Asianet Suvarna News Asianet Suvarna News

ಅಂಚೆ ಇಲಾಖೆ ಉಳಿತಾಯ ಖಾತೆ ಗ್ರಾಹಕರಿಗೆ ಗುಡ್‌ ನ್ಯೂಸ್!

 ಪೋಸ್ಟ್‌ ಆಫೀಸ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಕನಿಷ್ಠ ಹಣವನ್ನೂ ನಿರ್ವಹಣೆ ಮಾಡಿರದ ಖಾತೆ| ಕೇಂದ್ರ ಸರ್ಕಾರ ಸಮಾಧಾನದ ಸುದ್ದಿ| ಉಳಿತಾಯ ಖಾತೆಯ ಕನಿಷ್ಠ ಬ್ಯಾಲೆನ್ಸ್‌ ದಂಡ 50 ರು. ಗೆ ಇಳಿಕೆ

Post Office Savings Account Check New Penalty Rules For Non Maintenance of Minimum Balance pod
Author
Bangalore, First Published Apr 17, 2021, 12:45 PM IST

ನವದೆಹಲಿ(ಏ.17): ಪೋಸ್ಟ್‌ ಆಫೀಸ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದು, ಕನಿಷ್ಠ ಹಣವನ್ನೂ ನಿರ್ವಹಣೆ ಮಾಡಿರದ ಖಾತೆದಾರರಿಗೆ ಕೇಂದ್ರ ಸರ್ಕಾರ ಸಮಾಧಾನದ ಸುದ್ದಿ ನೀಡಿದೆ.

ಇಂಥ ಖಾತೆಗಳಿಗೆ ವಿಧಿಸುತ್ತಿದ್ದ ದಂಡವನ್ನು 100 ರು. ನಿಂದ 50 ರು. (ಜಿಎಸ್‌ಟಿ ಸೇರಿ)ಗೆ ತಗ್ಗಿಸಲಾಗಿದೆ ಎಂದು ಹಣಕಾಸು ಸಚಿವಾಲಯ ಶುಕ್ರವಾರ ತಿಳಿಸಿದೆ.

ಪೋಸ್ಟ್‌ ಆಫೀಸ್‌ ಉಳಿತಾಯ ಖಾತೆಯಲ್ಲಿ ಕನಿಷ್ಠ 500 ರು. ಇರಲೇಬೇಕು. ಇಲ್ಲದಿದ್ದರೆ ಪ್ರತಿ ತಿಂಗಳು ದಂಡ ವಿಧಿಸಲಾಗುತ್ತದೆ. ಒಂದು ವೇಳೆ 500 ರು. ಗಿಂತ ಕಡಿಮೆ ಇದ್ದ ಖಾತೆಯಲ್ಲಿ ಇರುವ ಹಣವನ್ನೇ ದಂಡವಾಗಿ ಮುರಿದುಕೊಳ್ಳುತ್ತಾ ಖಾತೆಯ ಉಳಿತಾಯ ಶೂನ್ಯಕ್ಕೆ ಬಂದರೆ ಅಂಥ ಖಾತೆಗಳು ಸ್ವಯಂ ರದ್ದಾಗಲಿವೆ.

ಅಲ್ಲದೆ ತಿಂಗಳಿಗೆ ನಾಲ್ಕು ಬಾರಿಗಿಂತ ಹೆಚ್ಚು ಬಾರಿ ಹಣ ವಿತ್‌ ಡ್ರಾ ಮಾಡಿದಲ್ಲಿ ಪ್ರತಿ ವಿತ್‌ ಡ್ರಾಗೆ 25 ರು. ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿಸಿದೆ.

Follow Us:
Download App:
  • android
  • ios