ನಿಮ್ಮ ಗಮನಕ್ಕೆ: ಸೀಜ್ ಮಾಡಿದ ಮಲ್ಯ ಆಸ್ತಿ ಏನ್ಮಾಡಬೇಕೆಂದು ಹೇಳಿದ ಕೋರ್ಟ್!
ಜಪ್ತಿ ಮಾಡಿದ ವಿಜಯ್ ಮಲ್ಯ ಆಸ್ತಿ ಏನಾಗಲಿದೆ?| ನ್ಯಾಯಾಲಯ ನೀಡಿದ ಆದೇಶದಿಂದ ಬ್ಯಾಂಕ್‌ಗಳು ಫುಲ್ ಖುಷ್| ಜಪ್ತಿ ಮಾಡಿರುವ ವಿಜಯ್ ಮಲ್ಯ ಆಸ್ತಿಯನ್ನು ಹರಾಜಿಗೆ ಹಾಕುವಂತೆ ಪಿಎಂಎಲ್‌ಎ ಕೋರ್ಟ್ ಆದೇಶ| ಹರಾಜಿನಿಂದ ಬಂದ ಹಣದಲ್ಲಿ ಸಾಲ ವಸೂಲಿ ಮಾಡುವಂತೆ ಬ್ಯಾಂಕ್‌ಗಳಿಗೆ ಆದೇಶ| ವಿಜಯ್ ಮಲ್ಯ ಅವರ 13 ಸಾವಿರ ಕೋಟಿ ರೂ. ಆಸ್ತಿ ಮುಟ್ಟುಗೋಲು| ಜನವರಿ 18ರ ಬಳಿಕವೇ ಆಸ್ತಿ ಹರಾಜು ಪ್ರಕ್ರಿಯೆ ನಡೆಸುವಂತೆ ಬ್ಯಾಂಕ್‌ಗಳಿಗೆ ಸೂಚನೆ|
ಮುಂಬೈ(ಜ.01): ಬ್ಯಾಂಕ್‌ಗಳಿಗೆ ಸಾವಿರಾರು ಕೋಟಿ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಜಪ್ತಿ ಮಾಡಿರುವ ಆಸ್ತಿಯನ್ನು ಹರಾಜಿಗೆ ಹಾಕುವಂತೆ ಬ್ಯಾಂಕ್‌ಗಳಿಗೆ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಮಲ್ಯ ಅವರ ಜಪ್ತಿ ಮಾಡಿರುವ ಆಸ್ತಿಯನ್ನು ಹರಾಜಿಗೆ ಹಾಕಿ ಅದರಿಂದ ಬರುವ ಹಣದಲ್ಲಿ ಸಾಲ ವಸೂಲಿ ಮಾಡಬೇಕು ಎಂದು ಪಿಎಂಎಲ್‌ಎ ನ್ಯಾಯಾಲಯ ಆದೇಶ ನೀಡಿದೆ.
ಮಲ್ಯ ಸೇರಿ ಟಾಪ್ 30 ದೊಡ್ಡ ಸುಸ್ತಿದಾರರ ಹೆಸರು ಬಹಿರಂಗ!
ಈಗಾಗಲೇ ವಿಜಯ್ ಮಲ್ಯ ಅವರ 13 ಸಾವಿರ ಕೋಟಿ ರೂ. ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್‌ಗಳ ಒಕ್ಕೂಟ ಈ ಆಸ್ತಿಯನ್ನು ಹರಾಜಿಗೆ ಹಾಕಿ ಸಾಲ ವಸೂಲಿ ಮಾಡಿಕೊಳ್ಳಲು ಕೋರ್ಟ್ ಆದೇಶ ಅನುಕೂಲ ಮಾಡಿಕೊಟ್ಟಿದೆ.
ಆದರೆ ಈ ಆದೇಶಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿರುವ ಪಿಎಂಎಲ್‌ಎ ನ್ಯಾಯಾಲಯ, ಜನವರಿ 18ರ ಬಳಿಕವೇ ಆಸ್ತಿ ಹರಾಜು ಪ್ರಕ್ರಿಯೆ ನಡೆಸುವಂತೆ ಬ್ಯಾಂಕ್‌ಗಳಿಗೆ ಸೂಚನೆ ನೀಡಿದೆ.
ಓವಲ್‌ನಲ್ಲಿ ಮಲ್ಯ ಸಾಹೇಬರು: ಇಲ್ಯಾಕೆ ಅಂದ್ರೆ ಏನಂದ್ರು?
ಉದ್ಯಮಿ ವಿಜಯ್ ಮಲ್ಯ ವಿವಿಧ ಬ್ಯಾಂಕ್‌ಗಳಿಗೆ 9 ಸಾವಿರ ಕೋಟಿ ರೂ. ಸಾಲ ಮರುಪಾವತಿಸದೇ ಲಂಡನ್‌ಗೆ ಪರಾರಿಯಾಗಿರುವುದನ್ನು ಇಲ್ಲಿ ಸ್ಮರಿಸಬಹುದು.
ಜನವರಿ 1 ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ