ಯಪ್ಪಾ! ಕುಗ್ಗೆ ಮಾರಾಟ ಮಾಡಿ ದಿನಕ್ಕೆ 9 ಸಾವಿರ ಗಳಿಸ್ತಿದ್ದಾಳೆ ಈ ಮಹಿಳೆ
ಜನರು ಹಣ ಗಳಿಸಲು ಹೊಸ ಹೊಸ ಮಾರ್ಗ ಕಂಡುಕೊಳ್ತಾರೆ. ಈ ಮಹಿಳೆ ಕೂಡ ವಿಚಿತ್ರವಾದ ವಸ್ತು ಮಾರಾಟ ಮಾಡಿ ಆದಾಯ ಹೆಚ್ಚಿಸಿಕೊಳ್ತಿದ್ದಾಳೆ. ಅಸಹ್ಯವಾಗಿರುವ ಈ ವಸ್ತುವನ್ನು ಯಾರು ಖರೀದಿ ಮಾಡ್ತಿದ್ದಾರೆ ಅನ್ನೋದೆ ಯಕ್ಷಪ್ರಶ್ನೆ.
ಆದಾಯ (Income) ಹೆಚ್ಚಿಸಿಕೊಳ್ಳಲು ಜನರು ಏನೇನೆಲ್ಲ ಕೆಲಸ ಮಾಡ್ತಾರೆ. ಫುಲ್ ಟೈಂ ಕೆಲಸದ ಜೊತೆ ಪಾರ್ಟ್ ಟೈಂ ಸಂಪಾದನೆ ಈಗ ಅನಿವಾರ್ಯವಾಗಿದೆ. ಕೆಲವರ ಸಂಪಾದನೆ ಮಾತ್ರ ವಿಚಿತ್ರವಾಗಿರುತ್ತದೆ. ಹೆಚ್ಚು ಕಷ್ಟಪಡದೆ, ಕೊಳಕು ವಸ್ತುಗಳನ್ನು ಮಾರಾಟ ಮಾಡಿಯೇ ಹಣ ಗಳಿಸ್ತಾರೆ. ಈ ಹಿಂದೆ, ಬಳಸಿದ ಸಾಕ್ಸ್, ಒಳ ಉಡುಪುಗಳನ್ನು ಮಾರಾಟ ಮಾಡಿ ಹಣ ಗಳಿಸುತ್ತಿರುವ ಕೆಲ ಹುಡುಗಿಯರು ವೈರಲ್ ಆಗಿದ್ದರು. ಆದ್ರೀಗ ಯುವತಿಯೊಬ್ಬಳ ಮಾರಾಟದ ವಸ್ತು ಇದಕ್ಕಿಂತ ಭಿನ್ನವಾಗಿದೆ. ಜನರು ಇದನ್ನೂ ಖರೀದಿ ಮಾಡ್ತಾರಾ ಎನ್ನುವ ಪ್ರಶ್ನೆ ಕಾಡೋದು ಸಹಜ. ಅಷ್ಟಕ್ಕೂ ಆಕೆ ಏನು ಮಾರಾಟ ಮಾಡಿ ಹಣ ಸಂಪಾದನೆ ಮಾಡ್ತಾಳೆ ಎಂಬುದನ್ನು ನಾವು ಹೇಳ್ತೇವೆ.
ಆಕೆ ಹೆಸರು ಲತಿಶಾ ಜೋನ್ಸ್. ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ (social media influencer). ಟಿಕ್ ಟಾಕ್ (TikTok) ಮೂಲಕ ಪ್ರಸಿದ್ಧಿ ಪಡೆದಿರುವ ಲತಿಶಾ ಜೋನ್ಸ್, ಹೆಚ್ಚಿನ ಆದಾಯಕ್ಕೆ ದಾರಿಯೊಂದನ್ನು ಕಂಡುಕೊಂಡಿದ್ದಾಳೆ. ಅವಳು ಮಾರಾಟ ಮಾಡುವ ವಸ್ತು ನಮಗೆ ಅಸಹ್ಯವೆನಿಸುತ್ತದೆ. ಆದ್ರೆ ಅದನ್ನು ಖರೀದಿ ಮಾಡುವವರು ಇದ್ದಾರೆ ಅನ್ನೋದೇ ವಿಶೇಷ.
ವಾರದಲ್ಲಿ 30 ಗಂಟೆ ಕೆಲಸ ಮಾಡಿ 2 ಕೋಟಿ ಸಂಪಾದನೆ ಮಾಡ್ತಾನೆ ಈತ !
ಕುಗ್ಗೆ ಮಾರಾಟ ಮಾಡಿ ದಿನಕ್ಕೆ ಎಷ್ಟು ಹಣ ಗಳಿಸ್ತಾಳೆ ಲತಿಶಾ ಜೋನ್ಸ್ : ಕೆಲ ದಿನಗಳ ಹಿಂದೆ ಲತಿಶಾ ಜೋನ್ಸ್ ತನ್ನ ಹೆಚ್ಚುವರಿ ಆದಾಯದ ಬಗ್ಗೆ ಟಿಕ್ ಟಾಕ್ ನಲ್ಲಿ ಒಂದು ವಿಡಿಯೋ (Video) ಹಂಚಿಕೊಂಡಿದ್ದಳು. ಅದ್ರ ಪ್ರಕಾರ, ಲತಿಶಾ ಜೋನ್ಸ್ (Latisha Jones) ತನ್ನ ಕಿವಿ ಕುಗ್ಗೆಯನ್ನು ಮಾರಾಟ ಮಾಡುತ್ತಾಳೆ. ಈ ಕೆಲಸ ಅಸಹ್ಯ ಹಾಗೂ ವಿಚಿತ್ರವೆನ್ನಿಸಿದ್ರೂ ಇದ್ರಿಂದ ನನಗೆ ಒಳ್ಳೆಯ ಸಂಪಾದನೆ ಆಗ್ತಿದೆ ಎಂದು ಲತಿಶಾ ಜೋನ್ಸ್ ಹೇಳಿದ್ದಾಳೆ. ಆಕೆ ಕುಗ್ಗೆ ಮಾರಾಟ ಮಾಡಿ ನೂರು, ಇನ್ನೂರು ರೂಪಾಯಿ ಸಂಪಾದನೆ ಮಾಡ್ತಿಲ್ಲ. ದಿನಕ್ಕೆ 9 ಸಾವಿರ ರೂಪಾಯಿವರೆಗೆ ಹಣ ಗಳಿಸ್ತಿದ್ದಾಳೆ.
ಹೇಗೆ ಮಾರಾಟ ಮಾಡ್ತಾಳೆ ಲತಿಶಾ? : ಲತಿಶಾ ಪ್ರಕಾರ, ಆಕೆ ಮೊದಲು ಕಾಟನ್ ಇಯರ್ ಬಡ್ಸ್ (Cotton Ear Buds) ನಿಂದ ಇಯರ್ ವ್ಯಾಕ್ಸ್ (Ear Wax) ತೆಗೆಯುತ್ತಾಳೆ. ನಂತ್ರ ಒಂದು ಕವರ್ ಗೆ ಈ ಇಯರ್ ವ್ಯಾಕ್ ಇರುವ ಇಯರ್ ಬಡ್ ಹಾಕಿ, ಸುಂದರವಾಗಿ ಕವರ್ ಮಾಡ್ತಾಳೆ. ನಂತ್ರ ಗ್ರಾಹಕರಿಗೆ ಇದನ್ನು ಕಳುಹಿಸುತ್ತಾಳೆ. ಇದ್ರ ಬೆಲೆ ಇಯರ್ ವ್ಯಾಕ್ಸ್ ಗಾತ್ರದ ಮೇಲೆ ನಿರ್ಧಾರವಾಗುತ್ತದೆ. ಕುಗ್ಗೆ ಹೆಚ್ಚಿದೆ ಅಂದ್ರೆ ಗ್ರಾಹಕರು ಹೆಚ್ಚು ಹಣವನ್ನು ನೀಡ್ತಾರಂತೆ. ಅನೇಕ ಗ್ರಾಹಕರು ಕುಗ್ಗೆಯನ್ನು ಹಣಕೊಟ್ಟು ಖರೀದಿ ಮಾಡ್ತಾರೆ. ಇದು ವಿಶೇಷ ಹಾಗೂ ಆಸಕ್ತಿಕರ ಎಂದು ಲತಿಶಾ ಜೋನ್ಸ್ ಹೇಳಿದ್ದಾಳೆ.
ಶಾರ್ಕ್ ಟ್ಯಾಂಕ್ ಶೋದಲ್ಲಿ ಪಾಕಿಸ್ತಾನಿ ವ್ಯಕ್ತಿಯ ಬೇಡಿಕೆ ಕೇಳಿ ಬೇಸ್ತು ಬಿದ್ದ ಶಾರ್ಕ್‌ಗಳು!
ಲತಿಶಾ ಜೋನ್ಸ್ ಗೆ ಮಾರ್ಕೆಟಿಂಗ್ ಟ್ರಿಕ್ಸ್ ಗೊತ್ತಿದೆ. ಕೊಳಕಾದ ವಸ್ತುವನ್ನು ಗ್ರಾಹಕರತ್ತ ಆಕರ್ಷಿಸಲು ಹಾಗೂ ಮತ್ತೆ ಮತ್ತೆ ಗ್ರಾಹಕರು ತನ್ನ ಬಳಿ ಬರುವಂತೆ ಮಾಡಲು ಲತಿಶಾ ಒಂದು ಟ್ರಿಕ್ಸ್ ಫಾಲೋ ಮಾಡ್ತಾಳೆ. ಕುಗ್ಗೆ ಪ್ಯಾಕಿಂಗ್ ಮೇಲೆ ಮುತ್ತಿಟ್ಟು ಕಳಿಸ್ತಾಳೆ. ಆಕೆಗೆ ಲಿಪ್ಸ್ಟಿಕ್ ಗುರುತು ಪ್ಯಾಕಿಂಗ್ ಮೇಲಿರುತ್ತದೆ.
ಜಗತ್ತಿನಲ್ಲಿ ಇಂಥ ವಿಚಿತ್ರ ವಸ್ತುಗಳನ್ನು ಮಾರಾಟ ಮಾಡಿ ಹಣ ಸಂಪಾದನೆ ಮಾಡುವವರ ಸಂಖ್ಯೆ ಸಾಕಷ್ಟಿದೆ. ಆದ್ರೆ ಅದನ್ನು ಯಾರು ಖರೀದಿ ಮಾಡ್ತಾರೆ ಎಂಬ ಪ್ರಶ್ನೆಗೆ ಸರಿಯಾದ ಉತ್ತರವಿಲ್ಲ. ಅಡಲ್ಟ್ ಅಪ್ಲಿಕೇಷನ್ನಲ್ಲಿ ಇಂಥ ವಸ್ತುಗಳನ್ನು ಖರೀದಿ ಮಾಡುವವರ ಸಂಖ್ಯೆ ಹೆಚ್ಚಿರುತ್ತದೆ. ಲತಿಶಾ ಎಲ್ಲಿ ಮಾರಾಟ ಮಾಡ್ತೇನೆ ಎಂಬ ಗುಟ್ಟನ್ನು ಬಿಟ್ಟುಕೊಟ್ಟಿಲ್ಲ.