆ ಉಳಿತಾಯ ಮಾಡುವ ಮುನ್ನ ಎಲ್ಲಿ ಮಾಡಬೇಕು? ಯಾವ ಯೋಜನೆ ಬೆಸ್ಟ್? ಎಷ್ಟು ವರ್ಷದ ಅವಧಿ? ಬಡ್ಡಿದರ ಎಷ್ಟು? ಹೀಗೆ ಹತ್ತಾರು ಸಂದೇಹಗಳು ಕಾಡುವುದು ಸಹಜ. ಅಧಿಕ ಬಡ್ಡಿದರದ ಆಸೆಗೆ ಬಿದ್ದು ಕಷ್ಟಪಟ್ಟು ದುಡಿದ ಹಣವನ್ನು ಕಳೆದುಕೊಂಡವರ ಸಂಖ್ಯೆಯೇನು ಕಡಿಮೆಯಿಲ್ಲ. ಹೀಗಿರುವಾಗ ಹಣಕ್ಕೆ ಸುರಕ್ಷತೆ ನೀಡುವ ಸಂಸ್ಥೆಯಲ್ಲಿ ಹೂಡಿಕೆ ಮಾಡುವುದು ಬೆಸ್ಟ್. ಈ ವಿಚಾರದಲ್ಲಿ ಭಾರತೀಯರಿಗೆ ಅಚ್ಚುಮೆಚ್ಚಿನ ಸಂಸ್ಥೆಯೆಂದ್ರೆ ಅದು ಅಂಚೆಕಚೇರಿ.

ಭಾರತೀಯ ಮಧ್ಯಮ ವರ್ಗದ ಜನರು ಉತ್ತಮ ರಿಟರ್ನ್ಸ್ ನೀಡುವ ಹಾಗೂ ಸುರಕ್ಷತೆ ಒದಗಿಸಬಲ್ಲ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುತ್ತಾರೆ. ಹೀಗಾಗಿ ಮಧ್ಯಮ ವರ್ಗದ ಜನರು ಹೂಡಿಕೆಗೆ ಮೊದಲು ಆಯ್ಕೆ ಮಾಡುವುದು ಅಂಚೆ ಇಲಾಖೆಯ ಯೋಜನೆಗಳನ್ನು. ಅಂಚೆ ಇಲಾಖೆ ಅನೇಕ ವರ್ಗದ, ವಯೋಮಾನದ ಜನರಿಗೆ ವಿವಿಧ ಉಳಿತಾಯ ಯೋಜನೆಗಳನ್ನು ಹೊಂದಿದೆ. ಆದ್ರೆ ಎಲ್ಲ ವರ್ಗದವರಿಗೂ ಅನ್ವಯಿಸಬಲ್ಲ ಉತ್ತಮ ರಿಟರ್ನ್ಸ್ ನೀಡುವ ಯೋಜನೆಯೆಂದ್ರೆ ಅದು ರಿಕರಿಂಗ್ ಡೆಫಾಸಿಟ್ (ಆರ್ ಡಿ). 5 ವರ್ಷಗಳ ಅವಧಿಯ ಈ ಯೋಜನೆಯ ಮುಖ್ಯ ಆಕರ್ಷಣೆಯೆಂದ್ರೆ ನೀವು ನಿಮ್ ಮಗುವಿನ ಹೆಸರಿನಲ್ಲಿ ಕೂಡ ಈ ಖಾತೆ ತೆರೆಯಬಹುದು. ಆ ಮೂಲಕ ಮಗುವಿನ ಭವಿಷ್ಯಕ್ಕೆ ಭದ್ರತೆ ಒದಗಿಸಬಹುದು. 

Post Office Bal Jeevan Bhima Poliy: ಮಕ್ಕಳ ಭವಿಷ್ಯಕ್ಕೆ ಪಡೆಯಲೇಬೇಕಾದ ವಿಮೆ

ಮಕ್ಕಳ ಹೆಸರಲ್ಲಿ ಖಾತೆ ತೆರೆಯೋದು ಹೇಗೆ?
ಪೋಷಕರು ಲೀಗಲ್ ಗಾರ್ಡಿಯನ್ ಆಗಿ ಮಗುವಿನ ಹೆಸರಲ್ಲಿ ಅಂಚೆ ಕಚೇರಿಯಲ್ಲಿ ಆರ್ ಡಿ ಖಾತೆ ತೆರೆಯಬಹುದು. ಈ ಖಾತೆಯ ಮೆಚ್ಯುರಿಟಿ ಅವಧಿ 5 ವರ್ಷಗಳು. 

ಉತ್ತಮ ರಿಟರ್ನ್ಸ್ ಪಡೆಯಲು ಹೀಗೆ ಮಾಡಿ
ಮಕ್ಕಳ ಭವಿಷ್ಯಕ್ಕೆ ಒಂದಿಷ್ಟು ಕೂಡಿಡುವ ಆಲೋಚನೆಯಲ್ಲಿರುವ ಪೋಷಕರಿಗೆ ಅಂಚೆ ಇಲಾಖೆ ಆರ್ ಡಿ ಖಾತೆ ಉತ್ತಮ ಆಯ್ಕೆ. ಈ ಖಾತೆಯಲ್ಲಿರುವ ಹಣಕ್ಕೆ ಉತ್ತಮ ಬಡ್ಡಿ ಸಿಗುವ ಜೊತೆಗೆ ಭದ್ರತೆಯೂ ಇರುವ ಕಾರಣ ಯಾವುದೇ ಚಿಂತೆಯಿಲ್ಲದೆ ಹೂಡಿಕೆ ಮಾಡಬಹುದು. ಮಗುವಿನ ಹೆಸರಲ್ಲಿ ಆರ್ ಡಿಯಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ಸ್ ಪಡೆಯಲು ನೀವು ದಿನಕ್ಕೆ ಕೇವಲ 70ರೂ. ಠೇವಣಿಯಿಟ್ಟರೆ ಸಾಕು. ಅಂದ್ರೆ ತಿಂಗಳಿಗೆ 2,100 ರೂ. ಐದು ವರ್ಷ ಮುಗಿದ ಬಳಿಕ ಈ ಖಾತೆಯಲ್ಲಿ 1,26,000ರೂ. ಉಳಿತಾಯವಾಗಿರುತ್ತದೆ. ಅಂಚೆ ಇಲಾಖೆ ಆರ್ ಡಿ ಖಾತೆಯಲ್ಲಿರುವ ಹಣಕ್ಕೆ 2020ರ ಏಪ್ರಿಲ್ ನಿಂದ ಶೇ.5.8 ಬಡ್ಡಿದರ ನೀಡಲಾಗುತ್ತಿದೆ. ಹೀಗಾಗಿ ಐದು ವರ್ಷದ ಬಳಿಕ ಬಡ್ಡಿ ಸೇರಿಸಿ ನಿಮಗೆ ಅಂದಾಜು 1,50,000ರೂ. ಸಿಗುತ್ತದೆ. 

ಅರ್ಹತೆ: ಯಾವುದೇ ಭಾರತೀಯ ಒಂದು ಪ್ರತ್ಯೇಕ ಅಥವಾ ಜಂಟಿ ಆರ್ ಡಿ ಖಾತೆ ತೆರೆಯಬಹುದು. ಅಲ್ಲದೆ, ಅಪ್ರಾಪ್ತರ ಹೆಸರಿನಲ್ಲಿ ಅವರ ಪೋಷಕರು ಖಾತೆ ತೆರೆಯಲು ಅವಕಾಶವಿದೆ. ಹಾಗೆಯೇ 10 ವರ್ಷ ಮೇಲ್ಪಟ್ಟ ಅಪ್ರಾಪ್ತರಿಗೆ ಅವರ ಹೆಸರಿನಲ್ಲೇ ಆರ್ ಡಿ ಖಾತೆ ತೆರೆಯಲು ಅವಕಾಶವಿದೆ. 

Aadhaar Card ಸುರಕ್ಷಿತವಾಗಿಡಲು ಹೀಗೆ ಮಾಡಿ

ಕನಿಷ್ಠ ಠೇವಣಿ ಎಷ್ಟು?
ಆರ್ ಡಿ ಖಾತೆಗೆ ತಿಂಗಳಿಗೆ ಕನಿಷ್ಠ 100ರೂ. ಠೇವಣಿ ಇಡಬಹುದು. ಹಾಗೆಯೇ ಈ ಖಾತೆಗೆ ತಿಂಗಳಿಗೆ ಗರಿಷ್ಠ ಠೇವಣಿ ಮಿತಿ ವಿಧಿಸಿಲ್ಲ. 

ಅವಧಿಗೂ ಮುನ್ನ ಖಾತೆ ಕ್ಲೋಸ್ ಮಾಡಬಹುದಾ?
ಆರ್ ಡಿ ಖಾತೆಯಲ್ಲಿ ನಿರಂತರ ಠೇವಣಿಯಿಡುತ್ತ ಬಂದಿದ್ದರೆ, ಮೂರು ವರ್ಷಗಳ ಬಳಿಕ ಅವಧಿಗೂ ಮುನ್ನ ಈ ಖಾತೆಯನ್ನು ಕ್ಲೋಸ್ ಮಾಡಬಹುದು. ಹಾಗೆಯೇ ಈ ಖಾತೆಯನ್ನು ನೀವು ಬಯಸಿದರೆ ಮತ್ತೆ 5 ವರ್ಷಗಳ ಅವಧಿಗೆ ವಿಸ್ತರಿಸುವ ಅವಕಾಶವೂ ಇದೆ. 


 

Follow Us:
Download App:
  • android
  • ios