ಪಿಎನ್‌ಬಿ ಹಗರಣ: ಉಷಾಗೆ ಜಾಮೀನು!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 20, Aug 2018, 6:55 PM IST
PNB fraud: CBI court grants bail to ex-MD Usha Ananthasubramanian
Highlights

ಬಹುಕೋಟಿ ಪಿಎನ್‌ಬಿ ಹಗರಣ! ಉಷಾ ಅನಂತಸುಬ್ರಹ್ಮಣ್ಯನ್ ಗೆ ಜಾಮೀನು! ಜಾಮೀನು ಮಂಜೂರು ಮಾಡಿದ ಸಿಬಿಐ ನ್ಯಾಯಾಧೀಶ! ಕಳೆದ ವಾರವಷ್ಟೇ ಸೇವೆಯಿಂದ ವಜಾಗೊಂಡಿದ್ದ ಉಷಾ

ನವದೆಹಲಿ(ಆ.20): ಬಹುಕೋಟಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ, ಅಲಹಬಾದ್ ಬ್ಯಾಂಕ್ ಮಾಜಿ ವ್ಯವಸ್ಥಾಪಕ ನಿರ್ದೇಶಕಿ ಉಷಾ ಅನಂತಸುಬ್ರಹ್ಮಣ್ಯನ್ ಅವರಿಗೆ ಸಿಬಿಐ ಕೋರ್ಟ್ ಜಾಮೀನು ಮಂಜೂರು ಮಾಡಿದೆ. 

ಜಾಮೀನು ಕೋರಿ ಉಷಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಿಬಿಐ ವಿಶೇಷ ಕೋರ್ಟ್ ನ್ಯಾಯಾಧೀಶ ಜೆಸಿ ಜಗದಾಳೆ,14 ಸಾವಿರ ಕೋಟಿ ರೂ. ಪಿಎನ್ ಬಿ ಹಗರಣದ ಆರೋಪಿಗೆ ಜಾಮೀನು ಮಂಜೂರು ಮಾಡಿದ್ದಾರೆ.

ಮೂರು ತಿಂಗಳ ಹಿಂದಷ್ಟೇ ಉಷಾ ಅವರನ್ನು ಅಲಹಬಾದ್ ಬ್ಯಾಂಕ್ ಮತ್ತು ಪಿಎನ್ ಬಿಯ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಲಾಗಿತ್ತು. ಆದರೆ ಬ್ಯಾಂಕ್ ಉದ್ಯೋಗಿಯಾಗಿ ಮುಂದುವರೆದಿದ್ದ ಉಷಾ ಅವರನ್ನು ಕೇಂದ್ರ ಸರ್ಕಾರ ಕಳೆದ ವಾರ ಸೇವೆಯಿಂದಲೇ ವಜಾಗೊಳಿಸಿತ್ತು.

ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದತೆ ಕಳೆದ ಮೇ ತಿಂಗಳಲ್ಲಿ ಸಿಬಿಐ ಸಲ್ಲಿಸಿದ್ದ ಚಾರ್ಜ್​ಶೀಟ್​ನಲ್ಲಿ, ವಜ್ರ ವ್ಯಾಪಾರಿ ನೀರವ್ ಮೋದಿ, ಮೆಹುಲ್​ ಚೋಕ್ಸಿ ಹಾಗೂ ಉಷಾ ಸುಬ್ರಹ್ಮಣ್ಯನ್ ಸೇರಿದಂತೆ ಮೂವರು ಅಧಿಕಾರಿಗಳ ಹೆಸರಿದೆ.

loader